
ರವೀನಾ ಟಂಡನ್ ಈ ಚಿತ್ರಕ್ಕೆ ಹೇಗೆ ಸೂಕ್ತ ಎನ್ನುವ ಪ್ರಶ್ನೆ ಮೂಡಿಸಿದರೆ ಈ ಚಿತ್ರದ ಕತೆಯ ಒಂದು ಸಾಲು ಹೇಳಬೇಕು. ವಿಶೇಷವಾದ ಕತೆಯನ್ನೇ ರಘು ಕೋವಿ ಮಾಡಿಕೊಂಡಿದ್ದಾರೆ.
ಅದು ಇಂದಿರಾ ಗಾಂಧಿ ಕಾಲದ ಕತೆ. ಆಗ ಮಧ್ಯಂತರ ಚುನಾವಣೆ ಘೋಷಣೆ ಆಗಿ ಚಿಕ್ಕಮಗಳೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಂದಿರಾ ಗಾಂಧಿ ಸ್ಪರ್ಧಿಸುತ್ತಾರೆ. ಆ ಚುನಾವಣೆಯಲ್ಲಿ ಇಂದಿರಾ ಗಾಂಧಿಗೆ ಅಭೂತಪೂರ್ವ ಯಶಸ್ಸು ಸಿಗುತ್ತದೆ. ಇದು ನಮಗೆ ಗೊತ್ತಿರುವ ಇತಿಹಾಸ. ಆದರೆ, ಹಾಗೆ ಚುನಾವಣೆಗೆ ಸ್ಪರ್ಧಿಸಲು ಬರುವ ಇಂದಿರಾ ಗಾಂಧಿಯನ್ನು ಕೊಲೆ ಮಾಡುವುದಕ್ಕೆ ಒಬ್ಬ ಕಿಲ್ಲರ್ ಹೊರಡುತ್ತಾನೆ. ಆತನಿಗೆ ಸುಪಾರಿ ಕೊಟ್ಟವರು ಯಾರು? ಆತ ಯಾಕೆ ಇಂದಿರಾ ಗಾಂಧಿಯನ್ನು ಕೊಲೆ ಮಾಡುವುದಕ್ಕೆ ಹೊರಡುತ್ತಾನೆ. ಈ ಕೊಲೆಯ ಸಂಚಿಗೂ ಉಳುವವನೇ ಹೊಲದೊಡೆಯ ಎನ್ನುವ ಘೋಷಣೆಗೂ ಏನಾದರೂ ಸಂಬಂಧ ವಿದೆಯೇ? ಇದ್ದರೆ ಅದು ಹೇಗೆ ಎಂಬುದನ್ನು ಅತ್ಯಂತ ರೋಚಕವಾಗಿ ಹೇಳುವ ಸಿನಿಮಾ ಇದು.
ಕೆಜಿಎಫ್-2 ಗೆ ಬಾಲಿವುಡ್‌ನ ’ಮಳೆ ಹುಡುಗಿ’
ಇಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ರವೀನಾ ಟಂಡನ್ ಅವರಿಂದಲೇ ಮಾಡಿಸಬೇಕೆಂಬ ಯೋಚನೆಯಲ್ಲಿ ರಘು ಕೋವಿ ಹೊರಟಿದ್ದಾರೆ. ಈಗಾಗಲೇ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಈ ಚಿತ್ರದ ಮೂಲಕ ಕನ್ನಡಕ್ಕೆ ಕರೆತರುತ್ತಿದ್ದಾರೆ.
ಉಪ್ಪಿ ಜೊತೆ ಸ್ಟೆಪ್ ಹಾಕಿದ ಬೆಡಗಿ ಈಗ ಯಶ್ ಜೊತೆ!
ಈ ಹಿಂದೆ ‘ಕೃಷ್ಣಲೀಲಾ’ ಚಿತ್ರಕ್ಕೆ ಚಿತ್ರಕಥೆ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡವರು ರಘು ಕೋವಿ. ಹೀಗಾಗಿ ತಮ್ಮ ಮೊದಲ ನಿರ್ದೇಶನ ಚಿತ್ರದ ಕತೆ ಹಾಗೂ ಚಿತ್ರಕತೆ ಸಾಕಷ್ಟು ವಿಶೇಷತೆಗಳಿಂದ ಕೂಡಿರಬೇಕು ಎನ್ನುವ ಕಾರಣಕ್ಕೆ ಇಂದಿರಾ ಗಾಂಧಿ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.