
ಬೆಂಗಳೂರು[ಜು.11] ಕನ್ನಡ ಹೋರಾಟಗಾರರ ಬಗ್ಗೆ ಟ್ವೀಟ್ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ಬಯೋಕಾನ್ ಎಂಡಿ ಕಿರಣ್ ಮಜುಂದಾರ್ ಶಾ ಕ್ಷಮೆಯಾಚಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಜುಂದಾರ್ ಶಾ, ನನಗೆ ಕನ್ನಡದ ಮೇಲೆ ಅಭಿಮಾನವಿದೆ. ಸಾಮಾನ್ಯ ಮಟ್ಟದಿಂದ ಬೆಳೆದು ಬಂದಿರುವ ನನಗೆ ಸಾಮಾನ್ಯ ಜನರ ಕಷ್ಟ-ನಷ್ಟದ ಅರಿವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಅಲ್ಲದೇ ಪತ್ರದ ಕೊನೆಗೆ ಕನ್ನಡದಲ್ಲಿಯೇ ಹಸ್ತಾಕ್ಷರ ಹಾಕಿದ್ದಾರೆ. ಉದ್ದೇಶಪೂರ್ವಕವಲ್ಲದ ನನ್ನ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೆನೆ ಎಂದು ಹೇಳಿದ್ದಲ್ಲದೇ ಕನ್ನಡ ಅಭಿವೃದ್ಧಿ ಕುರಿತಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮತ್ತೊಮ್ಮೆ ಕನ್ನಡಿಗರ ಭಾವನೆ ಕೆರಳಿಸಿದ ಕಿರಣ್ ಮಜುಂದಾರ್ ಶಾ
ಜುಲೈ 9 ರಂದು ಟ್ವೀಟ್ ಮಾಡಿದ್ದ ಶಾ ನ್ನಡ ಸಂಘಟನೆಗಳನ್ನುಅತ್ಯಲ್ಪ ಎಂದು ಕರೆದು ಮಾಧ್ಯಮಗಳು ಅವಕ್ಕೆ ಪುಕ್ಕಟೆ ಪ್ರಚಾರ ನೀಡುತ್ತಿವೆ ಎಂದು ಹೇಳಿದ್ದರು. ಕನ್ನಡಿಗರ ಭಾವನೆ ಕೆರಳಿಸಿದ್ದ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದವು. ಕಿರಣ್ ಕನ್ನಡಿಗರ ಕ್ಷಮೆ ಕೇಳಬೆಕು ಎಂದು ಆಗ್ರಹಿಸಲಾಗಿತ್ತು.
ಬೇಜವಾಬ್ದಾರಿತನದ ಟ್ವೀಟ್ ಮಾಡಿದ್ದ ಕಿರಣ್ ಮಜುಂದಾರ್ ಶಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರವೊಂದನ್ನು ಬರೆದಿತ್ತು. ಸರ್ಕಾರಿ ಶಾಲೆಗಳಿಗೆ ಹಣಕೊಟ್ಟು ತೆರಿಗೆ ವಿನಾಯ್ತಿ ಪಡೆಯುವವರು ನೀವು, ಸರ್ಕಾರಿ ಶಾಲೆಗಳ ಉದ್ಧಾರಕ್ಕೆ ಆಂಗ್ಲ ಮಾಧ್ಯಮವೊಂದೆ ಮಾನದಂಡ ಅಲ್ಲ. ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ಸಂಸ್ಕೃತಿ ಅಳಿವು ಉಳಿವಿಗಿಂತ ಮಿಗಿಲಿದೆ. ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಯಿಂದಲೂ ಮಾತೃಭಾಷೆ ಅತ್ಯವಶ್ಯಕ ಎಂದು ಶಾಗೆ ಪ್ರಾಧಿಕಾರ ತಿಳಿವಳಿಕೆ ನೀಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.