ಬರ್ತ್ ಡೇ ದಿನ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಯಾರಿಗೆ?

Published : Nov 08, 2017, 07:36 PM ISTUpdated : Apr 11, 2018, 12:47 PM IST
ಬರ್ತ್ ಡೇ ದಿನ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಯಾರಿಗೆ?

ಸಾರಾಂಶ

ಅನುಷ್ಕಾ ಶೆಟ್ಟಿ ತೆರೆ ಮೇಲೆ ಹೇಗೆ ಸಖತ್ ಸ್ವಿಟೋ ಹಾಗೆ ತೆರೆ ಹಿಂದೆಯೂ ಅಷ್ಟೆ ಕ್ಯೂಟ್ ಆಂಡ್ ಸ್ವಿಟ್ . ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರೋ ಅನುಷ್ಕಾ ಬರ್ತ್ ಡೇ ದಿನ ಯಾರೂ ನಿರೀಕ್ಷಿಸದ ಅಚ್ಚರಿಯೊಂದನ್ನ ನೀಡಿದ್ದಾರೆ. ಅನುಷ್ಕಾ ಮಾಡಿದ ಕೆಲಸ ಕೇಳಿ ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ.

ಬೆಂಗಳೂರು (ನ.08): ಅನುಷ್ಕಾ ಶೆಟ್ಟಿ ತೆರೆ ಮೇಲೆ ಹೇಗೆ ಸಖತ್ ಸ್ವಿಟೋ ಹಾಗೆ ತೆರೆ ಹಿಂದೆಯೂ ಅಷ್ಟೆ ಕ್ಯೂಟ್ ಆಂಡ್ ಸ್ವಿಟ್ . ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರೋ ಅನುಷ್ಕಾ ಬರ್ತ್ ಡೇ ದಿನ ಯಾರೂ ನಿರೀಕ್ಷಿಸದ ಅಚ್ಚರಿಯೊಂದನ್ನ ನೀಡಿದ್ದಾರೆ. ಅನುಷ್ಕಾ ಮಾಡಿದ ಕೆಲಸ ಕೇಳಿ ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ. ಇಷ್ಟಕ್ಕೂ ಅನುಷ್ಕಾ ಬರ್ತ್ ಡೆ ದಿನ ಮಾಡಿದ್ದಾದ್ರೂ ಏನು ಗೊತ್ತಾ? ಅನುಷ್ಕಾ ಅದೆಷ್ಟು ಸಹೃದಯಿ, ಅದೆಷ್ಟು ಹೃದಯವಂತೆ ಅನ್ನೋದು ಇಲ್ಲಿ ಗೊತ್ತಾಗಲಿದೆ. ಅನುಷ್ಕಾ ಶೆಟ್ಟಿ ಬಳಿ ಬಹಳ ವರ್ಷಗಳಿಂದ ಕೆಲಸ ಮಾಡಿರುವ ತನ್ನ ಕಾರು ಚಾಲಕನಿಗೆ ಹೊಸ ಕಾರೊಂದನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾಳೆ. ಬರ್ತ್ ಡೆ ಅನುಷ್ಕಾರದ್ದು ಗಿಫ್ಟ್ ಅವರ ಡ್ರೈವರ್​ಗೆ.

ಅನುಷ್ಕಾ ಕೊಡಿಸಿರೊ ಕಾರಿನ ಬೆಲೆ 12 ಲಕ್ಷ ರೂ.  ಅನುಷ್ಕಾ 140 ಕೊಟಿ ಆಸ್ತಿ ಒಡತಿ. ಜೊತೆಗೆ ಬಾಹುಬಲಿ ಸಕ್ಸಸ್ ನಂತರ ಅನುಷ್ಕಾ ಒಂದೇ ಸಿನಿಮಾಗೆ 3 ಕೋಟಿ ಸಂಭಾವನೆ ಪಡಿಯುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಬಳಿಯೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಆಡಿ ಎ6, ಬಿ.ಎಂ.ಡಬ್ಲ್ಯೂ 6, ಆಡಿ ಕ್ಯೂ 5 ಮೊದಲಾದ ಕಾರುಗಳಿವೆ. ಇದೆಲ್ಲ ಏನೆ ಇದ್ದರೂ ಸದಾ  ಅನುಷ್ಕಾ ಬಗ್ಗೆ ಕಾಳಜಿ ವಹಿಸೋ ಹಿರಿಯ ಜೀವಕ್ಕೆ ಅನುಷ್ಕಾ ತನ್ನ ಒಂದು ಪುಟ್ಟ ಕಾಣಿಕೆ ಎಂದು ಹೇಳಿ ಎಲ್ಲರ ಹೃದಯ ಗೆದ್ದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನೀನೊಬ್ಬ ಶಾಂತ ಯೋಧ..: ಮಗನ 18ನೇ ಹುಟ್ಟುಹಬ್ಬಕ್ಕೆ ಭಾವುಕ ಕವಿತೆ ಬರೆದ ಹೃತಿಕ್ ರೋಷನ್!
ನನ್ನ ಯಶಸ್ಸಿಗೆ ಕೊಡವ ಹಾಗೂ ಕಾವೇರಮ್ಮೆಯ ಆಶೀರ್ವಾದ ಅಮೂಲ್ಯ: ನಟಿ ಹರ್ಷಿಕಾ ಪೂಣಚ್ಚ