ಚಂದನ್‌ ಶೆಟ್ಟಿ 'ಸೂತ್ರಧಾರಿ' ನಿರ್ಮಾಪಕ ನವರಸನ್ ಆ ಹೊಟೆಲ್‌ನಲ್ಲಿ ಅಷ್ಟೊಂದು ನಟನಟಿಯರನ್ನು ಒಟ್ಟಿಗೇ ಸೇರಿಸಿದ್ಯಾಕೆ?

Published : Jun 15, 2025, 02:00 PM ISTUpdated : Jun 15, 2025, 02:01 PM IST
Chandan Shetty Navarasan

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಹಾಗೂ ಹತ್ತುಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನವರಸನ್ ಅವರು ಇದೀಗ ಮಾಗಡಿ ರಸ್ತೆ ಪ್ರಸನ್ನ ಥಿಯೇಟರ್ ಬಳಿಯ ಜಿಟಿ ಮಾಲ್‌ನಲ್ಲಿ ಹೊಟೆಲ್ 'ಉತ್ಸವ್ ಕೆಫೆ' ಆರಂಭ ಮಾಡಿದ್ದಾರೆ. ಎಂದಿನಂತೆ ಅವರ ಸಿನಿಮಾಗೆ ಸಂಬಂಧಪಟ್ಟ ಕಾಯಕ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳಲ್ಲಿ ನವರಸನ್ ಕೂಡ ಒಬ್ಬರು. ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ, ವಿತರಕರಾಗಿ ಹಾಗೂ 'ಮೈ ಮೂವೀ ಬಜಾರ್' ಸಂಸ್ಥೆ ಮೂಲಕ ಸಾಕಷ್ಟು ಸಿನಿಮಾ ಇವೆಂಟ್ ಗಳನ್ನು ನಡೆಸುತ್ತಿರುವ , MMB legacy ಯ ಮುಖ್ಯಸ್ಥರೂ ಆಗಿರುವ ನವರಸನ್ ಬೆಂಗಳೂರಿನ ಜಿ.ಟಿ.ಮಾಲ್ ನಲ್ಲಿ ಉತ್ಸವ್ ಕೆಫೆ ಎಂಬ ನೂತನ ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸಿದ್ದಾರೆ. ಇತ್ತೀಚೆಗೆ ಈ ಈವೆಂಟ್ ಅದ್ದೂರಿಯಾಗಿ ನಡೆದಿದೆ.

ಇತ್ತೀಚೆಗೆ ನಡೆದ "ಉತ್ಸವ್ ಕೆಫೆ" ಯ ಉದ್ಘಾಟನಾ ಸಮಾರಂಭದಲ್ಲಿ ನಟರಾದ ವಿನೋದ್ ಪ್ರಭಾಕರ್, ಚಂದನ್ ಶೆಟ್ಟಿ, ರಾಜವರ್ಧನ್, ಆರ್ ಚಂದ್ರು, ಸಂಜಯ್ ಗೌಡ, ನಿಶಾ ವಿನೋದ್ ಪ್ರಭಾಕರ್, ಅಪೂರ್ವ, ಸಿಂಧೂ ಲೋಕನಾಥ್, ನವೀನ್ ಶಂಕರ್, ರಾಜೇಶ್, ತಬಲ ನಾಣಿ, ನಿರ್ಮಾಪಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಚೇತನ್ ಗೌಡ, ಶ್ರೀನಿವಾಸ್, ರವಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ, ನವರಸನ್ ಅವರಿಗೆ ಶುಭ ಕೋರಿದರು.

ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸುವುದು ನನ್ನ ಎರಡು ವರ್ಷಗಳ ಕನಸು. ಅದು ಈಗ ಈಡೇರಿದೆ. ಜಿ.ಟಿ.ಮಾಲ್ ನ ಮೂರನೇ ಮಹಡಿಯಲ್ಲಿ "ಉತ್ಸವ್ ಕೆಫೆ" ಎಂಬ ಪ್ಯೂರ್ ವೆಜ್ ರೆಸ್ಟೋರೆಂಟ್ ಆರಂಭಿಸಿದ್ದೇನೆ. ರುಚಿಕರವಾದ ಇಡ್ಲಿ, ವಡೆ, ಪೂರಿ ಮುಂತಾದ ತಿನಸುಗಳ ಜೊತೆಗೆ ಚೈನೀಸ್(ವೆಜ್) ತಿಂಡಿಗಳು ಸಹ ಇಲ್ಲಿ ಲಭ್ಯವಿರುತ್ತದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನವರಸನ್.

'ಬೆಂಗಳೂರಿನ ಹೃದಯ ಭಾಗದಲ್ಲೇ ಇರುವ ಈ ಹೊಟೆಲ್‌, ಕನ್ನಡ ಚಿತ್ರರಂಗದವರು ಒಟ್ಟಾಗಿ ಸೇರಲು, ಸಿನಿಮಾ ಚರ್ಚೆ ಮಾಡಲು ಹಾಗು ರುಚಿಕರವಾದ ತಿಂಡಿ-ಊಟ ಸವಿಯಲು ವೇದಿಕೆ ಆಗಲಿ ಎಂಬುದು ನನ್ನ ಆಶಯ. ನಮ್ಮ ಹೊಟೆಲ್‌ಗೆ ಬಂದ್ರೆ ಪಾರ್ಕಿಂಗ್ ಸಮಸ್ಯೆ ಇರಲ್ಲ, ಸೆಕ್ಯುರಿಟಿ ಪ್ರಾಬ್ಲಂ ಇರಲ್ಲ, ಫ್ಯಾಮಿಲಿ ಸಮೇತವಾಗಿ ಕೂಡ ಬಂದು ಖುಷಿಯಿಂದ ಸಮಯ ಕಳೆದು ಹೋಗಬಹುದು' ಎಂದಿದ್ದಾರೆ ಚಂದನ್ ಶೆಟ್ಟಿಯವರ 'ಸೂತ್ರಧಾರಿ' ಸಿನಿಮಾ ನಿರ್ಮಾಪಕರೂ ಆಗಿರುವ ನವರಸನ್.

ಒಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಹಾಗೂ ಹತ್ತುಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನವರಸನ್ ಅವರು ಇದೀಗ ಮಾಗಡಿ ರಸ್ತೆ ಪ್ರಸನ್ನ ಥಿಯೇಟರ್ ಬಳಿಯ ಜಿಟಿ ಮಾಲ್‌ನಲ್ಲಿ ಹೊಟೆಲ್ 'ಉತ್ಸವ್ ಕೆಫೆ' ಆರಂಭ ಮಾಡಿದ್ದಾರೆ. ಎಂದಿನಂತೆ ಅವರ ಸಿನಿಮಾಗೆ ಸಂಬಂಧಪಟ್ಟ ಕಾಯಕ ಮುಂದುವರಿಯಲಿದೆ ಎನ್ನಲಾಗಿದೆ. ಸದ್ಯದಲ್ಲೇ ಇನ್ನೊಂದು ಸಿನಿಮಾ ಅನೌನ್ಸ್ ಮಾಡಲಿದ್ದಾರೆ ನವರಸನ್ ಎಂಬ ಸುದ್ದಿಯೂ ಇದೆ, ಆದರೆ ಅದಿನ್ನೂ ಕನ್ಫರ್ಮ್ ಆಗಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?