ಲೀಕ್ ಆಯ್ತು ಬಿಗ್ ಬಾಸ್ 4 ಸ್ಪರ್ಧಿಗಳ ಲಿಸ್ಟ್...! ಯಾರ್ ಹೋಗ್ತಾರೆ 'ಬಿಗ್ ಮನೆಯೊಳಗೆ'..?

Published : Sep 13, 2016, 12:44 PM ISTUpdated : Apr 11, 2018, 01:09 PM IST
ಲೀಕ್ ಆಯ್ತು ಬಿಗ್ ಬಾಸ್ 4 ಸ್ಪರ್ಧಿಗಳ ಲಿಸ್ಟ್...! ಯಾರ್ ಹೋಗ್ತಾರೆ 'ಬಿಗ್ ಮನೆಯೊಳಗೆ'..?

ಸಾರಾಂಶ

ಬೆಂಗಳೂರು(ಸೆ.13): ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ 4 ಆರಂಭಕ್ಕೆ ಸಿದ್ದತೆಗಳು ನಡೀತಿದೆ. ಈಗಾಗಲೇ ರಿಲೀಸಾಗಿರೋ ಟೀಸರ್ ಸಖತ್ ಸದ್ದು ಮಾಡ್ತಿದೆ. ಈ ಕಾರ್ಯಕ್ರಮದ ಬಗ್ಗೆ ಏನೆ ಕಾಮೆಂಟ್ ಹರಿದಾಡಿದರು ಕ್ರೇಜ್ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. 

ಬಿಗ್ ಬಾಸ್ ಮನೆಯಲ್ಲಿ ಈ ಯಾರೆಲ್ಲಾ ಸ್ಪರ್ಧಿಗಳು ಇರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಅಕ್ಟೋಬರ್ ನಿಂದ ಆರಂಭವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೆಲೆಬ್ರೇಟಿಗಳ ಲಿಸ್ಟ್ ಲೀಕ್ ಆಗಿದೆ. 

ಬಿಗ್ ಬಾಸ್ ನಲ್ಲಿ ನವೀನ್ ಕೃಷ್ಣ!
ಈ ಬಾರಿ ನವೀನ್ ಕೃಷ್ಣ ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರೆ ಅನ್ನೋ ಸುದ್ದಿ ಓಡಾಡ್ತಿದೆ. ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸ್ಕೊಂಡಿರುವ ನವೀನ್ ಕೃಷ್ಣಗೆ ಬಿಗ್ ಬಾಸ್ 4ನಿಂದ ಕರೆಹೋಗೋ ಸಾಧ್ಯತೆಯಿದೆ.

ಲಿಸ್ಟ್ ನಲ್ಲಿ ರಾಗಿಣಿ!
ಬಿಗ್ ಬಾಸ್ 4 ಗೆ ಆಹ್ವಾನಿಸೋದಿಕ್ಕೆ ರೆಡಿಯಾಗಿರೋ ಸೆಲೆಬ್ರೇಟಿಗಳ ಲಿಸ್ಟ್ ನಲ್ಲಿ ರಾಗಿಣಿ ಹೆಸರು ಕೂಡ ಇದೆ. ತುಪ್ಪದ ಹುಡುಗಿ ಬಿಗ್ ಬಾಸ್ 4 ನಲ್ಲಿ ಭಾಗವಹಿಸಲಿದ್ದಾರೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ

ಯೋಗಿಗೆ ಬಿಗ್ ಬಾಸ್ ಯೋಗ!
ಲೂಸ್ ಮಾದ ಯೋಗಿಯ ಸಿನಿಮಾಗಳು ಅಷ್ಟೊಂದು ಸದ್ದು ಮಾಡ್ತಿಲ್ಲ. ಇದ್ನೆ ಎನ್ ಕ್ಯಾಶ್ ಮಾಡೋದಿಕ್ಕೆ ಹೊರಟಿರೋ ಬಿಗ್ ಬಾಸ್ ಟೀಂ ಯೋಗಿಯನ್ನು ಮನೆಯಲ್ಲಿ ಕೂರಿಸೋದಿಕ್ಕೆ ಪ್ಲಾನ್ ಮಾಡ್ಕೊಂಡಿದೆ. ಬಿಗ್ ಬಾಸ್ ಸೀಸನ್ 1ರಲ್ಲಿ ಯೋಗಿ ಗೆಸ್ಟಾಗಿ ಎಂಟ್ರಿಕೊಟ್ಟಿದ್ದರು.

ಬಿಗ್ ಬಾಸ್4 ನಲ್ಲಿ ಕೋಮಲ್ ಕಾಮಿಡಿ
ಬಿಗ್ ಬಾಸ್ ಮನೆಗೆ ಕರಿಯೋದಿಕ್ಕೆ ಮಾಡಿರೋ ಮೊದಲ ಲಿಸ್ಟ್ ನಲ್ಲಿ ನಟ ಕೋಮಲ್ ಹೆಸರು ಕೂಡ ಇದೆ. ಕೋಮಲ್ ಎಂಟ್ರಿಗೆ ಒಪ್ಪಿಕೊಂಡರೆ ಬಿಗ್ ಬಾಸ್ ಮನೆಯಲ್ಲಿ ನಗೆಹಬ್ಬ ಗ್ಯಾರಂಟಿ.

ಇವರ ಜೊತೆಗೆ ಸುಧಾರಾಣಿ, ಅನು ಪ್ರಭಾಕರ್, ತಾರಾ, ಗಾನಾಬಜಾನ ತರುಣ್ ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಗ್ ಬಾಸ್ ಮನೆಗೆ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಹೆಚ್ಚಿನ ಆದ್ಯತೆ ಇರುತ್ತೆ.
ಈ ಬಾರಿ ದೊಡ್ಡ ಕಾಂಟ್ರವರ್ಸಿ ಮಾಡ್ದೋರು ಯಾರು ಸಿಗ್ತಿಲ್ಲ. ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿಯಾಗೋದಿಕ್ಕೆ ಸೆಲೆಬ್ರೀಟಿಗಳು ಅಷ್ಟೊಂದು ಆಸಕ್ತಿ ವಹಿಸ್ತಿಲ್ಲ ಅನ್ನೋ ಮಾತುಗಳು ಕೇಳಿಬರ್ತಿದೆ. ಹೀಗಿದ್ದರು ಬಿಗ್ ಬಾಸ್ 4 ನಲ್ಲಿ ಯಾರಿರ್ತಾರೆ ಅನ್ನೋ ಪ್ರಶ್ನೆಗೆ ಅಕ್ಟೋಬರ್ ಕೊನೆಯ ವಾರ ಉತ್ತರ ಸಿಗಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!