
ಕಾಲ್ ಸೆಂಟರ್ ಟಾಸ್ಕ್ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ವಾತಾವರಣವನ್ನು ನಿರ್ಮಾಣ ಮಾಡಿತ್ತು. ನಿನ್ನೆ ಕರೆ ಮಾಡಿವರು ಇಂದು ಗ್ರಾಹಕ ಸೇವಾ ಸಿಬ್ಬಂದಿ ಆಗಿದ್ದರು. ಕನ್ನಡ ಮಾತನಾಡುವ ಬಗ್ಗೆ ಜಯಶ್ರೀ ರಾಕೇಶ್ ಅವರನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡರು.
ಗ್ರಾಹಕ ಸೇವಾ ಸಿಬ್ಬಂದಿ ಟಾಸ್ಕ್ ಸಖತ್ ಮನರಂಜನೆ ನೀಡಿತು. Rapid ರಶ್ಮಿಗೆ ರೀಪಿಟ್ ರಶ್ಮಿ ಎಂದು ನಯನಾ ಮರು ನಾಮಕರಣ ಮಾಡಿದರು. ಜಯಶ್ರೀ ರಾಕೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಮನೆಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು.
ಬಿಗ್‌ಬಾಸ್ ಮನೆಯಲ್ಲಿ ಮೊದಲ ಸಾರಿ ‘ಬೀಪ್’ ಸೌಂಡ್
ನವೀನ್‌ಗೆ ಕಾಲ್ ಮಾಡಿದ ಸೋನು ಪಾಟೀಲ್ ಮತ್ತೆ ಹಳೆ ಮುತ್ತಿನ ವಿಚಾರವನ್ನು ಎತ್ತಿದರು. ಆನಂದ್ ಅವರನ್ನು ಶಶಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಯಶ್ರೀ ಮಾತ್ರ ರಾಕೇಶ್‌ಗೆ ಹಿಗ್ಗಾ ಮುಗ್ಗಾ ಝಾಡಿಸಿದರು. ಅಕ್ಷತಾ ಅವರನ್ನು ನಾನು ಇಷ್ಟಪಡುತ್ತೇನೆ ಎಂದು ರಾಕೇಶ್ ಹೇಳಿಕೊಂಡರು.
ಆದರೆ ಟಾಸ್ಕ್ ಕೇವಲ ಪ್ರಶ್ನೆಗಳಲ್ಲೇ ಮುಗಿದಂತೆ ಕಂಡು ಬಂತು. ಉತ್ತರಗಳನ್ನು ನೀಡಲು ಕರೆ ಮಾಡಿದವರು ಅವಕಾಶ ನೀಡಲೇ ಇಲ್ಲ ಎಂದು ಹೇಳಬಹುದು. ಆ್ಯಂಡಿಗೆ ಕರೆ ಮಾಡಿದ ಕವಿತಾ, ಬೇರೆ ಹುಡುಗಿಗೆ ಚಿನ್ನು, ಬೇಬಿ ಎಂದು ಕರೆಯುವಂತೆ ಒತ್ತಡ ಹೇರುತ್ತಿರಲ್ಲಾ, ಬೇರೆಯವರ ಬಳಿ ಸನ್ನೆಯಲ್ಲೇ ಎಲ್ಲವನ್ನು ಹೇಳುತ್ತಿದ್ದೀರಲ್ಲ ಎಂದು ಪ್ರಶ್ನೆ ಎಸೆದರು. ಅಂತಿಮವಾಗಿ ಟಾಸ್ಕ್ ಮುಗಿದಿದ್ದು ರಶ್ಮಿ, ರಾಕೇಶ್, ನವೀನ್, ಅಕ್ಷತಾ, ಆ್ಯಂಡಿ, ಆನಂದ್, ಸೋನು ಇರುವ ತಂಡ ಸೋಲು ಕಂಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.