
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗಷ್ಟೇ ಇನ್ಫ್ಲೂಯನ್ಸರ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ಬ್ರ್ಯಾಂಡ್‌ಗಳು ತಮ್ಮ ಪ್ರಾಡೆಕ್ಟ್ ಗಳನ್ನು ಇವರಿಗೆ ಕೊಟ್ಟು ಬಳಸಿ ವಿಮರ್ಶೆ ಮೂಲಕ ಸಾರ್ವಜನಿಕರನ್ನು ಸೆಳೆಯುತ್ತಾರೆ. ಸಾಮಾನ್ಯರು ಹಣ ಮಾಡುವ ದಾರಿ ಒಂದಾದರೆ ಸ್ಟಾರ್‌ಗಳದ್ದು ಇನ್ನೊಂದು ಸ್ಟೈಲ್.
ಕೊಹ್ಲಿ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 1.35 ಕೋಟಿ ರುಪಾಯಿ ಸಿಗತ್ತೆ..!
ಕೆಲದಿನಗಳ ಹಿಂದೆ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಹಣ ಸಂಪಾದಿಸುತ್ತಿರುವ ಸಿನಿಮಾ ಸ್ಟಾರ್‌ಗಳ ಪಟ್ಟಿ ಬಿಡುಗಡೆಯಾಗಿದ್ದು ಅದರಲ್ಲಿ ಕೋಟಿ ಸಂಪಾದಿಸುತ್ತಿರುವ ಏಕೈಕಾ ನಟಿ ಅಂದ್ರೆ ಪ್ರಿಯಾಂಕ ಚೋಪ್ರಾ.
ಪಟಾಕಿ ಹೊಡೆದ್ರೆ ಅಸ್ತಮಾ ಎಂದಿದ್ದ ಪ್ರಿಯಾಂಕಾ ಧಂ ಫೋಟೋಗೆ ನೆಟ್ಟಿಗರ ತರಾಟೆ
ಹೌದು ಪ್ರಿಯಾಂಕ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್‌ಗೆ ಕನಿಷ್ಠ 1.87 ಕೋಟಿ ಹಣ ಸಿಗುತ್ತಂತೆ. ಆದರೆ ಇದು ಖಾಸಗಿ ಫೋಟೋಗಳಿಗೆ ಅಲ್ಲ ಕಮರ್ಷಿಯಲ್ ಉದ್ದೇಶದಿಂದ, ಪ್ರಚಾರಕ್ಕಾಗಿ ಹಾಕುವ ಪೋಸ್ಟ್‌ಗಳಿಗಾಗಿ ಮಾತ್ರ ಹಣ ಪಡೆದುಕೊಳ್ಳುತ್ತಾರೆ. ಪ್ರಿಯಾಂಕಾಗೆ ಈಗಾಗಲೇ 43.3 ಮಿಲಿಯನ್ ಫಾಲೋವರ್ಸ್ ಇದ್ದು ಒಂದು ಪೋಸ್ಟ್ ಹಾಕಿದ್ರೆ ಲಕ್ಷ ಲೆಕ್ಕದಲ್ಲಿ ಜನ ಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.