ಡೆವಿಲ್ ಜೊತೆಯಾದ 'ಗಿಲ್ಲಿ' ನಟರಾಜ್, ದರ್ಶನ್ ನಟನೆಯ 'ದಿ ಡೆವಿಲ್‌' ಚಿತ್ರದಲ್ಲಿ ಬಿಗ್ ಬಾಸ್ ನಟನ ಮಿಂಚು!

Published : Nov 06, 2025, 12:31 PM ISTUpdated : Nov 06, 2025, 12:50 PM IST
Gilli Nataraj Darshan Thoogudeepa

ಸಾರಾಂಶ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದಲ್ಲಿ ಸದ್ಯ ಬಿಗ್ ಬಾಸ್ ಕನ್ನಡ 12ರಲ್ಲಿ ಮನೆಮಾತಾಗಿರುವ ‘ಗಿಲ್ಲಿ’ ನಟ ನಟರಾಜ್ ಅವರು ಮಿಂಚಿರೋದು ಅವರ ಅಭಿಮಾನಿಗಳಿಗೆ ಸಖತ್ ರೋಮಾಂಚನ ತಂದಿದೆ. ಯಾವ ಪಾತ್ರ? ದರ್ಶನ್ ಸ್ನೇಹಿತರಾ? ಸ್ಟೋರಿ ನೋಡಿ..

ದರ್ಶನ್ ನಟನೆಯ 'ದಿ ಡೆವಿಲ್' ಚಿತ್ರದಲ್ಲಿ ಗಿಲ್ಲಿ ನಟ ನಟರಾಜ್!

ಕನ್ನಡದ ಸ್ಟಾರ್ ನಟ, ಕೊಲೆ ಅರೋಪದಲ್ಲಿ ಸದ್ಯಕ್ಕೆ ಜೈಲು ಪಾಲಾಗಿರುವ ದರ್ಶನ್ ತೂಗುದೀಪ ಅವರ ಮುಂಬರುವ ಸಿನಿಮಾ 'ಡೆವಿಲ್' ಇದೇ ತಿಂಗಳು 12 ರಂದು (12 December 2025) ತೆರೆಗೆ ಬರಲಿದೆ. ಇದೀಗ ಡೆವಿಲ್ ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ 'ಶ್ರೀಜೈಮಾತಾ ಕಂಬೈನ್ಸ್' ರವರು ತಮ್ಮ ಡೆವಿಲ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಹಲವು ಕಲಾವಿದರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಇದೀಗ 'ಗಿಲ್ಲಿ' ಖ್ಯಾತಿಯ ನಟ ನಟರಾಜ್ ಅವರ ಪೋಸ್ಟರ್‌ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಗಿಲ್ಲಿ ನಟ ಅವರ ನಿಜವಾದ ಹೆಸರು ʻನಟರಾಜ್‌ʼ..

ಗಿಲ್ಲಿ ನಟ ಅವರ ನಿಜವಾದ ಹೆಸರು ʻನಟರಾಜ್‌ʼ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಗಿಲ್ಲಿ ನಟ ತಮ್ಮ 10ನೇ ತರಗತಿ ಪೂರ್ಣಗೊಳಿಸಿದ ನಂತರ 2 ವರ್ಷಗಳ ಕೋರ್ಸ್‌ ಐಟಿಐ ಮಾಡಿದ್ದಾರೆ. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ತಮ್ಮ ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿ ಡೈಲಾಗ್‌ನಲ್ಲಿ ಬಳಸಿಕೊಂಡು ಭಾರೀ ಜನಪ್ರಿಯತೆ ಪಡೆದಿದ್ದಾರೆ.

