Bigg Boss ಕಾರ್ತಿಕ್​ ಜೊತೆಗಿನ ಸಂಬಂಧವೇನು? ಓಪನ್​ ಆಗಿಯೇ ರಿವೀಲ್​ ಮಾಡಿದ ಸಂಗೀತಾ ಶೃಂಗೇರಿ

Published : Jul 14, 2025, 04:21 PM IST
Sangeetha Sringeri about Karthik Mahesh

ಸಾರಾಂಶ

ಬಿಗ್​ಬಾಸ್​ 10ರಲ್ಲಿ ಹೆಚ್ಚು ಸದ್ದು ಮಾಡಿದ್ದ ಜೋಡಿಗಳ ಪೈಕಿ ಸಂಗೀತಾ ಶೃಂಗೇರಿ ಮತ್ತು ವಿನ್ನರ್​ ಕಾರ್ತಿಕ್​ ಮಹೇಶ್​ ಅವರದ್ದು. ಇವರಿಬ್ಬರ ನಡುವೆ ಇರುವುದೇನು? ಈ ಬಗ್ಗೆ ಓಪನ್​ ಆಗಿಯೇ ಮಾತನಾಡಿದ್ದಾರೆ ಸಂಗೀತಾ 

ಬಿಗ್ ಬಾಸ್ 10ರ ಮನೆಯಲ್ಲಿ ಲವ್​ ವಿಷಯ ಬಂದಾಗ ಹೆಚ್ಚು ಸದ್ದು ಮಾಡಿದ್ದ ಜೋಡಿ ಎಂದರೆ ಅದು ಕಾರ್ತಿಕ್ ಮಹೇಶ್​ ಮತ್ತು ಸಂಗೀತಾ ಶೃಂಗೇರಿ. ಬಿಗ್​ಬಾಸ್ ಮನೆಯಲ್ಲಿ ಮೊದಲ ದಿನವೇ ಇಬ್ಬರ ನಡುವೆ ಬಹಳಷ್ಟು 'ಕೆಮೆಸ್ಟ್ರಿ' ಕಂಡು ಬಂದಿತ್ತು. 'ಫಸ್ಟ್ ಒಳ್ಳೇ ಇಂಪ್ರಶನ್' ಎಂಬ ಚರ್ಚೆಯಲ್ಲಿ ಕೂಡ ಸಂಗೀತಾ 'ಕಾರ್ತಿಕ್ ಮಹೇಶ್' ಹೆಸರು ಹೇಳಿದ್ದರೆ, ಕಾರ್ತಿಕ್ ಸಂಗೀತಾ ಹೆಸರನ್ನೇ ಹೇಳಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್​ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್​ಬಾಸ್​ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು. ಇದೇ ವೇಳೆ ಒಂದು ಹಂತದಲ್ಲಿ ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿಗೆ ಅದೇನಾಯಿತು. ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು.

ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಇಬ್ಬರೂ ಮತ್ತೆ ಫ್ರೆಂಡ್​ ಆದರು ಎನ್ನಲಾಗಿತ್ತು. ಈಗಲೂ ಕಾರ್ತಿಕ್​ ಹೆಸರು ಬಂದರೆ ಅಲ್ಲಿ ಸಂಗೀತಾ ಹೆಸರು ಜೋಡಣೆಯಾಗುವುದು ಇದೆ. ಈ ಬಗ್ಗೆ ರ್ಯಾಪಿಡ್​ ರಶ್ಮಿ ಷೋನಲ್ಲಿ ಕೇಳಿದ ಪ್ರಶ್ನೆಗೆ ಓಪನ್​ ಆಗಿಯೇ ಕೆಲವೊಂದು ವಿಷಯಗಳನ್ನು ಮಾತನಾಡಿದ್ದಾರೆ ಸಂಗೀತಾ. ನಾನು ಒಬ್ಬ ಹುಡುಗನ ಜೊತೆಗೆ ಜಾಸ್ತಿ ಮಾತನಾಡಿದೆ ಎಂದ ತಕ್ಷಣ ಆತ ಬಾಯ್​ಫ್ರೆಂಡೇ ಆಗಬೇಕೆಂದೇನೂ ಇಲ್ಲ. ಬರಿ ಸ್ನೇಹಿತ ಆಗಿರಬಹುದು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಕೆಲವೊಮ್ಮೆ ಕೆಲವೊಂದು ಸಂಬಂಧ ವರ್ಕ್​ ಆಗ್ತಾ ಇಲ್ಲ ಎಂದರೆ ಅದನ್ನು ಬಗೆಹರಿಸಲು ಮಾತನಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಒಂದು ವೇಳೆ ಅದು ಸಾಧ್ಯವೇ ಇಲ್ಲ ಎಂತಾದರೆ ಬಿಟ್ಟು ಮುಂದಕ್ಕೆ ಹೋಗಬೇಕು ಅಷ್ಟೇ. ಹಾಗೆಂದು ಲೈಫ್​ ಟೈಮ್​ ನಾವಿಬ್ಬರೂ ಮಾತನಾಡುವುದೇ ಇಲ್ಲ ಅಂತೇನೂ ಅಲ್ಲ ಎನ್ನುವ ಮೂಲಕ ತಮ್ಮಿಬ್ಬರ ಸಂಬಂಧ ಯಾವ ರೀತಿಯದ್ದು ಎಂದು ಸಂಗೀತಾ ಹೇಳಿದ್ದಾರೆ.

