ಪ್ರೆಗ್ನೆಂಸಿ ವೇಳೆ ಖ್ಯಾತ ನಟಿಗೆ ಡಿಸಾರ್ಡರ್; ಸತ್ಯ ಬಿಚ್ಚಿಟ್ಟ ಫಿಟ್ನೆಸ್ ಐಕಾನ್!

Published : Sep 27, 2019, 02:14 PM IST
ಪ್ರೆಗ್ನೆಂಸಿ ವೇಳೆ ಖ್ಯಾತ ನಟಿಗೆ ಡಿಸಾರ್ಡರ್; ಸತ್ಯ ಬಿಚ್ಚಿಟ್ಟ ಫಿಟ್ನೆಸ್ ಐಕಾನ್!

ಸಾರಾಂಶ

ಬಾಲಿವುಡ್ ಫಿಟ್ನೆಸ್ ಲೋಕವನ್ನು ಆಳುತ್ತಿರುವ ಮಂಗಳೂರು ಬೆಡಗಿ ಆಸ್ಪತ್ರೆವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಉದ್ಘಾಟನೆ ವೇಳೆ ತಾಯ್ತನ ಹಾಗೂ ತನ್ನ ಪ್ರೆಗ್ನೆಂನ್ಸಿ ಬಗ್ಗೆ ಬೆಚ್ಚಿ ಬೀಳಿಸುವಂತಹ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ.

 

‘ಚಂಡು’ ಎಂದು ಕೇಳಿದ ತಕ್ಷಣ ನಮ್ಮೆಲ್ಲರಿಗೂ ಜ್ಞಾಪಕ ಬರುವುದೇ ಶಿಲ್ಪಾ ಶೆಟ್ಟಿ ಕುಂದ್ರಾ ಒಬ್ಬರೇ. ‘ರಾಜಾ ರಾಜಾ ನನ್ನ ಕನಸಿನ ರಾಜಾ’ ಎಂದು ಟವಲ್ ಹಿಡಿದು ಹೇಳುವ ಹಾಡಿನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬೆಡಗಿ ಈಕೆ.

 

ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ ಬೇರೊಂದು ಊರಿನಲ್ಲಿ ಜೀವನ ನಡೆಸುತ್ತಿದ್ದರು ತನ್ನ ತವರೂರಿನ ಬಗ್ಗೆ ಅಪಾರ ಗೌರವ ಹೊಂದಿರುವ ಶಿಲ್ಪಾ ಶೆಟ್ಟಿ ಯಾವ ಕಾರ್ಯಕ್ರಮಕ್ಕೆ ಆಮಂತ್ರಿಸಿದರೂ ಮಿಸ್ ಮಾಡದೇ ಭೇಟಿ ನೀಡುತ್ತಾರೆ.

ಸೀರೆಯಲ್ಲಿ ಮಿಂಚಿದ 'ಕುಡ್ಲದ ಪೊಣ್ಣು' ಶಿಲ್ಪಾ ಶೆಟ್ಟಿ: ಇಲ್ಲಿವೆ ’ಗೋಲ್ಡನ್’ ಫೋಟೋಸ್ ..!

 

ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ‘ಮಹಿಳಾ ಮತ್ತು ಮಕ್ಕಳ ಕೇಂದ್ರ’ವನ್ನು ಉದ್ಘಾಟನೆ ಮಾಡಿ ಬಳಿಕ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಭಾರೀ ಸುದ್ದಿ ಮಾಡಿದೆ.

 

ಕೆಎಂಸಿ ಆಸ್ಪತ್ರೆಯಲ್ಲಿ ತಾಯ್ತನದ ಬಗ್ಗೆ ಮಾತನಾಡಿದ ಶಿಲ್ಪಾ ಮೊದಲ ಬಾರಿಗೆ ತನ್ನ ಪ್ರೆಗ್ನೆಂಸಿ ವಿಚಾರವನ್ನು ಹಂಚಿಕೊಂಡಿದ್ದಾರೆ. ‘Motherhood ಪ್ರತಿಯೊಂದು ಹೆಣ್ಣಿನ ಜೀವನದಲ್ಲಾಗುವ ಅತ್ಯಂತ ವಿಶೇಷ ಕ್ಷಣಗಳು. ಆದರೆ ಪ್ರೆಗ್ನೆಂನ್ಸಿ ಸಮಯ ಒಂದೇ ರೀತಿ ಇರುವುದಿಲ್ಲ. ನಾನು ಫಿಟ್ನೆಸ್ ಐಕಾನ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಆದರೂ ತುಂಬಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತು. ನನಗೂ ಆಟೋ ಇಮ್ಯೂನ್ ಡಿಸಾರ್ಡರ್ ನನಗೆ ಎದುರಾಗಿತ್ತು’ ಎಂದಿದ್ದಾರೆ.

10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಶಿಲ್ಪಾ ಶೆಟ್ಟಿ; ಕೊಟ್ಟ ಕಾರಣವಿದು !

 

ಅಷ್ಟೇ ಅಲ್ಲದೆ ‘ಪ್ರೆಗ್ನೆಂನ್ಸಿ ವೇಳೆ ತಾಯಿಯ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದು ತುಂಬಾ ಮುಖ್ಯ. ಮಾಡುವ ಕೆಲಸದಿಂದ ತಿನ್ನುವ ಆಹಾರ ಎಲ್ಲವೂ ಮುಖ್ಯ ಯಾಕೆಂದರೆ ಇದೆಲ್ಲಾ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಲಹೆ ನೀಡಿದ್ದಾರೆ.

ಇನ್ನು 13 ವರ್ಷವಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಶಿಲ್ಪಾ ರಿಯಾಲಿಟಿ ಶೋ, ಅಡುಗೆ ರೆಸಿಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಲ ಮೂಲಗಳ ಪ್ರಕಾರ ‘ನಿಕಮ್ಮಾ’ ಚಿತ್ರ ಮೂಲಕ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಶಿಲ್ಪಾ ಶೆಟ್ಟಿ ಹೊಟ್ಟೆಪಾಡು ಹೇಗೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!