ಕಂಗನಾ ರಣಾವತ್‌ ಬಿಚ್ಚಿಟ್ಟ ಸತ್ಯ.. ಅಯ್ಯಯ್ಯೋ ಹೀಗೆಲ್ಲಾ ಆಗುತ್ತಾ?

Published : Jan 22, 2019, 04:14 PM ISTUpdated : Jan 22, 2019, 06:12 PM IST
ಕಂಗನಾ ರಣಾವತ್‌ ಬಿಚ್ಚಿಟ್ಟ ಸತ್ಯ.. ಅಯ್ಯಯ್ಯೋ ಹೀಗೆಲ್ಲಾ ಆಗುತ್ತಾ?

ಸಾರಾಂಶ

ಮತ್ತೆ ಬಾಲಿವುಡ್‌ ನಲ್ಲಿ ಮೀಟೂ ವಿಚಾರ ಸದ್ದು ಮಾಡುತ್ತಿದೆ. ಈ ಬಾರಿ ಕಂಗನಾ ರಣಾವತ್ ಸುದ್ದಿ ಮಾಡಿದ್ದಾರೆ. ಯಾವ ನಟ ಅಥವಾ ನಿರ್ದೇಶಕನ ಮೇಲೆ ಆರೋಪ ಮಾಡಿಲ್ಲ. ಬದಲಾಗಿ ಸಾರ್ವಜನಿಕ ಪ್ರದೇಶದಲ್ಲಿ ಆದ ಅನುಭವ ಹೇಳಿಕೊಂಡಿದ್ದು  ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.

ಮುಂಬೈ[ಜ.22] ಕ್ವೀನ್ ಚಿತ್ರದ ನಿರ್ದೇಶಕನ ಮೇಲೆ ಮೀ ಟೂ ಆರೋಪವನ್ನು ಮಾಡಿದ್ದ ನಟಿ ಕಂಗನಾ ರಣಾವತ್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ಹೇಳುತ್ತ ತಮಗಾದ ಕರಾಳ ಅನುಭವ ಒಂದನ್ನು ಹಂಚಿಕೊಂಡಿದ್ದಾರೆ. 

ಜನರ ಗುಂಪಿನ ಮಧ್ಯೆ ಇದ್ದಾಗ ವ್ಯಕ್ತಿಯೊಬ್ಬ ನನ್ನ ಹಿಂಬದಿ[ಪೃಷ್ಠದ] ಭಾಗವನ್ನು ಜೋರಾಗಿ ತಾಕಿದ್ದ. ನನ್ನ ಬಲ ಬದಿಗೆ ಇದ್ದವ ಬಹಳ ಕಾಲದಿಂದ ನನ್ನನ್ನೇ ದಿಟ್ಟಿಸುತ್ತಿದ್ದ ಇದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರೂ ಇದು ದೌರ್ಜನ್ಯವೇ ಎಂದು ಹೇಳಿದ್ದಾರೆ.

ಕಸ ಹೊಡೆಯುತ್ತಿದ್ದ ಮಹಿಳೆ ತಬ್ಬಿಕೊಂಡು ಹಿಂಸೆ

ಮಹಿಳೆಯರು ಇಂಥ ವಿಚಾರದಲ್ಲಿ ಹಿಂದಕ್ಕೆ ಸರಿಯುವುದು ಒಳ್ಳೆಯದದಲ್ಲ. ಮಾಧ್ಯಮ, ಪೊಲೀಸ್ ಸಹಾಯ ಪಡೆದುಕೊಳ್ಳಬೇಕು. ಕಾನಮಾಂಧರ ಬಣ್ಣ ಬಯಲು ಮಾಡಬೇಕು. ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರಿ ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಕಂಗನಾ ಈ ವಿಚಾರ ಹಂಚಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?