ಬಿಗ್ ಬಾಸ್ ಮನೆಯ ಈ ಪ್ರಣಯ ಪಕ್ಷಿಗಳಿಗೆ ಈಗ ವಿರಹ ವೇದನೆಯಂತೆ...!

Published : Nov 04, 2016, 10:37 AM ISTUpdated : Apr 11, 2018, 12:57 PM IST
ಬಿಗ್ ಬಾಸ್ ಮನೆಯ ಈ ಪ್ರಣಯ ಪಕ್ಷಿಗಳಿಗೆ ಈಗ ವಿರಹ ವೇದನೆಯಂತೆ...!

ಸಾರಾಂಶ

ಸಾಮ್ರಾಜ್ಯದ ಟಾಸ್ಕ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಜನಾ ಮತ್ತು ಭುವನ್‌ನಡುವೆ ಪತ್ರದ ಕುರಿತಾಗಿ ಗೊಂದಲದಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದರಿಂದಾಗಿ ಜೋಡಿ ಮಾತನಾಡುವುದನ್ನೇ ನಿಲ್ಲಿಸಿತ್ತು. 

ಬೆಂಗಳೂರು(ನ.04): ದಿನದಿಂದ ದಿನಕ್ಕೆ ರಂಗೇರುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಗೂಡು ಕಟ್ಟುತ್ತಿರುವ ಹೊಸ ಪ್ರಣಯ ಪಕ್ಷಿಗಳಿಗೆ ಸದ್ಯ ವಿಹರ ವೇದನೆ ಕಾಡುತ್ತಿದೆ. ಟಾಸ್ಕ್ ವೊಂದರಲ್ಲಿ ಮುನಿಸಿಕೊಂಡ ಸಂಜನಾ ಮತ್ತು ಭುವನ್‌ ಜೋಡಿಯನ್ನು ಒಂದು ಮಾಡಲು ಮನೆಯ ಸದಸ್ಯರೇ ಮುಂದಾಗಿದ್ದಾರೆ. 

ಸಾಮ್ರಾಜ್ಯದ ಟಾಸ್ಕ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಜನಾ ಮತ್ತು ಭುವನ್‌ ನಡುವೆ ಪತ್ರದ ಕುರಿತಾಗಿ ಗೊಂದಲದಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದರಿಂದಾಗಿ ಜೋಡಿ ಮಾತನಾಡುವುದನ್ನೇ ನಿಲ್ಲಿಸಿತ್ತು. 

ಈ ಘಟನೆಯಿಂದ ದೂರ-ದೂರ ಆಗಿದ್ದ ಭುವನ್‌ಸಂಜನಾ ಅವರನ್ನು ಮೊದಲು ರೇಗಿಸಿದ ಕೀರ್ತಿ, ಶಾಲಿನಿ ಮತ್ತು ಕಾವ್ಯಾ ಕಾಲೆಳೆದು ನಂತರ ಇಬ್ಬರು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದ ಈ ಜೋಡಿ ಮತ್ತೇ ಮಾತನಾಡಲು ಆರಂಭಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!