ʻಕಾಮಿಡಿ ಕಿಲಾಡಿಗಳು ಸೀಸನ್‌ 4ʼ ರಿಯಾಲಿಟಿ ಶೋ

ʻಕಾಮಿಡಿ ಕಿಲಾಡಿಗಳು ಸೀಸನ್‌ 4ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಗಿಲ್ಲಿ ರನ್ನರ್‌ ಅಪ್‌ ಪಟ್ಟ ಕೂಡ ಗಿಟ್ಟಿಸಿಕೊಂಡರು. ನಂತರ ಜೀ ಕನ್ನಡ ವಾಹಿನಿಯ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋನಲ್ಲಿ ಪ್ರಾಪರ್ಟಿ ಕಾಮಿಡಿ ಮಾಡುವ ಮೂಲಕ ಮತ್ತಷ್ಟು ವೀಕ್ಷಕರಿಗೆ ಗಿಲ್ಲಿ ಹತ್ತಿರವಾದರು. ಬಳಿಕ ʻಭರ್ಜರಿ ಬ್ಯಾಚುಲರ್ಸ್‌ʼ ರಿಯಾಲಿಟಿ ಶೋನಲ್ಲಿ ಗಿಲ್ಲಿ ಮಿಂಚಿದ್ದರು.

ಇತ್ತೀಚೆಗೆ ʻಕ್ವಾಟ್ಲೆ ಕಿಚನ್ʼ ಕುಕ್ಕಿಂಗ್‌ ಶೋನಲ್ಲಿಯೂ ಗಿಲ್ಲಿ ʻಕ್ವಾಟ್ಲೆʼ ಆಗಿ ಕಾಣಿಸಿಕೊಂಡಿದ್ದರು. ಸದ್ಯ ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ತಮ್ಮ ನಿಜವಾದ ಆಟದ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವಿನ್ನರ್ ಕಾಂಡಿಡೇಟ್ ಎಂದೇ ಗಿಲ್ಲಿ ನಟ ನಟರಾಜ್ ಅವರನ್ನು ಹೈಲೈಟ್ ಮಾಡಲಾಗುತ್ತಿದೆ. ಇದೀಗ ನೋಡಿದರೆ, ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ಕೂಡ ಗಿಲ್ಲಿ ಮಿಂಚಿರೋದು ಅವರ ಅಭಿಮಾನಿಗಳಿಗೆ ಸಖತ್ ರೋಮಾಂಚನ ತಂದಿದೆ.

ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ನಟನೆಯ, ಇದೇ ತಿಂಗಳು 12ರಂದು ತೆರೆಗೆ ಬರಲಿರುವ ‘ದಿ ಡೆವಿಲ್’ ಸಿನಿಮಾದಲ್ಲಿ ಈ ಗಿಲ್ಲಿ ನಟ ನಟರಾಜ್ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಭಾರೀ ರೋಮಾಂಚನ ತಂದಿದೆ. ಬಿಡುಗಡೆಯಾಗಿರುವ ಪೋಸ್ಟರ್‌ ನೋಡಿ ಸಾಕಷ್ಟು ಮೆಚ್ಚುಗೆ ಕಾಮೆಂಟ್‌ಗಳು ಹರಿದು ಬಂದಿವೆ. ನಟ ದರ್ಶನ್‌ ಜೊತೆ ಗಿಲ್ಲಿ ಯಾವ ಪಾತ್ರದಲ್ಲಿ ಮಿಂಚಿದ್ದಾರೆ? ಸ್ನೇಹಿತನ ಪಾತ್ರವೇ ಅಥವಾ ವಿಲನ್ ಅಗಿ ಅಬ್ಬರಿಸದ್ದಾರಾ? ಸಖತ್ ರಗಡ್ ಲುಕ್‌ ಅಂತೂ ಪೋಸ್ಟರ್‌ನಲ್ಲಿ ಕಾಣಿಸುತ್ತಿದೆ. ಗಿಲ್ಲಿ ನಟ ‘ದಿ ಡೆವಿಲ್‌’ನಲ್ಲಿ ಯಾವ ಪಾತ್ರ ಮಾಡಿದ್ದಾರೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. 

ಇನ್ನೇನು ಮುಂದಿನ ವಾರ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ತೆರೆಗೆ ಬರಲಿದೆ. ಆದರೆ, ಈ ಚಿತ್ರದ ನಾಯಕನಟ ದರ್ಶನ್ ತೂಗುದೀಪ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರ ಗೈರು ಹಾಜರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ದರ್ಶನ್ ಫ್ಯಾನ್ಸ್‌ಗೆ ಈ ಬಗ್ಗೆ ಬಹಳಷ್ಟು ಬೇಸರವಂತೂ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!