
ಬಿಗ್ ಬಾಸ್ ನೀಡಿದ್ದ ಕಾಲೇಜು ಟಾಸ್ಕ್ ಕೆಲವೊಮ್ಮೆ ಹಾದಿ ತಪ್ಪಿದರೂ ಮನೆಯ ಜನರಿಗೆ ಸಾಕಷ್ಟು ಫನ್ ನೀಡಿತು. ಮೇಘಶ್ರೀ, ನಿವೇದಿತಾ ಗೌಡ ಮತ್ತು ಜೀವಿತಾ ಪ್ರವೇಶದ ನಂತರ ಮನೆಯ ಗಂಡು ಮಕ್ಕಳಲ್ಲಿ ಹೊಸ ಪುಳಕ ಉಂಟಾಗಿರುವುದೆಂತೂ ನಿಜ.
ಮೊದಲಿಗೆ ಮನೆಯಲ್ಲಿ ಹಳಬರು ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರ ನಡುವೆ ತಮಾಷೆಯ ರೀತಿಯಲ್ಲಿ ವಾಗ್ಯುದ್ಧ ನಡೆಯಿತು. ನೀವು ನಮ್ಮನ್ನು 50 ದಿನಗಳ ಕಾಲ ನೋಡಿಕೊಂಡು ಒಂದು ಜಡ್ಜ್ ಮೆಂಟ್ ತೆಗೆದುಕೊಂಡು ಬಂದಿದ್ದೀರಿ.. ಆದರೆ ನೀವು ನೋಡಿರುವುದು ಕೇವಲ ಒಂದು ತಾಸು.. ಹೊರಗಡೆ ಕಿತ್ತಾಡುತ್ತೀರಿ ಎಂದುಕೊಂಡವರು ಇಲ್ಲಿ .. ಒಟ್ಟಿಗೆ ಇರುತ್ತೇವೆ.. ಎಂಧು ಮನೆಯವರು ತಮ್ಮ ವಾದ ಮುಂದಿಟ್ಟರು.
6 ರೂ ಚಿತ್ರಾನ್ನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸಿಕ್ಕ ನಿಧಿ..ರಿಯಲ್ ಸ್ಟೋರಿ
ನಿಮ್ಮ ನಿಮ್ಮಲ್ಲೆ ಒಡಕಿದೆ... ನೀವು ನೀವೆ ಕಿತ್ತಾಡಿಕೊಂಡು ಗ್ರೂಪ್ ಮಾಡಿಕೊಂಡಿದ್ದೀರಿ ಎಂದು ಹೊಸದಾಗಿ ಮನೆ ಪ್ರವೇಶ ಮಾಡಿದವರು ವಾದ ಮುಂದಿಟ್ಟರು. ಕಾಲೇಜು ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಶ್ಮಿ, ಜೀವಿತಾ, ಧನರಾಜ್, ಅಕ್ಷತಾ ಮುಂದಿನ ನಾಯಕತ್ವದ ಹಕ್ಕಿಗೆ ಆಯ್ಕೆಯಾದರು. ಆದರೆ ನಾಯಕತ್ವದ ಟಾಸ್ಕ್ ಎದುರಾದಾಗ ರಶ್ಮಿಗೆ ನೆರವು ನೀಡಬಾರದು ಎಂದು ಕವಿತಾ, ಜೀವಿತಾ ಮತ್ತು ಅಕ್ಷತಾ ತಮ್ಮ ನಡುವೆಯೇ ಮಾತನಾಡಿಕೊಂಡರು.
ನಿನ್ನೆಯ ಟಾಸ್ಕ್‌ನ ವೇಳೆ ಅಕ್ಷತಾ ರಾಕೇಶ್‌ಗೆ ತಮಾಷೆಯ ರೀತಿಯಲ್ಲಿ ಎರಡು ಏಟು ಹಾಕಿದ್ದರು. ಅದೇ ವಿಚಾರವನ್ನು ರಾಕೇಶ್ ಮತ್ತೆ ಅಕ್ಷತಾ ಬಳಿ ಮಾತನಾಡಿದರು. ಅಲ್ಲದೇ ನನ್ನ ಟಾಸ್ಕ್ ಹಾಳು ಮಾಡಿದ್ದು ನೀವೇ ಎಂದು ಅಕ್ಷತಾ ಮೇಲೆ ರೇಗಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.