ಟ್ಯೂನ್‌ಗೂ ಮೊದಲೇ ಹುಟ್ಟಿದ್ದ ಗೀತೆ ಇಂದಿಗೂ ಕನ್ನಡಿಗರ ಉಸಿರು; ಲವ್ ಸ್ಟೋರಿಗಳ ನಡುವೆ ಒಂದು ಯುಗದ ವೈಭವ ಸಾರಿದ ಕಥೆಯೇ ರೋಚಕ

Published : Nov 19, 2026, 01:12 PM IST
Hit Kannada Song

ಸಾರಾಂಶ

1992ರಲ್ಲಿ ತೆರೆಕಂಡ 'ಬೆಳ್ಳಿ ಕಾಲುಂಗುರ' ಚಿತ್ರದ 'ಕೇಳಿಸದೆ ಕಲ್ಲು ಕಲ್ಲಿನಲಿ' ಗೀತೆಯು ಟ್ಯೂನ್‌ಗೂ ಮುನ್ನವೇ ರಚನೆಯಾದ ಇತಿಹಾಸ ಹೊಂದಿದೆ. ವಿಜಯನಗರದ ಗತವೈಭವದ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾ ಕೋಟ್ಯಂತರ ರೂಪಾಯಿ ಗಳಿಸಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಮಾಲಾಶ್ರೀ ಹಾಗೂ ಸುನಿಲ್ ಅವರ ಅಭಿನಯ ಮತ್ತು ಹಂಸಲೇಖರ ಸಂಗೀತ ಚಿತ್ರವನ್ನು ಅಮರವಾಗಿಸಿದೆ.

90 ದಶಕದಲ್ಲಿ ಹಲವಾರು ಚಿತ್ರವನ್ನು ನೋಡುತ್ತೇವೆ. ಅದರಲ್ಲಿ ಅಂತೆ, ಕಂತೆ ಸಂತೆಗಳ ಲವ್‌ಸ್ಟೋರಿ ಮಾತ್ರ ನಮಗೆ ಸಿಗುತ್ತವೆ. ಆದರೆ ಈ ಚಿತ್ರದ ಕಥೆ ಒಂದು ಅಮರ ಪ್ರೇಮಕಥೆ, ಒಂದು ಯುಗದ ವೈಭವದ ಜೊತೆಗೆ ಸಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ಸೃಷ್ಟಿಯಾದ ಒಂದು ಹಾಡು ಇಂದಿಗೂ ಕನ್ನಡಿಗರ ಮನೆ-ಮನದಲ್ಲೂ ಮನೆ ಮಾಡಿದೆ. ಆ ಹಾಡು ಟ್ಯೂನ್ ಆಗುವ ಮೊದಲೇ ಸೃಷ್ಟಿಯಾಗಿದ್ದು ಇತಿಹಾಸ. ಹಾಗಾದರೆ ಆ ಗೀತೆ ರಷಿಸಿದ್ದು ಯಾರು, ಅದು ಯಾವ ಚಿತ್ರ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಇದೆ ನೋಡಿ ಆ ಚಿತ್ರ! 

1992ರಲ್ಲಿ ತೆರೆಕಂಡ 'ಬೆಳ್ಳಿ ಕಾಲುಂಗುರ' ಸಿನಿಮಾವನ್ನು ಕೆ.ವಿ. ರಾಜು ನಿರ್ದೇಶಿಸಿದ್ದು, ಸಾ.ರಾ. ಗೋವಿಂದು ನಿರ್ಮಾಣ ಮಾಡಿದ್ದರು. ಮಾಲಾಶ್ರೀ ಮತ್ತು ಸುನಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಟ್ಯೂನ್‌ಗೂ ಮೊದಲೇ ಹುಟ್ಟಿದ ಎವರ್‌ಗ್ರೀನ್ ಹಾಡು ಅದು. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಸಂಯೋಜನೆಗೂ ಮೊದಲೇ, ನಿರ್ಮಾಪಕರ ಕೋರಿಕೆಯ ಮೇರೆಗೆ ಡಾ. ದೊಡ್ಡರಂಗೇಗೌಡರು ಕೇವಲ 3 ದಿನಗಳಲ್ಲಿ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಗೀತೆ ಬರೆದಿದ್ದರು. ಈ ಹಾಡು 34 ವರ್ಷಗಳ ನಂತರವೂ ಕನ್ನಡ ರಾಜ್ಯೋತ್ಸವದ ಪ್ರಮುಖ ಗೀತೆಯಾಗಿ ಉಳಿದಿದೆ.

