
ಅತ್ಯಂತ ಕ್ಲಿಷ್ಟಕರ ಟಾಸ್ಕ್‌ಗಳಿಂದಲೇ ಮನೆಮಾತಾದ ‘ಚಾಂಪಿಯನ್’ ರಿಯಾಲಿಟಿ ಶೋ ಫೈನಲ್ ಹಂತಕ್ಕೆ ಬಂದಿದೆ. ನಾಲ್ವರಲ್ಲಿ ವಿನ್ನರ್ ಯಾರು ಅನ್ನೋದಷ್ಟೇ ಬಾಕಿ. ಅವಾರ್ಡ್‌ನ 5 ಲಕ್ಷ ನಗದು ಯಾರಿಗೆ ಸಿಗಲಿದೆ ಎನ್ನುವುದಷ್ಟೇ ಕುತೂಹಲ. ‘ಕಲರ್ಸ್ ಸೂಪರ್’ನ ಈ ವಿಶಿಷ್ಟ ರಿಯಾಲಿಟಿ ಶೋನ ಗ್ರಾಂಡ್ ಫಿನಾಲೆ ಅ.15, 16ರಂದು ಪ್ರಸಾರವಾಗಲಿದೆ. ಬಾಗಲಕೋಟೆ ಜಿಲ್ಲೆಯ ಡ್ಯಾನ್ಸರ್ ಯೋಗಿತಾ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಕಬಡ್ಡಿ ಆಟಗಾತಿ ಪ್ರಿಯಾಂಕಾ ಕಾಮತ್, ಶ್ರೀರಂಗಪಟ್ಟಣದ ಕುಸ್ತಿಪಟು ರೀಟಾ ಹಾಗೂ ಕೊಡಗು ಹಾಕಿಪಟು ಸಂಧ್ಯಾ ಫೈನಲ್ ತಲುಪಿದ್ದಾರೆ.
ಈ ಶೋನ ಗ್ರಾಂಡ್ ಫಿನಾಲೆಯ ಚಿತ್ರೀಕರಣ ಈಗಾಗಲೇ ಮುಗಿದಿದೆ. ದಾವಣಗೆರೆಯಲ್ಲಿ ನಡೆದ ಕಲರ್ ಫುಲ್ ಕಾರ್ಯಕ್ರಮದಲ್ಲಿ ಹಿರಿಯ ನಟಿ ಮಹಾಲಕ್ಷ್ಮಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಅವರೊಂದಿಗೆ ಸಿನಿಮಾ ಹಾಗೂ ಕಿರುತೆರೆಯ ಜನಪ್ರಿಯ ತಾರೆಗಳೂ ಇದ್ದರು. ಅವರ ಸಮ್ಮುಖದಲ್ಲೇ ‘ಚಾಂಪಿಯನ್ ಪಟ್ಟ’ಕ್ಕೆ ಪಾತ್ರರಾದವರಿಗೆ ‘ಕಲರ್ಸ್ ಸೂಪರ್’ ಕಡೆಯಿಂದ 5 ಲಕ್ಷ ನಗದು ಮತ್ತು ಪ್ರಶಸ್ತಿ ಲಕ ನೀಡಲಾಗಿದೆ. ಪ್ರಸಾರದ ದೃಷ್ಟಿಯಿಂದ ಈ ಕಾರ್ಯಕ್ರಮದ ವಿವರ ಗೌಪ್ಯವಾಗಿಡಲಾಗಿದೆ. ನಾಡಿದ್ದು ಶನಿವಾರ, ಭಾನುವಾರ ‘ಕಲರ್ಸ್ ಸೂಪರ್’ನಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿಯೇ ಇದು ಬಹಿರಂಗವಾಗಲಿದೆ.
ಮೊಟ್ಟ ಮೊದಲ ಬಾರಿಗೆ ಯುವತಿಯರಿಗಾಗಿಯೇ ಶುರುವಾಗಿದ್ದ ಸಾಹಸಿ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ‘ಚಾಂಪಿಯನ್ ಶೋ’ದ್ದು. ರಹಮಾನ್ ಇದನ್ನು ಅಷ್ಟೇ ಖಡಕ್ ಆಗಿ ನಡೆಸಿಕೊಟ್ಟರು. ಒಟ್ಟು 16 ಯುವತಿಯರು ಈ ಶೋಗೆ ಪ್ರವೇಶ ಪಡೆದಿದ್ದರು. ಆಡಿಷನ್ ಮೂಲಕವೇ ಇವರನ್ನೆಲ್ಲ ಆರಿಸಲಾಗಿತ್ತು. ದೈಹಿಕ ಹಾಗೂ ಮಾನಸಿಕ ಸದೃಢತೆಯೇ ಇದರ ಮಾನದಂಡವಾಗಿತ್ತು. ಒಟ್ಟು ಎರಡೂವರೆ ತಿಂಗಳು ಶೋನ ಎಲ್ಲ ಟಾಸ್ಕ್‌ಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದ ನಾಲ್ವರು ಈಗ ಫೈನಲ್‌ನಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.