ಪುನೀತ್ ರಾಜ್‌ಕುಮಾರ್ ನಡೆಸಿಕೊಡಲಿದ್ದಾರೆ ಪ್ರಸಿದ್ಧ ರಿಯಾಲಿಟಿ ಶೋ

Published : Oct 16, 2018, 09:58 AM IST
ಪುನೀತ್ ರಾಜ್‌ಕುಮಾರ್ ನಡೆಸಿಕೊಡಲಿದ್ದಾರೆ ಪ್ರಸಿದ್ಧ ರಿಯಾಲಿಟಿ ಶೋ

ಸಾರಾಂಶ

ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಬಹುತೇಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ಕನ್ನಡದ ಈ ಪ್ರಸಿದ್ಧ ರಿಯಾಲಿಟಿ ಶೋ ಅನ್ನು ಮತ್ತೆ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿದ್ದಾರೆ

ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋದ ಸೀಸನ್ 12 ಮತ್ತು 3 ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸೀಸನ್ 1 ಮತ್ತು 2 ಅನ್ನು ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು. ಸೀಸನ್ 2 ಕಾರ್ಯಕ್ರಮವನ್ನು ರಮೇಶ್
ಅರವಿಂದ್ ನಡೆಸಿಕೊಟ್ಟಿದ್ದರು. ಆದರೆ ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ ಎನ್ನಲಾಗಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಹಕ್ಕು ಬಿಗ್ ಸಿನರ್ಜಿ ಸಂಸ್ಥೆಯ ಬಳಿಯಲ್ಲಿದೆ.

ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕು ಸದ್ಯ ಸ್ಟಾರ್ ಸುವರ್ಣ ಬಳಿ ಇಲ್ಲ. ಆ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಕಲರ್ಸ್ ಕನ್ನಡ ವಾಹಿನಿಯು ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ರಾಜ್‌ಕುಮಾರ್ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಪುನೀತ್ ಕಲರ್ಸ್ ವಾಹಿನಿಗೆ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ವರ್ಷ ಮತ್ತೊಂದು ರಿಯಾಲಿಟಿ ಶೋ ನಡೆಸಿಕೊಡುವುದಂತೂ ನಿಶ್ಚಿತ. ಆ ಕಾರ್ಯಕ್ರಮ ‘ಫ್ಯಾಮಿಲಿ ಪವರ್’ ಆಗುತ್ತದೋ ಅಥವಾ ‘ಕನ್ನಡದ ಕೋಟ್ಯಧಿಪತಿ’ ಸೀಸನ್ 4 ಆಗುತ್ತದೋ ಇನ್ನೂ ನಿಶ್ಚಯವಾಗಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?