
ಬಿಗ್ ಬಾಸ್ ಮನೆಗೆ ಹೊಸ ನಾಯಕರ ಆಯ್ಕೆಯಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಜೀವಿತಾ ಬಿಗ್ ಬಾಸ್ ಮನೆಯ ಹೊಸ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಯಕರ ರೇಸ್‌ನಲ್ಲಿದ್ದವರಿಗೆ ಸಿ ಆಕಾರದ ವಸ್ತುವೊಂದನ್ನು ಕೊನೆಯವರೆಗೆ ಹಿಡಿದುಕೊಳ್ಳಲು ಹೇಳಲಾಗಿತ್ತು. ಶಶಿ, ಧನರಾಜ್, ಅಕ್ಷತಾ, ರಶ್ಮಿ ಮತ್ತು ಜೀವಿತಾ ನಡುವೆ ಸ್ಪರ್ಧೆ ಇತ್ತು. ತಾವು ಯಾಕೆ ಮನೆಯ ನಾಯಕರಾಗಬೇಕು ಎಂಬುದನ್ನು ಸಮರ್ಥಿಸಿಕೊಂಡು ಉಳಿಸವರು ಸಿ ಪಟ್ಟಿ ಬಿಟ್ಟು ಹೊರನಡೆಯುವಂತೆ ಮಾಡುವುದು ಪ್ರಮುಖ ಟಾಸ್ಕ್ ಆಗಿತ್ತು.
ದೊಡ್ಡ ಮನೆಯ ಮೇಲೆ ಪ್ರೇಕ್ಷಕರಿಗೆ ಮೂಡಿದ ಬಿಗ್ ಅನುಮಾನ?
ರಶ್ಮಿಯನ್ನು ಉಳಿದ ನಾಲ್ಕು ಜನ ಮೊದಲಿಗೆ ಹೊರಹಾಕಿದರು. ನೀವು ಹೊರನಡೆಯಿರಿ ಎಂದು ಹೇಳಿದರು. ಇಲ್ಲಿ ಗ್ರೂಪಿಸಂ ಆಗುತ್ತಿದೆ ಎಂದು ರಶ್ಮಿ ಆರೋಪ ಮಾಡಿದ್ದೂ ಆಯಿತು. ಇದಾದ ಮೇಲೆ ಅಕ್ಷತಾ ಹೊರನಡೆದರು. ಅಂತಿಮವಾಗಿ ಧನರಾಜ್ ಮತ್ತು ಶಶಿ ಪರಸ್ಪರ ಮಾತನಾಡಿಕೊಂಡು ಜೀವಿತಾಗೆ ನಾಯಕತ್ವ ಬಿಟ್ಟುಕೊಡುವ ತೀರ್ಮಾನ ಮಾಡಿದರು.
ಇದಕ್ಕಿಂತ ಮೊದಲು ಅದೇ ಹಳೆಯ ಗಂಡ-ಹೆಂಡತಿ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ವಾಕ್ ಸಮರವೇ ನಡೆಯಿತು. ಅದೇ ಹಳೆ ವಿಚಾರವನ್ನು ಯಾಕೆ ಕೆದಕುತ್ತಿಯಾ? ಮತ್ತೆ ಮತ್ತೆ ಯಾಕೆ ನಿನ್ನನ್ನು ಬಳಸಿಕೊಂಡೆ ಎಂದು ಹೇಳುತ್ತೀಯಾ ಎಂದು ರಾಕೇಶ್ ಅಕ್ಷತಾಗೆ ಪ್ರಶ್ನೆ ಮಾಡಿದರು. ಇದಕ್ಕೂ ಸರಿಯಾಗಿ ಉತ್ತರಿಸದ ಅಕ್ಷತಾ ‘ಹೋಗಲೋ’ ಎಂದು ಹೇಳಿ ಮುಂದಕ್ಕೆ ಹೋದಾಗ ಮನೆ ಮಂದಿ ಇಬ್ಬರ ನಡುವೆ ಏನಾಗುತ್ತಿದ? ಎಂದು ಮಾತನಾಡಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.