
ಮುಂಬೈ[ಡಿ.28]: ಅತ್ಯುತ್ತಮ ಕಲಾವಿದ ಹಾಗೂ ಅದ್ಭುತ ಡೈಲಾಗ್ ರೈಟರ್ ಕಾದರ್ ಖಾನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ತಂದೆಯ ಕುರಿತಾಗಿ ಮಾಹಿತಿ ನೀಡಿದ ಇವರ ಮಗ, ತನ್ನ ತಂದೆ ಮೆದುಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಸದ್ಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದಾರೆ.
ಕಾದರ್ ಪ್ರೊಗ್ರೆಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸೀ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಕೊನೆಯ ಬಾರಿ 2015ರಲ್ಲಿ ತೆರೆ ಕಂಡ 'ದಿಮಾಗ್ ಕಾ ದಹೀ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದಿರ್ಘ ಸಮಯದಿಂದ ಅವರು ಕೆನಡಾದಲ್ಲಿರುವ ತಮ್ಮ ಮಗ ಸರ್ಫರಾಜ್ ಹಾಗೂ ಸೊಸೆ ಶಾಹಿಸ್ತಾರೊಂದಿಗಿದ್ದರು.
300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಾದರ್ ಸಂವಾದ ಲೇಖನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಆಕರ್ಷಕ ಧ್ವನಿ ಹಾಗೂ ಅದ್ಭುತ ಕಾಮಿಕ್ ಟೈಮಿಂಗ್ ಗೆ ಸುಪ್ರಸಿದ್ಧರಾಗಿರುವ ಕಾದರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
90ರ ದಶಕದಲ್ಲಿ ನಟ ಗೋವಿಂದಾ ಹಾಗೂ ಕಾದರ್ ಖಾನ್ ಜೋಡಿಯನ್ನು ಹಿಟ್ ಫಾರ್ಮುಲಾ ಎಂದೇ ಕರೆಯಲಾಗುತ್ತಿತ್ತು. ಇವರಿಬ್ಬರೂ ದೂಲ್ಹೇ ರಾಜಾ, ಕುಲೀ ನಂಬರ್ 1, ರಾಜಾ ಬಾಬೂ ಹಾಗೂ ಆಂಖೆ ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.