ಬಿಗ್‌ಬಾಸಲ್ಲಿ ಮುತ್ತಿನ ಗಮ್ಮತ್ತು ಹೇಗಿತ್ತು ಗೊತ್ತಾ?

Published : Nov 15, 2018, 12:17 PM IST
ಬಿಗ್‌ಬಾಸಲ್ಲಿ ಮುತ್ತಿನ ಗಮ್ಮತ್ತು ಹೇಗಿತ್ತು ಗೊತ್ತಾ?

ಸಾರಾಂಶ

  ಈ ಸಾರಿ ಬಿಗ್‌ಬಾಸ್‌ನಲ್ಲಿರೋ ಅಟ್ರ್ಯಾಕ್ಟಿವ್ ಜೋಡಿ ನವೀನ್ ಸಜ್ಜು ಮತ್ತು ಸೋನು ಪಾಟೀಲ್ ಅವರದ್ದು. ಸದಾ ಒಟ್ಟಿಗಿರೋ, ಗುಟ್ ಗುಟ್ಟಾಗಿ ಮಾತನಾಡೋ ಇವರ ಬಗ್ಗೆ ಗಾಸಿಪ್‌ಗಳೇನೂ ಕಡಿಮೆ ಇಲ್ಲ. ಇದಕ್ಕೆ ಇಂಬು ನೀಡುವಂತೆ ನಡೆದಿದೆ ಮತ್ತೊಂದು ಮುತ್ತಿನ ಘಟನೆ.

ಈ ಸಾರಿ ಬಿಗ್ ಬಾಸ್ ಮನೆಯಲ್ಲಿರೋ ಲವ್ ಬರ್ಡ್ಸ್ ನವೀನ್ ಸಜ್ಜು ಮತ್ತು ಸೋನು ಪಾಟೀಲ್ ಫುಲ್ ಫೇಮಸ್. ಚಳಿಯಲ್ಲಿ ನಡುಗಿದಾಗ, ಬೇಜಾರಾದಾಗ, ಜೊತೆಯಿದ್ದು ಅತ್ತಾಗ ಸಜ್ಜು-ಸೋನು ಸದಾ ಸಮೀಪದಲ್ಲೇ ಇರುತ್ತಾರೆ.

ಈ 'ಸೂಪರ್ ಹುಡುಗ'ನಿಗೆ ಸೋನು 'ಐ ಲವ್ ಯೂ' ಎಂದೂ ಹೇಳಿಯಾಗಿದೆ. ಆದರೆ, ನವೀನ್ ಒಳ್ಳೆಯ ಸ್ನೇಹಿತನಂತೆ ಪ್ರೀತಿಯ ಸಂಕೇತವಾಗಿ ಸೋನು ಕೊಟ್ಟ ಬಲೂನ್‌ ಅನ್ನು ಅಕ್ಸೆಪ್ಟ್ ಮಾಡಿದ್ದರು. ಈಗ ಮುತ್ತಿನ ಗಮ್ಮತ್ತು: ಪ್ರೀತಿ-ಗೀತಿ ಏನೂ ಇಲ್ಲ ಎಂದು ಓಡಾಡುತ್ತಿದ್ದ ಸೋನು, ಬಿಗ್ ಬಾಸ್ ಮನೆಯಲ್ಲಿಯೇ ಸಜ್ಜುಗೆ ಮುತ್ತು ಕೊಟ್ಟಿದ್ದಾರೆ!

ಮ್ಯೂಸಿಕಲ್ ಚೇರ್ ಟಾಸ್ಕ್ ಕೊಟ್ಟಿದ್ದನ್ನೇ ಸೋನ್ ಎನ್‌ಕ್ಯಾಶ್ ಮಾಡಿಕೊಂಡು, ಮುತ್ತು ಹರಿಯಬಿಟ್ಟಿದ್ದಾರೆ. ಸೋತವರು ಡಬ್ಬಿಯಲ್ಲಿದ್ದ ಚೀಟಿ ಎತ್ತಿ ಅದರಲ್ಲಿ ಏನೀದೆಯೋ ಅದನ್ನು ಮಾಡಬೇಕಿತ್ತು. ಸೋತಿದ್ದ ಸೋನುಗೆ ಸಿಕ್ಕ ಟಾಸ್ಕ್ ಏನು ಗೊತ್ತಾ?

ತುಟಿಗೆ ಗಾಢವಾಗಿ ಲಿಪ್‌ಸ್ಟಿಕ್ ಲೇಪಿಸಿಕೊಂಡು, ಮನೆಯ ಸದಸ್ಯರಿಗೆಲ್ಲ ಮುತ್ತು ಕೊಡಬೇಕಿತ್ತು. ಕೆಲವರು ಕಿಸ್ ಬೇಡವೆಂದು ಮಿಸ್ ಮಾಡಿಕೊಂಡರು. ಆದರೆ, ಬಿಗ್‌ಬಾಸ್ ಆಜ್ಞೆ ಇದ್ದ ಕಾರಣ ಈ ಟಾಸ್ಕ್ ಅನ್ನು ಸೋನು ಪೂರೈಸ ಬೇಕಿತ್ತು. ಎಲ್ಲರಿಗೂ ಮುತ್ತು ಕೊಟ್ಟ ಸೋನುಗೆ ಸಜ್ಜು ಸರದಿ ಬಂದಾಗ, ಮುಖ ಫುಲ್ ಕೆಂಪು ಕೆಂಪು. ನಾಚು ನಾಚುತ್ತಲೇ ಮುತ್ತು ಕೊಟ್ಟು ಟಾಸ್ಕ್ ಕಂಪ್ಲೀಟ್ ಮಾಡಿದರು. ಸೋತ ನವೀನ್‌‌ಗೆ ಸಿಕ್ಕ ಟಾಸ್ಕ್ ಏನು?

ಮ್ಯೂಸಿಕಲ್ ಛೇರ್ ಟಾಸ್ಕ್‌ನಲ್ಲಿ ಸೋತ ನವೀನ್‌ಗೆ ಮಾತ್ರ ಈಸಿ ಶಿಕ್ಷೆ ಸಿಕ್ಕಿತು. ಸ್ವಿಮ್ಮಿಂಗ್ ಪೂಲ್‌ನಲ್ಲಿ ಐದು ಬಾರಿ ಮುಳುಗಿ ಏಳಬೇಕಿತ್ತು. ಆದರೆ, ಮುತ್ತಿನ ಘಟನೆ ಆದ್ಮೇಲಾದರೂ ಸೋನು ಮೇಲೆ ಸಜ್ಜುಗೆ ಪ್ಯಾರ್ ಆಗುತ್ತಾ ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!