ಬಿಗ್‌ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್‌ ಆಗಿತ್ತಂತೆ!

Published : Dec 31, 2018, 04:46 PM ISTUpdated : Dec 31, 2018, 04:47 PM IST
ಬಿಗ್‌ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್‌ ಆಗಿತ್ತಂತೆ!

ಸಾರಾಂಶ

ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು  ಬಿಗ್‌ ಬಾಸ್ ಮನೆ ಪ್ರವೇಶ ಮಾಡಿದ್ದ ಮೇಘಶ್ರೀ ಮನೆಯಿಂದ ಹೊರಬಿದ್ದಿದ್ದಾರೆ.  ಆದರೆ ಇದ್ದ ಎರಡೆ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಬ್ಬರ ಮೇಲೆ ಲವ್ ಆಗಿತ್ತಂತೆ? ಯಾರ ಮೇಲೆ?

ಮೇಘಶ್ರೀ ಬಿಗ್  ಬಾಸ್ ಮನೆಯಲ್ಲಿ  ಇದ್ದಿದ್ದು ಎರಡೇ ವಾರ. ಆದರೆ ಸಖತ್ತಾಗೆ ರಂಜಿಸಿದ್ದರು. ಸಗಣಿ ಬಳಿದು ನಾಮಿನೇಶನ್ ಮಾಡುವಾಗ ಬರೋಬ್ಬರಿ ಳು ಜನ ಅವರ ಚಿತ್ರಕ್ಕೆ ಸಗಣಿ ಮೆತ್ತಿದ್ದರು.

ಒಮ್ಮೆ ಮಾತನಾಡುತ್ತ ಮೇಘಶ್ರೀ ಈ ಮನೆಯಲ್ಲಿ ನನಗೆ ಯಾರು ನೋವು ಮಾಡಿಲ್ಲ ಎಂದು ಹೇಳುವ ಬದಲು ಯಾರು ಲವ್ ಮಾಡಿಲ್ಲ ಎಂದು ಹೇಳೀದ್ದರು. ಸೂಪರ್ ಸಂಡೇ ಯಲ್ಲಿ ಸುದೀಪ್ ಇದನ್ನೆ ಇಟ್ಟುಕೊಂಡು ಕಾಲೆಳೆದರು.

ಆ್ಯಂಡಿ ಪರ್ಫ್ಯೂಮ್ ಹುಚ್ಚಾಟ... ಅಯ್ಯಯ್ಯೋ ಕವಿತಾ ಆರೋಪ!

ಆದರೆ ಬಿಗ್ ಬಾಸ್ ಮನೆಯಲ್ಲಿ ನಿಮಗೆ ಒಬ್ಬರ ಮೇಲೆ ಲವ್ ಆಗಿತ್ತಲ್ಲ? ಎಂದು ಪ್ರಶ್ನೆ ಎಸೆದರು. ಮೇಘಶ್ರೀ ಇಲ್ಲ..ಆಗೇ ಇಲ್ಲ ಎಂದರು. ಇದಾದ ಮೇಲೆ ಸುದೀಪ್ ಸಮಜಾಯಿಸಿ ನೀಡಿದರು.

ನಿಮಗೆ ಲವ್ ಆಗಿದ್ದು ಬಿಗ್ ಬಾಸ್ ಮೇಲೆಯೇ...ಮೆಕಪ್ ಮಾಡಿಕೊಳ್ಳುವಾಗ ಕ್ಯಾಮರಾ ಹತ್ತಿರ ಬಂದಾಗ ಬಿಗ್ ಬಾಸ್ ಉದ್ದೇಶಿಸಿಯೇ ಮಾತನ್ನಾಡುತ್ತಿದ್ದೀರಿ ಎಂದು ಹೇಳಿದರು.

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?