
ಅತಿ ಹೆಚ್ಚು ಸಾರಿ ಬಣ್ಣ ಬಳಿದ ಶಶಿ ಹೊಸ ನಾಯಕರಾಗಿ ಆಯ್ಕೆಯಾದರು. ಕ್ಯಾಪ್ಟನ್ ಶಶಿ ಮಾಡಿದ ಕಿಚನ್ ತಂಡ, ಸ್ವಚ್ಛ ತಂಡದ ಬಗ್ಗೆ ಸ್ಪರ್ಧಿಗಳ ನಡುವೆ ಭಾರಿ ಚರ್ಚೆ ನಡೆಯಿತು. ಈ ನಡುವೆ ರವಿ ಅವರಿಗೆ ಜವಾಬ್ದಾರಿ ನೀಡಲು ಮುಂದಾದರೂ ಅವರು ನನಗೆ ಉಪನಾಯಕತ್ವ ಬೇಡ ಎಂದು ದೂರ ಸರಿದರು.
ಆಹಾರ ವಸ್ತು ಗೆಲ್ಲಲು ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದ್ದರು. ಗೋಲು ಹೊಡೆಯುವ ಚಟುವಟಿಕೆಯಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ರವಿ, ಶಶಿ ಸೇರಿದಂತೆ ಕೆಲವರು ಮಾತ್ರ ಚೆಂಡನ್ನು ಸೇರಿಸಿ ಚಿಕನ್ , ಮಟನ್ ಗೆದ್ದುಕೊಟ್ಟರು. ಸಸ್ಯಹಾರಿಗಳಿಗೆ ನಿರಾಸೆ ಕಾದಿತ್ತು.
ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಕೊಂಕು ಮತ್ತು ಕುಹಕದ ಮಾತುಗಳೇ ಜೋರಾಗಿದ್ದವು. ಕವಿತಾ ಗೌಡ ಅವರನ್ನು ಊಟಕ್ಕೆ ಬೇಕಾದ ಉಪ್ಪಿನಕಾಯಿ, ರಿಮೋಟ್ ಗೆ ಬ್ಯಾಟರಿ ಎಂದು ಆ್ಯಂಡಿ ಅಣಕವಾಡಿದರು.
ಇನ್ನೊಂದು ಕಡೆ ಜೈಲಿನಲ್ಲಿದ್ದ ಧನರಾಜ್ ನಾನು ಗೆಲ್ಲುವುದಕ್ಕಾಗೆ ಆಡುತ್ತಿದ್ದೇನೆ. ನಾಳೆಯಿಂದ ಗೇಮ್ ಪ್ಲಾನ್ ಬದಲಾಗುತ್ತದೆ ಎಂದರು. ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋಲು ಹೊಡೆದಿದ್ದು ಹೊರಗೆ ಹೋದಾಗ ಜಯಶ್ರೀ ಅಣಕವಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.