ಇಂದಿನಿಂದ ಕನ್ನಡದ ಮೋಸ್ಟ್ ಪಾಪ್ಯುಲರ್ ಶೋ ಬಿಗ್ ಬಾಸ್ ಅಸಲಿ ಆಟ ಶುರುವಾಗಲಿದೆ. ಈ ಬಾರಿಯೂ ಕೂಡ ಸೆಲೆಬ್ರಿಟಿಗಳೊಂದಿಗೆ ಜನಸಾಮಾನ್ಯರು ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಾರೆ.
ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲ್ಲಿದೆ. ಈ ವೇಳೆ ಇಲ್ಲಿಗೆ ಜನ ಸಾಮಾನ್ಯರಿಗೂ ಕೂಡ ಪ್ರವೇಶ ನೀಡಲಾಗುತ್ತಿದೆ. ಎಲ್ಲೆಡೆ ಕೇಳಿಬರುತ್ತಿರುವ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇವರೆಲ್ಲಾ ಇರಲಿದ್ದಾರೆ.
ಇನ್ನು ಸುಮ್ಮನೆ ಹರಿದಾಡುವ ಸಾಲಿನಲ್ಲಿ ಗಡ್ಡಪ್ಪ, ನಟಿ ವಿಜಯಲಕ್ಷ್ಮಿ, ನಳಪಾಕದ ರಾಜ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ ಮುಂತಾದವರು ಇರಲಿದ್ದಾರೆ ಎನ್ನಲಾಗಿದೆ.