
ಬಿಗ್ ಬಾಸ್ ಮನೆ ಮಂದಿಗೆ ವಿಶೇಷ ಟಾಸ್ಕ್ ನೀಡಿದ್ದರು. ಕಾಮಿಡಿ ಶೋ ನಡೆಸಿಕೊಡಲು ಬಂದ ಆಂಡಿ ಮನೆ ಮಂದಿಯನ್ನು ತನ್ನದೇ ಭಾಷೆಯಲ್ಲಿ ವರ್ಣಿಸಲು ಆರಂಭಿಸಿದರು. ಮನೆ ಮಂದಿ ಯಾವ ವಸ್ತುವಿನ ತರಹ ಆಡುತ್ತಾರೆ ಎಂದು ಒಂದಾದ ಮೇಲೊಂದು ವಿವರಣೆ ನೀಡುತ್ತ ಸಾಗಿದರು.
ಶಶಿಯನ್ನು ಮನೆಯ ಗೋಡೆ ಕಾಂಟ್ರಾಕ್ಟರ್ ಎಂದ ಆಂಡಿ ಮನೆಯ ಎಲ್ಲೆಲ್ಲಿ ಗೋಡೆ ಸರಿಯಾಗಿಲ್ಲ ಎಂದು ಪರಿಶೀಲನೆ ನಡೆಸುತ್ತಿರುತ್ತಾರೆ. ಧನರಾಜ್ ಮನೆಯ ಸ್ಪೀಕರ್, ಅನೌಂಸರ್, ನವೀನ್ ಸಜ್ಜು ಮನೆಯ ಕ್ಯಾಮರಾ, ರಾಕೇಶ್ ಮನೆಯ ದೊಡ್ಡ ಖಾಲಿ ಡಬ್ಬ, ರಶ್ಮಿ ಕಿಚನ್ ನಲ್ಲಿರುವ ಮಸಾಲೆ ಪೌಡರ್..ಮನೆಗೆ ಬಂದಾಗ ಕಾರದಪುಡಿಯಾಗಿದ್ದವರು ಈಗ ಮೈದಾ ಹಿಟ್ಟು ಆಗಿದ್ದಾರೆ. ಕವಿತಾ ಬಿಗ್ ಬಾಸ್ ಮನೆಯ ಕಣ್ಣು.. ಅವರು ಓಡಾಡುತ್ತಿದ್ದರೆ ಎಲ್ಲರಿಗೂ ಸಂತಸ.. ಇನ್ನು ಅಕ್ಷತಾ ಬಿಗ್ ಬಾಸ್ ಮನೆಯ ಟಿವಿ.. ವಾರಾಂತ್ಯಕ್ಕೆ ಅವಳದ್ದೆ ಆಟ ಆಡುತ್ತಾಳೆ ಎಂದು ಹೇಳುತ್ತಾ ಹೋದರು.
ಬಿಗ್ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್ ಆಗಿತ್ತಂತೆ!
ಇದಕ್ಕೆ ಉತ್ತರಿಸಿದ ಮನೆ ಮಂದಿ ನೀನು ಏನು ಎಂದು ಪ್ರಶ್ನೆ ಮಾಡಿದರು. ನನ್ನನ್ನು ನಾನು ಹೊಲಿಸಿಕೊಳ್ಳಲ್ಲ ಎಂದಾಗ ಮನೆ ಮಂದಿ ಆಂಡಿ ಮೇಲೆ ಎಗರಿ ಬಿದ್ದರು. ಮೊದಲು ಮಾತನಾಡಿದ ಧನರಾಜ್ ಆಂಡಿಯನ್ನು ನಾಯಿಗೆ ಹೋಲಿಸಿದರು. ನೀನು ಪಮೇರಿಯನ್ ನಾಯಿ ತರ ಕೊನೆಗೆ ಮಾಲೀಕನಿಗೆ ಕಚ್ಚಿ ಬಿಡುತ್ತೆ. ಇದಕ್ಕೆ ದನಿ ಗೂಡಿಸಿದ ರಾಕೇಶ್ ನೀನು ಮನೆಯ ಬಾತ್ ರೂಂ ನಲ್ಲಿ ಇರವ ಕಮೋಡ್.. ಅದಕ್ಕೆ ಶೇಪ್ ಇಲ್ಲ.. ಅದನ್ನು ಕ್ಲೀನ್ ಮಾಡಲು ಬೇರೆಯವರು ಬಂದು ಫ್ಲಶ್ ಮಾಡಬೇಕು ಇದೇ ಕಮೋಡ್ ಆಂಡಿ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.