ಸ್ಯಾಂಡಲ್‌ವುಡ್ ಬಿಗ್ ಬಿಗೆ ಬಾಲಿವುಡ್ ಬಿಗ್ ಬಿ ಸಂತಾಪ

Published : Nov 26, 2018, 11:36 AM IST
ಸ್ಯಾಂಡಲ್‌ವುಡ್ ಬಿಗ್ ಬಿಗೆ ಬಾಲಿವುಡ್ ಬಿಗ್ ಬಿ ಸಂತಾಪ

ಸಾರಾಂಶ

ಅಂಬಿ ರಾಜಕಾರಣಿಯಾಗಿದ್ದರೂ ಪಕ್ಷಾತೀತವಾಗಿ ಫ್ರೆಂಡ್ಸ್ ಇದ್ದರು. ಸ್ಯಾಂಡಲ್‌ವುಡ್ ನಟನಾದರೂ ಎಲ್ಲ ಸಿನಿ ಕ್ಷೇತ್ರದವರೂ ಆತ್ಮೀಯರೇ. ಮರೆಯದ ಆತ್ಮಕ್ಕೆ ಬಾಲಿವುಡ್ ಬಿ ನಮಿಸಿದ್ದು ಹೇಗೆ?

ಗ್ಲೋಬಲ್ ಮ್ಯಾಪ್ ಹಿಡಿದು ಅಂಬಿಗೆ ಯಾವ ಜಾಗದಲ್ಲಿ ಫ್ರೆಂಡ್ಸ್ ಇಲ್ಲವೆಂಬುದನ್ನು ಹುಡುಕಬೇಕು. ಅಷ್ಟರ ಮಟ್ಟಿಗೆ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದರು ಸ್ಯಾಂಡಲ್‌ವುಡ್ ಬಿಗ್ ಬಾಸ್.

ಎಲ್ಲ ಭಾಷೆಯ ಚಿತ್ರರಂಗದವರನ್ನೂ ಆತ್ಮೀಯರೆಂದು ಸತ್ಕರಿಸುತ್ತಿದ್ದರು ಅಂಬರೀಷ್. ಮಾತೆಷ್ಟೇ ಒರಟಾದರೂ ಇವರಿಂದ ದೂರ ಹೋದವರೂ ಯಾರೂ ಇಲ್ಲ. ಎಲ್ಲ ಕ್ಷೇತ್ರದವರೊಂದಿಗೂ ಕಾರ್ಯನಿರ್ವಹಿಸಿದ ಅಂಬಿ, ಪ್ರತಿಯೊಬ್ಬರ ಸಾವಿಗೂ ಮರುಗುತ್ತಿದ್ದರು.

ಅಂಬಿ ಇನ್ನಿಲ್ಲ... ಸುದ್ದಿ ಕೇಳಿದಾಕ್ಷಣ ಬಚ್ಚನ್ ತಮ್ಮ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ' ಒಡನಾಡಿ ಅಂಬರೀಷ್ ಅವರನ್ನು ಕಳೆದುಕೊಂಡು ಬೇಸರವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ.' ಎಂದು ಪ್ರಾರ್ಥಿಸಿದ್ದಾರೆ.

 

ಅಂಬರೀಷ್ ಪಾರ್ಥಿವ ಶರೀರ ಮಂಡ್ಯ ಮಣ್ಣಿಗೆ ಗುಡ್ ಬೈ ಹೇಳಿ, ಕಂಠೀರವ ಸ್ಟೊಡಿಯೋಗೆ ಆಗಮಿಸುತ್ತಿದ್ದು, ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಚಿರಂಜೀವಿ, ರಜಿನಿಕಾಂತ್ ಹಾಗೂ ಹಲವಾರು ಗಣ್ಯರು ಅಂಬಿಯ ಅಂತಿಮ ದರ್ಶನ ಪಡೆದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!