
ಬಿಗ್ ಬಾಸ್ ಮನೆಯಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರಿಗೆ ಹಾಡಿನ ನಮನ ಸಲ್ಲಿಸಲಾಯಿತು. ಬಾಡಿ ಬಿಲ್ಡರ್ ರವಿಗೆ ಹೊಸ ಕೇಶ ವಿನ್ಯಾಸ ಮಾಡಿದ್ದು ಶುಕ್ರವಾರ ಹೈಲೈಟ್. ರವಿ ಅವರ ಲುಕ್ ಡಿಫರೆಂಟಾಗಿ ಹೊರಬಂತು.
ನಂತರ ನಾಯಕನ ಆಯ್ಕೆ ಕುರಿತು ಕೆಲವು ಟಾಸ್ಕ್‌ಗಳನ್ನು ನೀಡಲಾಯಿತು. ಬಾಕ್ಸ್‌ನಲ್ಲಿ ಮರಳು ತುಂಬಿಸಿ ಅದನ್ನು ತೆಗೆಯುವ ಸವಾಲು ಹಾಕಲಾಯಿತು. ಆದರೆ ಆನಂದ ನಾಯಕನಾಗುವ ಅವಕಾಶ ಕಳೆದುಕೊಂಡರು.
ಬಾಕ್ಸ್‌ಗೆ ಮರಳು ತುಂಬಿಸುವ ಹಾಗೂ ಅದನ್ನು ತೆಗೆಯುವ ಟಾಸ್ಕ್‌ನಲ್ಲಿ ಗೆದ್ದ ಸೋನು ಪಾಟೀಲ್ ಮನೆಯ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾದರು. ನಂತರ ಕೆಲವು ಚರ್ಚೆ ನಡೆಯಿತು. ಆ ನಂತರ ಕ್ಯಾಪ್ಟನ್ ಸೋನು, ಅಡುಗೆ ಮಾಡುವ ತಂಡವನ್ನು ಆಯ್ಕೆ ಮಾಡಿದರು. ಶೌಚಾಲಯ ಸ್ವಚ್ಛಗೊಳಿಸಲು ಮನೆ ಸ್ಪರ್ಧಿಗಳಿಗೆ ಜವಾಬ್ದಾರಿ ನೀಡಿದರು.
ಅಕ್ಷತಾ ಮತ್ತು ರಾಕೇಶ್ ನಮ್ಮ ನಡುವೆ ಪ್ರೀತಿ-ಪ್ರೇಮ ಇಲ್ಲ. ಜಸ್ಟ್ ಸ್ನೇಹಿತರು ಎಂದು ಪದೇ ಪದೇ ಹೇಳಿದರು. ಈಜುಕೋಳದಲ್ಲಿ ಆ್ಯಂಡಿ ಧುಮುಕಿ ಮೇಲೆದ್ದರು. ಆದರೆ ಉತ್ತರ ಕರ್ನಾಟಕದ ಹುಡುಗಿ ಬಿಗ್ ಬಾಸ್ ಮನೆಗೆ ನಾಯಕಿಯಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.