
ಬೆಂಗಳೂರು (ನ. 26): ಗಂಡ-ಹೆಂಡತಿ ಸಂಬಂಧ ಮುರಿದು ಬಿದ್ದ ಮೇಲೆ ಒಬ್ಬರಿಗೊಬ್ಬರು ನೋಡುವುದು, ಮಾತನಾಡುವುದು, ಆಗಾಗ ಭೇಟಿ ಮಾಡುವುದು ಇವೆಲ್ಲಾ ಇರುವುದಿಲ್ಲ. ಆದರೆ ಈ ಜೋಡಿ ಸ್ವಲ್ಪ ಡಿಫರೆಂಟು. ದಾಂಪತ್ಯ ಮುರಿದು ಬಿದ್ದ ಮೇಲೆಯೂ ಆಗಾಗ ಸೇರುತ್ತಾರೆ. ಒಟ್ಟಿಗೆ ಔಟಿಂಗ್ ಹೋಗುತ್ತಾರೆ. ಮಕ್ಕಳ ಜೊತೆ ಡಿನ್ನರ್ ಮಾಡುತ್ತಾರೆ. ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಾರೆ.
ಹೌದು ಇವರೇ ಹೃತಿಕ್-ಸೂಸಾನ್ ಜೋಡಿಯ ಇಂಟರೆಸ್ಟಿಂಗ್ ಕಥೆ. ಮಾಜಿ ಪತ್ನಿ ಸೂಸಾನ್ ಹಾಗೂ ಮಕ್ಕಳ ಜೊತೆ ಹೃತಿಕ್ ರೋಷನ್ ಹಾಲಿಡೇ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡ ಹೃತಿಕ್, ಇಲ್ಲಿರುವುದು ನನ್ನ ಮಾಜಿ ಪತ್ನಿ ಹಾಗೂ ನನ್ನ ಆತ್ಮೀಯ ಗೆಳತಿ ಸೂಸಾನ್. ನನ್ನ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿರುವ ಪೋಟೋಗಳನ್ನು ಸೆರೆ ಹಿಡಿಯುತ್ತಿರುವ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ.
ಇನ್ನುಮುಂದುವರೆದು, ಇದು ನನ್ನ ಮಕ್ಕಳ ಕಥೆಯನ್ನು ಹೇಳುತ್ತದೆ. ಜಗತ್ತು ನಮ್ಮನ್ನು ಬೇರ್ಪಡಿಸಿರಬಹುದು ಆದರೆ ಒಂದಾಗಿರೋಕೆ ಸಾಧ್ಯ. ನಾವಿಲ್ಲಿ ಒಂದಾಗಿದ್ದೇವೆ. ಇವೆಲ್ಲಾ ಭಾವುಕ ಕ್ಷಣಗಳು ಎಂದು ಹೃತಿಕ್ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.