ಆ್ಯಂಡ್ರ್ಯೂಗೆ ಈಕೆ ಕಂಡರೆ ಮೈ ಜುಮ್ ಎನ್ನುತ್ತಂತೆ!

Published : Nov 15, 2018, 04:13 PM ISTUpdated : Nov 15, 2018, 04:27 PM IST
ಆ್ಯಂಡ್ರ್ಯೂಗೆ ಈಕೆ ಕಂಡರೆ ಮೈ ಜುಮ್ ಎನ್ನುತ್ತಂತೆ!

ಸಾರಾಂಶ

  ಯಾರೊಂದಿಗೂ ಉತ್ತಮ ಬಾಂಧವ್ಯ ಹೊಂದಿರದ ಆ್ಯಂಡ್ರೂ ತಮ್ಮ ಭಾವನೆಗಳನ್ನು ಅದರಲ್ಲಿಯೂ ತಮ್ಮ ಕ್ರಷ್ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅದ್ಯಾರೊಂದಿಗೆ ಅವರಿಗೆ ಕ್ರಷ್ ಆಗಿದ್ದು?

ಬಿಗ್ ಬಾಸ್ ಕೊಟ್ಟ ಟಾಸ್ಕ್ ಮೂಲಕ ಆ್ಯಂಡ್ರ್ಯೂ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದಾರೆ. ‘ಇದು ಯಾರು ಬರೆದ ಕಥೆಯೋ..?’

ಟಾಸ್ಕ್‌ನಲ್ಲಿ ಪ್ರತಿಯೊಬ್ಬರೂ ತಮ್ಮ ರಿಯಲ್ ಲೈಫ್ ಅಥವಾ ಯಾವುದಾದರೂ ಕಟ್ಟು ಕಥೆಯನ್ನು ರೋಚಕವಾಗಿ ಎಲ್ಲರ ಮುಂದೆಯೂ ಹೇಳಬೇಕಾಗಿತ್ತು. ಅದು ಕಟ್ಟು ಕಥೆ ಎಂದೆನಿಸಿದರೆ ಶೇವಿಂಗ್ ಫೋಮ್ ಅನ್ನು ಮುಖಕ್ಕೆ ಹಚ್ಚಬೇಕಿತ್ತು. ಆ್ಯಂಡ್ರೂ ಹೇಳಿದ್ದೇನು? 'ಸಿಕ್ಕಿದ್ದೇ ಸೀರುಂಡೆ' ಎಂದು ಸಿಕ್ಕ ಅವಕಾಶವನ್ನು ಕಾರ್ಪೋರೇಟ್ ಟ್ರೈನರ್ ಆಗಿರೋ ಮಾತಿನ ಮಲ್ಲ ಆ್ಯಂಡ್ರೂ ಚೆನ್ನಾಗಿ ಬಳಸಿಕೊಂಡಿದ್ದಾರೆ.

ಹೊಟ್ಟೆ ತುಂಬಿದರೆ ಸಾಕೆಂದು ಬರೀ ಚಿಕನ್ ಬರಿಯಾನಿ ಹಾಗೂ ಕಬಾಬ್ ತಿಂದ್ಕೊಂಡು ಓಡಾಡುತ್ತಿದ್ದ ಇವರು ತಮಗಿರುವ ಭಾವನೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಬಿಗ್‌ಬಾಸ್ ಮನೆಗೆ ಬಂದ ಮೇಲೆ 'ಆಕೆ' ಆ ಕಡೆ-ಈ ಕಡೆ ಓಡಾಡಿದಾಗಲೆಲ್ಲಾ ಇವರಿಗೆ ಮೈ ಜುಂ ಜುಂ ಎನ್ನುತ್ತಂತೆ! ಕಳೆದು ಕೆಲವು ದಿನಗಳಿಂದ ಇಂಥ ಭಾವನೆ ಬರುತ್ತಿದೆಯಂತೆ.

ಈ ರೀತಿ ಫೀಲಿಂಗ್ಸ್ ಏಕೆ ಬರುತ್ತೆ ಅಂಥ ಈಗ ಡೌಟ್ ಕ್ಲೀಯರ್ ಮಾಡಿಕೊಂಡಿದ್ದಾರೆ. ಅಂಥ ವಿಶೇಷ ಭಾವನೆಯನ್ನು ಯಾವತ್ತೂ ಎಕ್ಸ್‌ಪ್ರೆಸ್ ಮಾಡದ ಆ್ಯಂಡ್ರೂ ಅವರು ಹೇಳಿದ್ದು ಕಟ್ಟುಕಥೆ ಎಂದು ಹೇಳಿದ್ದಾರೆ ಮನೆಯ ಸದಸ್ಯರು. ಅವರ ಮುಖಕ್ಕೆ ಶೇವಿಂಗ್ ಫೋಮ್ ಹಚ್ಚಿದ್ದಾರೆ. ಆದರೆ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಿನ್ನು ಆಲಿಯಾಸ್ ಕವಿತಾ ನೋಡಿದರೆ ಈ ಆ್ಯಂಡ್ರಿಗೆ ಜುಂ ಜುಂ ಅನ್ನುತ್ತಾ ಡೌಟ್? ನೀವೇನು ಹೇಳ್ತೀರಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?