
ದುಬೈ (ನ. 04): ಶನಿವಾರ 54 ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ನ ಪ್ರಸಿದ್ಧ ನಟ ಶಾರುಖ್ ಖಾನ್ ಅವರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎನಿಸಿಕೊಂಡಿರುವ ದುಬೈನ ಬುರ್ಜ್ ಖಲೀಫಾ ವಿಶಿಷ್ಟ ಗೌರವ ಸಲ್ಲಿಸಿದೆ.
‘ಬಾಲಿವುಡ್‌ನ ಕಿಂಗ್ ಆಗಿರುವ ಶಾರುಖ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಕಟ್ಟಡದ ಮೇಲೆ ಬೆಳಕಿನಿಂದ ಚಿತ್ರಿಸಿದೆ. ಇದೇ ವೇಳೆ ಶಾರುಖ್ ಅಭಿಯನದ ‘ಓಂ ಶಾಂತಿ ಓಂ’ ಸಿನಿಮಾದ ‘ಧೂಮ್ ತನ ತನ’ ಹಾಡನ್ನು ಖಲೀಫಾ ಬಳಿ ಇರುವ ಸಂಗೀತ ಕಾರಂಜಿ ಪ್ರದರ್ಶನಕ್ಕೆ ಬಳಸಿಕೊಂಡಿದೆ. ಇದಕ್ಕೆ ಶಾರುಖ್ ಧನ್ಯವಾದ ತಿಳಿಸಿದ್ದಾರೆ.
ಅ.2 ರಂದು ಗಾಂಧಿ ಜಯಂತಿ ದಿನ ಮಹಾತ್ಮ ಗಾಂಧೀಜಿ ಅವರಿಗೂ ಬುರ್ಜ್ ಖಲೀಫಾ ಶುಭಾಶಯ ಕೋರಿತ್ತು. ಈ ಕಟ್ಟಡದಿಂದ ಗೌರವಕ್ಕೆ ಪಾತ್ರರಾಗಿರುವ ಎರಡನೇ ಭಾರತೀಯ ಹಾಗೂ ಮೊದಲ ಬಾಲಿವುಡ್ ನಟ ಶಾರುಖ್ ಅವರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.