Khushi Mukherjee: ಫೇಮಸ್​​ ಆಗ್ಬೇಕು ಅಂದ್ರೆ ಅಲ್ಲೆಲ್ಲಾ ಬಟ್ಟೆ ಹರಿದುಕೊಂಡ್ರೆ ತಪ್ಪೇನಿದೆ? ನಟಿ ಖುಷಿ ಬೋಲ್ಡ್​ ಮಾತು ಕೇಳಿ...

Published : Jun 17, 2025, 01:18 PM ISTUpdated : Jun 17, 2025, 01:22 PM IST
khushi mukharji about fashion

ಸಾರಾಂಶ

ಸದಾ ದೇಹಪ್ರದರ್ಶನದಿಂದಲೇ ಫೇಮಸ್​ ಆಗ್ತಿರೋ ನಟಿಯರ ಪೈಕಿ ಬಾಲಿವುಡ್​ ನಟಿ ಖುಷಿ ಮುಖರ್ಜಿ ಕೂಡ ಒಬ್ಬರು. ಇದೀಗ ಹರಿದ ಜೀನ್ಸ್ ಪ್ಯಾಂಟ್​ನಿಂದ ಟ್ರೋಲ್ ಆಗ್ತಿರೋ ನಟಿ ಆ ಬಗ್ಗೆ ಹೇಳಿದ್ದೇನು ನೋಡಿ... 

ಗ್ಲಾಮರಸ್​ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು ಆಗಲ್ಲ. ಫೇಮಸ್​​ ಆಗ್ಬೇಕು ಎಂದೇ ಬಂದಿರುವಾಗ ಇದೆಲ್ಲಾ ಮಾಮೂಲು ಎನ್ನುತ್ತಲೇ ತಮ್ಮ ಡ್ರೆಸ್​ನಿಂದ ಇನ್ನಿಲ್ಲದಂತೆ ಟ್ರೋಲ್​​ ಆಗ್ತಿರೋ ನಟಿ ಖುಷಿ ಮುಖರ್ಜಿ ಓಪನ್ನಾಗಿಯೇ ಮಾತನಾಡಿದ್ದಾರೆ. ಸದಾ ದೇಹಪ್ರದರ್ಶನದಿಂದಲೇ ಫೇಮಸ್​ ಆಗಿರೋ ನಟಿ, ಇದೀಗ ಹಿಂಬದಿ ಹರಿದ ಜೀನ್ಸ್​ ಧರಿಸಿ ಪೋಸ್​ ಕೊಟ್ಟಿದ್ದರಿಂದ ಸದ್ದು ಮಾಡುತ್ತಿದ್ದಾರೆ. ಇದಾಗಲೇ ಅತೀ ಎನ್ನಿಸುವಷ್ಟು ದೇಹ ಪ್ರದರ್ಶನ ಮಾಡಿ ಸುದ್ದಿಯಾಗಿದ್ದರೂ, ಹರಿದ ಜೀನ್ಸ್​ನಿಂದ ಇನ್ನಷ್ಟು ಸದ್ದು ಮಾಡುತ್ತಿದ್ದಾರೆ ನಟಿ. ಅಷ್ಟಕ್ಕೂ ಎಲ್ಲಾ ಕಡೆ ಹರಿದ ಜೀನ್ಸ್​ ಹಾಕುವುದು ಹೊಸ ವಿಷಯವೇನಲ್ಲ. ಸಾಮಾನ್ಯ ಯುವಕ- ಯುವತಿಯರೂ ಇಂಥ ಜೀನ್ಸ್ ಪ್ಯಾಂಟ್ ಧರಿಸುವುದು ಮಾಮೂಲಾಗಿಬಿಟ್ಟಿದೆ. ಆದರೆ ನಟಿ ಎಂದ ಮೇಲೆ ಒಂದು ಹೆಜ್ಜೆ ಮುಂದಕ್ಕೆ ಹೋಗಬೇಕಲ್ವಾ? ಅದಕ್ಕಾಗಿಯೇ ಹಿಂಬದಿಯಲ್ಲಿ ಹರಿದ ಜೀನ್ಸ್​ ತೊಟ್ಟು ಸುದ್ದಿಯಾಗಿದ್ದಾರೆ ನಟಿ.

ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೋಲ್ಡ್​ ಆಗಿಯೇ ಉತ್ತರಿಸೋ ಖುಷಿ, ಗ್ಲಾಮರಸ್​ ಇಂಡಸ್ಟ್ರಿಗೆ ಬಂದ ಮೇಲೆ ಫೇಮಸ್​ ಆಗಬೇಕು ಎಂದು ಇದೆಲ್ಲಾ ಮಾಡಿದ್ರೆ ತಪ್ಪೇನಿಲ್ಲ ಎಂದಿದ್ದಾರೆ. ಊಟ ನಿಮ್ಮ ಇಚ್ಛೆಯಂತೆ ಮಾಡಿ, ಡ್ರೆಸ್​ ಬೇರೆಯವರ ಇಚ್ಛೆಯಂತೆ ಹಾಕಿಕೊಳ್ಳಿ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಷ್ಟಬಂದ ಡ್ರೆಸ್​ ಹಾಕುವ ಹಕ್ಕು ನನಗೆ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ನೀವು ನನ್ನ ಬಗ್ಗೆ ಒಳ್ಳೆಯದ್ದೇ ಹೇಳಿ, ಕೆಟ್ಟದ್ದೇ ಹೇಳಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ನಟಿ ಈ ಹಿಂದೆ ಬೇಕಾದಷ್ಟು ಬಾರಿ ಇಂಥ ಡ್ರೆಸ್​ ಹಾಕಿ, ಉದ್ದೇಶಪೂರ್ವಕವಾಗಿ ಆ ಡ್ರೆಸ್​ ಹಾರಿಹೋಗುವಂತೆ ಮಾಡಿ, ಪ್ರದರ್ಶನ ಮಾಡಿರೋದು ಇದೆ. ಈಗ ಅವುಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಬಹುಭಾಷಾ ನಟಿಯಾಗಿದ್ದು, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ 'ಅಂಜಲಾ ತುರಾಯ್‌', ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ 'ಹಾರ್ಟ್ ಎಟಾಕ್‌', ತೆಲುಗಿನಲ್ಲೇ 'ದೊಂಗ ಪ್ರೇಮ' ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್​ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು ಈ ಮುಂಬೈ ಬೆಡಗಿ! ಈ ಹಿಂದೆ ಇವರು ತಮಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಬಗೆಯನ್ನೂ ವಿವರಿಸಿದ್ದರು. ನನ್ನದು ಮಾಡೆಲಿಂಗ್ ವೃತ್ತಿ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವಿವಿಧ ಶೋಗಳಲ್ಲಿ ಭಾಗವಹಿಸುತ್ತೇನೆ. ಹಲವು ಉತ್ಪನ್ನಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ಒಮ್ಮೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಹೋಗಿದ್ದಾಗ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂತು ಎಂದಿದ್ದರು. ಐಟಂ ಸಾಂಗ್​ ಕೊಟ್ಟರೂ ರೆಡಿ, ಪಾತ್ರಕ್ಕಾಗಿ ಬಟ್ಟೆ ಬಿಚ್ಚಲೂ ರೆಡಿ ಎನ್ನುವ ಮಾತುಗಳನ್ನೂ ಆಡಿದ್ದರು ನಟಿ!

ನಟಿ ಪ್ರತಿದಿನ ಸುಮಾರು 3 ಗಂಟೆಗಳ ಯೋಗ ಮಾಡುತ್ತಾರಂತೆ. ನೃತ್ಯ ತರಬೇತಿ ಪಡೆಯುತ್ತಿದ್ದಾರಂತೆ. ಯೋಗವು ನನ್ನ ಫಿಟ್‌ನೆಸ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ನೃತ್ಯದಿಂದಲೂ ಮೈಮನಕ್ಕೆ ಖುಷಿ ಕೊಡುತ್ತದೆ ಎಂದಿದ್ದಾರೆ. ಧ್ಯಾನವು ನನ್ನ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿರುವ ನಟಿ, ಇದು ಎಲ್ಲಾ ನಟರು ಪರದೆಯ ಮೇಲೆ ಪಾತ್ರಗಳನ್ನು ನಿರ್ವಹಿಸುವಾಗ ಯೋಗ, ಧ್ಯಾನ ತುಂಬಾ ಮಹತ್ವದ್ದು ಎಂದಿದ್ದಾರೆ. ಒಟ್ಟಿನಲ್ಲಿ ಈಕೆಯ ಡ್ರೆಸ್​ ಮಾತ್ರ ಸದ್ಯ ಭಾರಿ ಸದ್ದು ಮಾಡುತ್ತಿದೆ. ನಟಿ ಸದ್ಯ ಮೂತ್ರ ವಿಸರ್ಜನ್​ ಮನಾ ಹೈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!