ಮುಖ-ಮೈಗೆಲ್ಲಾ ರಕ್ತದ ಕಲೆ, ಶೂಟಿಂಗ್‌ನಲ್ಲಿ ಪ್ರಥಮ್‌ಗೆ ಫೈರಿಂಗ್; 'ನೋ ಕೊಕೇನ್‌'ನಲ್ಲಿ ಏನ್ ನಡಿತಿದೆ?

Published : Jul 16, 2025, 04:19 PM ISTUpdated : Jul 16, 2025, 04:20 PM IST
Olle Huduga Pratham

ಸಾರಾಂಶ

ಎರಡು ದಿವಸಗಳಿಂದ ಪ್ರಯಾಣ, ಶೂಟಿಂಗ್‌ದಲ್ಲಿ ಇರುವುದರಿಂದ ಬಳಲಿದ್ದಾರೆ. ಆದಕಾರಣ ಅವರು ವಿಶ್ರಾಂತಿಗೆ ಹೋದರು. ಇಷ್ಟುವರ್ಷದ ಅನುಭವಗಳನ್ನು ಬುಟ್ಟಿಗೆ ಹಾಕಿಕೊಂಡು, ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಅದೇ ರೀತಿ ಚಿತ್ರವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ.

ಬಿಗ್ ಬಾಸ್ ವಿಜೇತ, ವಾಗ್ಮಿ, ’ಕರ್ನಾಟಕ ಅಳಿಯ’ ಖ್ಯಾತಿಯ ಪ್ರಥಮ್ (Olle Huduga Pratham) ನಾಯಕ, ಹಿರಿಯ ಸಾಹಸ ಸಂಯೋಜಕ ಕೌರವ ವೆಂಕಟೇಶ್ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ 'ನೋ ಕೋಕೇನ್' ಸಿನಿಮಾದ ಸೂಕ್ಷ ದೃಶ್ಯದ ಚಿತ್ರೀಕರಣ ಬನ್ನೇರುಘಟ್ಟ ರಸ್ತೆಯಲ್ಲಿರುವ ವೈಟ್ ಹೌಸ್ ಬಿಲ್ಡಿಂಗ್‌ದಲ್ಲಿ ನಡೆಯುತ್ತಿತ್ತು. 'ದಿ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್' ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ.

ಅಂದು ಕಲಾವಿದರುಗಳಾದ ಶೋಭರಾಜ್, ಸಿದ್ಲಿಂಗು ಶ್ರೀಧರ್, ಜಗದೀಶ್‌ಕೊಪ್ಪ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯಭಗವಾನ್ ದಾಸ್ ಸೆಟ್‌ದಲ್ಲಿ ಹಾಜರಿದ್ದರು. ಪತ್ರಕರ್ತರುಗಳು ಸೆಟ್‌ಗೆ ಭೇಟಿ ನೀಡಿದಾಗ ಪ್ರಥಮ್ ಮುಖ ಹಾಗೂ ಮೈ ತುಂಬಾ ರಕ್ತದ ಕಲೆಯಲ್ಲಿ ಕಾಣಿಸಿಕೊಂಡರು. ಶಾಟ್ ಓಕೆ ಆದಾಗ ತಂಡವು ಮಾತಿಗೆ ಕುಳಿತುಕೊಂಡತು.

ಪ್ರಥಮ್ ಮಾತನಾಡಿ ಇಂದು ನಡೆಯತ್ತಿರುವ ಸನ್ನಿವೇಶವು ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಿಕ್ಕಾಟದ ಸುದ್ದಿ ಹೋಲುತ್ತದೆ. ಸಿದ್ಲಿಂಗು ಸರ್ ಅವರೊಂದಿಗೆ ಇದೇ ವಿಷಯವಾಗಿ ಮಾತಾಡಿಕೊಂಡಿದ್ದೇವು. ಟಾಲಿವುಡ್‌ನ ಸೂರ್ಯಭಗವಾನ್ ದಾಸ್ ಅವರು ಮೊದಲ ಬಾರಿ ಗೃಹ ಸಚಿವರ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.

ಎರಡು ದಿವಸಗಳಿಂದ ಪ್ರಯಾಣ, ಶೂಟಿಂಗ್‌ದಲ್ಲಿ ಇರುವುದರಿಂದ ಬಳಲಿದ್ದಾರೆ. ಆದಕಾರಣ ಅವರು ವಿಶ್ರಾಂತಿಗೆ ಹೋದರು. ಇಷ್ಟುವರ್ಷದ ಅನುಭವಗಳನ್ನು ಬುಟ್ಟಿಗೆ ಹಾಕಿಕೊಂಡು, ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಅದೇ ರೀತಿ ಚಿತ್ರವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯಮಾಡಿ ಒಪ್ಪಿಸಿಕೊಳ್ಳಬೇಕೆಂದು ಅನುಭವಗಳನ್ನು ಹಂಚಿಕೊಂಡರು.

 

ಕೌರವವೆಂಕಟೇಶ್ ಮಾತನಾಡಿ ಕೇಂದ್ರ ರಕ್ಷಣಾ ಸಚಿವರಾಗಿ ಸಿದ್ಲಿಂಗು ಶ್ರೀಧರ್, ಗೃಹ ಸಚಿವ, ಪೋಲೀಸ್ ಆಯುಕ್ತರೊಂದಿಗೆ ಕೋಕೇನ್ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿರುವಾಗ ನಾಯಕನ ಆಗಮನವಾಗುತ್ತದೆ. ಸೆಕ್ಯೂರಿಟಿ ಅವರುಗಳನ್ನು ಭೇದಿಸಿ ಬಂದಿದ್ದರಿಂದ, ನಮ್ಮ ಮೇಲೆ ಆಕ್ರಮಣ ಮಾಡಲು ಬಂದಿದ್ದರಂದು ಅನುಮಾನಿಸಿ ಫೈರಿಂಗ್ ಮಾಡಿದಾಗ, ಅಲ್ಲಿಗೆ ಇಂಟರ್‌ವೆಲ್. ಆತ ಏತಕ್ಕೆ ಬಂದ? ಹೇಳುವುದಾದರೂ ಏನಿತ್ತು? ಇದಕ್ಕೆಲ್ಲಾ ಉತ್ತರ ಚಿತ್ರ ನೋಡಿದರೆ ತಿಳಿಯುತ್ತದೆ. ಇಲ್ಲಿಯವರೆಗೂ 25 ದಿವಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಇನ್ನು ಬಾಕಿ ಹತ್ತು ದಿನದಲ್ಲಿ ಕ್ಲೈಮಾಕ್ಸ್‌ನ್ನು ಮಂಗಳೂರು, ಒಂದು ಹಾಡಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಇದೆ ಎಂದರು. ಒಬ್ಬ ಪೋಲೀಸ್ ಆಯುಕ್ತ ಎಷ್ಟು ಒಳ್ಳೆಯವನು ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ಪ್ರಥಮ್ ಇದ್ದರೆ ಶೂಟಿಂಗ್ ಸುಲಭವೆಂದು ಶೋಭರಾಜ್ ಹೇಳಿದರು.

 

ನಾಯಕಿ ಆರನ ಮೂಳೇರ್, ಉಳಿದಂತೆ ರಚಿತಾ, ಮಿಮಿಕ್ರಿಗೋಪಿ, ರವಿಕಾಳೆ ಮುಂತಾದವರು ಅಭಿನಯಿಸಿದ್ದಾರೆ. ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