ಯಾರದ್ದೋ ಜೋಡಿ ತುಂಬಾ ಚೆನ್ನಾಗಿದೆ ಎಂದ ಮಾತ್ರಕ್ಕೆ ಲೈಫ್​ ಲಾಂಗ್ ಒಟ್ಟಿಗೇ ಇರಬೇಕು ಅಂತೇನೂ ಇಲ್ಲ. ನೀವಿಬ್ಬರೂ ಸಕತ್​ ಚೆನ್ನಾಗಿ ಕಾಣಿಸ್ತೀರಿ, ಹೀಗೆ ಜೊತೆಯಾಗಿ ಇರಿ ಎಂದೂ ಯಾರಾದರೂ ಹೇಳುವಲ್ಲಿಯೇ ಅರ್ಥವಿಲ್ಲ. ನಾವೆಲ್ಲರೂ ದೊಡ್ಡವರಾಗಿದ್ವಿ, ನಮ್ಮ ಡಿಸಿಜನ್​ ನಾವು ತೆಗೆದುಕೊಳ್ಳಲು ಶಕ್ಯರಾಗಿದ್ದೇವೆ. ಸಂಬಂಧಗಳ ವಿಷಯದಲ್ಲಿ ಯಾರೂ ಫೋರ್ಸ್​ ಮಾಡಬಾರದು. ಎಲ್ಲರಿಗೂ ಮೆಚುರಿಟಿ ಇರಬೇಕು. ನಮ್ಮ ಲೈಫ್​ನಲ್ಲಿ ಯಾರು ಇರಬೇಕು ಎನ್ನುವ ಡಿಸಿಷನ್​ ತೆಗೆದುಕೊಳ್ಳುವ ಕೆಪ್ಯಾಸಿಟಿ ಎಲ್ಲರಿಗೂ ಇದೆ ಎಂದಿದ್ದಾರೆ.

ಈ ಹಿಂದೆ ಇದೇ ಪ್ರಶ್ನೆ ಕಾರ್ತಿಕ್​ ಅವರಿಗೂ ಎದುರಾಗಿತ್ತು. ಸಂಗೀತಾ ಮತ್ತು ನಿಮ್ಮ ನಡುವೆ ಅಷ್ಟೊಂದು ಬಾಂಡಿಂಗ್​ ಇತ್ತು. ಮೊದಲಿಗೆ ಸಿಕ್ಕಾಪಟ್ಟೆ ಸ್ನೇಹಿತರಾಗಿದ್ರಿ, ಆಮೇಲೆ ಏಕಾಏಕಿ ತುಂಬಾ ದೂರವಾದ್ರಿ. ಕಾರಣವೇನು ಎಂಬ ಪ್ರಶ್ನೆಗೆ ಕಾರ್ತಿಕ್​ ಅದು ಸಲ್ಲಿನ ಸಿಚುಯೇಷನ್​ಗೆ ಹಾಗಾಯ್ತು ಅಷ್ಟೇ. ಫ್ರೆಂಡ್​ಷಿಪ್​ ಚೆನ್ನಾಗಿಯೇ ಇತ್ತು. ಆದರೆ ಇಬ್ಬರ ಯೋಚನೆ ನಂತರ ಬೇರೆ ಬೇರೆಯಾಗಲು ಶುರುವಾಯ್ತು. ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ. ಅದು ದಿನ ಕಳೆದಂತೆ ಹೆಚ್ಚಾಗುತ್ತಾ ಇಬ್ಬರ ನಡುವೆ ಅಂತರ ಹೆಚ್ಚಾಯ್ತು ಎಂದಿದ್ದರು. ನಂತರ ಬಿಗ್​ಬಾಸ್​ ಮನೆಯೊಳಕ್ಕೆ ಹೀಗಾಯ್ತು, ಈಗ ಬಿಗ್​ಬಾಸ್​ ಮನೆಯಿಂದ ಹೊರಬಂದ ಮೇಲೆ ಇಬ್ಬರೂ ಫ್ರೆಂಡ್​ಷಿಪ್​ ಮುಂದುವರೆಸುವಿರಾ ಎನ್ನುವ ಪ್ರಶ್ನೆಗೆ ಕಾರ್ತಿಕ್​, ಸರಿಯಾಗಿ ಉತ್ತರಿಸದೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದರು. ಫ್ರೆಂಡ್​ಷಿಪ್​ನಿಂದ ದೂರ ಇರುತ್ತೇನೆ ಎಂದು ಅಲ್ಲ, ಫ್ರೆಂಡ್​ಷಿಪ್​ ಚೆನ್ನಾಗಿ ಇರಬೇಕು ಎನ್ನುವುದು ನನ್ನ ಆಸೆ ಎಂದಷ್ಟೇ ಹೇಳಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