
ಸುದೀಪ್ ಬೈಕ್ ಕ್ರೇಜ್ ಹೊಸದೇನಲ್ಲ. ಅವರ ಮನೆಯಲ್ಲಿ ಈಗಾಗಲೇ ಏಳೆಂಟು ಸೂಪರ್ ಬೈಕುಗಳಿವೆ. ಆ ಬೈಕುಗಳ ಸಂಗ್ರಹಕ್ಕೆ ಹೊಸ ಸೇರ್ಪಡೆ ಬಿಎಂಡಬ್ಲ್ಯೂ ಆರ್ 1200. ಈ ಬೈಕಿನ ಬೆಲೆ ಅಂದಾಜು 15.7 ಲಕ್ಷ. ಸುದೀಪ್ ಈ ಬೈಕಿನ
ಮೇಲಿನ ಪ್ರೀತಿಯಿಂದ ಇತ್ತೀಚೆಗೆ ತಾವೇ ಬಿಎಂಡಬ್ಲ್ಯೂ ಶೋ ರೂಮ್‌ಗೆ ಹೋಗಿ ಬೈಕನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಹೊಸ ಬೈಕ್ ಬಂದಾಗ ಒಂದು ರೌಂಡು ಹೊಡೆಯದಿದ್ದರೆ ಏನ್ ಚೆಂದ? ಹಾಗಾಗಿ ಹೆಲ್ಮೆಟ್ ಧರಿಸಿದವರೇ ಬೆಂಗಳೂರಿನ ತುಂಬಾ ಬೈಕ್ ರೈಡ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆಗೆ ಚಂದನ್ ಮತ್ತು
ನಿರ್ದೇಶಕ ಕೃಷ್ಣ ಮತ್ತೊಂದು ಬೈಕಿನಲ್ಲಿ ಇದ್ದರು. ಅವರು ಹೀಗೆ ಬೈಕ್ ರೈಡ್ ಹೋಗಿದ್ದು ರಾತ್ರಿ ಹೊತ್ತು. ಅಲ್ಲದೇ ಹೆಲ್ಮೆಟ್ ಧರಿಸಿದ್ದರಿಂದ ಯಾರೊಬ್ಬರಿಗೂ ಕಿಚ್ಚ ಸುದೀಪ್ ಗುರುತು ಸಿಕ್ಕಿರಲಿಲ್ಲ. ಆದರೆ ಕೃಷ್ಣ ತೆಗೆದ ಫೋಟೋ ಮತ್ತು ವೀಡಿಯೋ ಇದೀಗ ವೈರಲ್ ಆಗಿಬಿಟ್ಟಿದೆ. ಹೊಸದಾಗಿ ಬೈಕ್ ಅಥವಾ ಕಾರು ಖರೀದಿಸಿದ ತಕ್ಷಣ ಅದರಲ್ಲೇ ಲಾಂಗ್ ರೈಡ್ ಹೊರಡುವುದು ಸುದೀಪ್ ನೆಚ್ಚಿನ ಅಭ್ಯಾಸ. ಹಿಂದೊಮ್ಮೆ ಹೊಸ ಬೈಕ್ ಖರೀದಿಸಿ ಅದರಲ್ಲೇ ಸ್ನೇಹಿತರ ಜತೆಗೂಡಿ ಶಿವಮೊಗ್ಗದ ತನಕ ಹೋಗಿ ಬಂದಿದ್ದರು. ಅದು ಸಾಕಷ್ಟು ಸುದ್ದಿಯೂ ಆಗಿತ್ತು. ಆಗ ಜನರಿಗೆ ಸುದೀಪ್ ಗುರುತು ಸಿಕ್ಕಿತ್ತು. ಆದರೆ ಈ ಸಲ ಯಾರಿಗೂ ಗೊತ್ತಾಗಿಲ್ಲ. ಸುದೀಪ್ ಹೀಗೆ ಮನಸ್ಸು ಬಂದಾಗೆಲ್ಲಾ ತಮ್ಮ ಗುರುತು ಮರೆಮಾಚಿ ಬೈಕ್ ರೈಡ್
ಮಾಡುತ್ತಿರುತ್ತಾರೆ. ಅದು ಅವರ ಗೆಳೆಯರಿಗಷ್ಟೇ ಗೊತ್ತು. ಹಾಗಾಗಿ ಅಭಿಮಾನಿಗಳು ತಮ್ಮ ಪಕ್ಕದಲ್ಲಿ ಯಾರಾದರೂ ಸೂಪರ್ ಬೈಕ್ ಓಡಿಸುತ್ತಿದ್ದರೆ ಸ್ವಲ್ಪ ಜಾಸ್ತಿ ಗಮನ ಕೊಡಿ. ಯಾರಿಗ್ಗೊತ್ತು ಸುದೀಪ್ ಇದ್ದರೂ ಇರಬಹುದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.