
ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳ ಮುಂದೆ ಮೈಕ್ ಹಿಡಿದು ನಿಮ್ಮ ಭಾವಿ ಪತಿ, ನಿಮ್ಮ ಕನಸಿನ ಹುಡುಗ ಹೇಗಿರಬೇಕು ಎಂದು ಪ್ರಶ್ನಿಸಿದಾಗ ಅವರು ಒಂದಿಷ್ಟು ಕಾಮನ್ ವಿಷ್ಯ ಹೇಳೋದು ಮಾಮೂಲು. ತುಂಬಾ ಪ್ರೀತಿಸಬೇಕು, ಕೇರ್ ತಗೋಬೇಕು, ಹಾಗೆ ಮಾಡಬೇಕು- ಹೀಗೆ ಮಾಡಬೇಕು ಎಂದೆಲ್ಲಾ. ಆದರೆ ಯಾರೂ ಅವನ ಬಳಿ ತುಂಬಾ ದುಡ್ಡಿರಬೇಕು, ಶ್ರೀಮಂತ ಆಗಿರಬೇಕು, ಐಷಾರಾಮಿ ಮನೆ ಇರಬೇಕು ಎಂದೆಲ್ಲಾ ಹೇಳುವುದೇ ಇಲ್ಲ. ಹಾಗಂತ ಇವೆಲ್ಲಾ ಇರದ ಹುಡುಗನನ್ನು ನಟಿಯರು ಮದ್ವೆಯಾಗ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ನಟಿಯರ ಮಾತು ಇರಲಿ ಬಿಡಿ... ಈಗಿನ ಸಾಮಾನ್ಯ ಹುಡುಗಿಯರ ಡಿಮಾಂಡ್ ಕೇಳಿದ್ರೆ ಇನ್ಮುಂದೆ ಹುಡುಗರಿಗೆ ಮದ್ವೆನೇ ಆಗಲ್ವಾ ಎನ್ನುವಷ್ಟರ ಮಟ್ಟಿಗೆ ಯುವಕರು ಹೆದರೋದು ಇದೆ. ಆದರೆ ಹಾಗೆಂದು ಮೈಕ್ ಮುಂದೆ ಇಂಥ ಸತ್ಯವನ್ನು ಯಾರೂ ಹೇಳುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ.
ಇದೀಗ ನಟಿ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಕೂಡ ಮಾತನಾಡಿದ್ದು, ಇದಕ್ಕೆ ಇನ್ನಿಲ್ಲದಂತೆ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ನಟಿಗೆ ಕನಸಿನ ಹುಡುಗನ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಾಗಲೇ ನಟಿ ತಾವು ಲವ್ ಮ್ಯಾರೇಜ್ ಆಗೋದು ಎಂದಿದ್ದಾರೆ. ಅದನ್ನು ಬಿಟ್ಟು ಹುಡುಗನ ಕ್ವಾಲಿಟಿ ಏನಿರಬೇಕು ಎಂದು ಪ್ರಶ್ನಿಸಿದಾಗ ನಟಿ, ಆತ ಸ್ವಾವಲಂಬಿಯಾಗಿರಬೇಕು, ಬಹಳಷ್ಟು ಪ್ರೀತಿ ಕೊಡುವಂಥವರು ಆಗಿರಬೇಕು. ಒಳ್ಳೆಯ ಗುರಿ ಇರಬೇಕು, ಎಮೋಷನಲಿ ಇಂಟಲಿಜೆಂಟ್ ಆಗಿರಬೇಕು. ನಾನು ಬಹಳಷ್ಟು ಪ್ರೀತಿ ಕೊಡುತ್ತಾ ಹೋಗುತ್ತೇನೆ, ಆತನೂ ಪ್ರೀತಿ ಕೊಡುವವನು ಆಗಿರಬೇಕು ಎಂದಿದ್ದಾರೆ. ಅದಕ್ಕೆ ನಟಿಯ ಕಾಲೆಳೆಯುತ್ತಿರುವ ಪಡ್ಡೆ ಹೈಕ್ಳು, ಇವೆಲ್ಲಾ ಕ್ವಾಲಿಟಿ ನನ್ನಲ್ಲಿ ಇದೆ, ಪ್ರೀತಿಯ ಧಾರೆಯನ್ನು ನೀನು ಹೇಳಿದ್ದಕ್ಕಿಂತ ಹೆಚ್ಚಿಗೇ ಹರಿಸುತ್ತೇನೆ ಆದ್ರೆ ದುಡ್ಡು ಮಾತ್ರ ಇಲ್ಲ, ಮದ್ವೆ ಆಗ್ತಿಯಾ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ದುಡ್ಡು, ಆಸ್ತಿಯ ವಿಷ್ಯ ಮಾತೇ ಆಡಿಲ್ವಲ್ಲಾ ಎಂದು ಕೇಳಿದರೆ, ಇನ್ನು ಕೆಲವರು ನಟಿಯ ಮಾತಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಶೆಟ್ಟಿ ಕಥೆ ಏನು ಎಂದು ತರ್ಲೆ ಪ್ರಶ್ನೆ ಕೇಳಿದ್ದಾರೆ.
ಅಷ್ಟಕ್ಕೂ ನಟಿ ಸಾನ್ಯಾ ಅಯ್ಯರ್, ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು. ರೂಪೇಶ್ ಶೆಟ್ಟಿ ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದ ಸಾನ್ಯಾ ಅಯ್ಯರ್ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್ನಲ್ಲಿ ಕಾಣಿಸಿಕೊಂಡು ಫೇಮಸ್ ಆದರು.
ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್ ಆಗಿದ್ದು ಬಿಗ್ ಬಾಸ್ 9 ಸೀಸನ್ ಮೂಲಕ. ಭಾಗವಹಿಸಿದ್ದರು. ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರೋ ನಟಿ, ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಲೇ ಇರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.