ಸಾಮಾನ್ಯ ಲವ್ ಸ್ಟೋರಿಗಳಿಗಿಂತ ಭಿನ್ನವಾದ ಕಥೆ!

90ರ ದಶಕದಲ್ಲಿ ಕೇವಲ ಪ್ರೀತಿ-ಪ್ರೇಮ, ಡುಯೆಟ್ ಹಾಡುಗಳಿಗೆ ಸೀಮಿತವಾಗಿದ್ದ ಸಿನಿಮಾಗಳ ನಡುವೆ, ಈ ಚಿತ್ರವು ವಿಜಯನಗರ ಸಾಮ್ರಾಜ್ಯದ ಗತವೈಭವ, ಪುರಾತತ್ವ ಸಂಶೋಧನೆ, ನಾಗದೇವತೆಯ ರಹಸ್ಯ ಮತ್ತು ನಾಡಿನ ಪರಂಪರೆಯನ್ನು ಉಳಿಸುವ ಗಟ್ಟಿ ಕಥಾಹಂದರವನ್ನು ಹೊಂದಿತ್ತು. ಕೇವಲ ಹಾಡಿಗಷ್ಟೇ ಸೀಮಿತವಾಗದೆ, ಸಿನಿಮಾದ ಬಹುತೇಕ ಕಥೆ ಮತ್ತು ಕ್ಲೈಮ್ಯಾಕ್ಸ್ ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ ಮತ್ತು ಅಲ್ಲಿನ ಐತಿಹಾಸಿಕ ಪರಿಸರದಲ್ಲೇ ಚಿತ್ರೀಕರಣಗೊಂಡು ವಿಜಯನಗರದ ವೈಭವವನ್ನು ತೆರೆಯ ಮೇಲೆ ತಂದಿತ್ತು.

ರೋಚಕ ಮೇಕಿಂಗ್ ಮತ್ತು ಬಾಕ್ಸ್ ಆಫೀಸ್ ದಾಖಲೆ!

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿ ಮಾಲಾಶ್ರೀ ಯಾವುದೇ ಡ್ಯೂಪ್ ಬಳಸದೆ ಬೆಟ್ಟದ ತುದಿಯಿಂದ ತಲೆಕೆಳಗಾಗಿ ನೇತಾಡಿ ಸಾಹಸ ದೃಶ್ಯದಲ್ಲಿ ನಟಿಸಿದ್ದರು. ಸುಮಾರು 35-40 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೋಟ್ಯಂತರ ರೂಪಾಯಿ ಗಳಿಸಿ, 25 ವಾರಗಳ ಭರ್ಜರಿ ಪ್ರದರ್ಶನ ಕಂಡಿತ್ತು.

ಅಮರ ಪ್ರೇಮದ ಸಂಕೇತವಾದ ಬೆಳ್ಳಿ ಕಾಲುಂಗುರ!

ಈ ಸಿನಿಮಾದಲ್ಲಿ ಬೆಳ್ಳಿ ಕಾಲುಂಗುರ ಕೇವಲ ಆಭರಣವಲ್ಲ, ಅದು ವಿಜಯನಗರ ಕಾಲದ ಇತಿಹಾಸ ಮತ್ತು ನಾಯಕ-ನಾಯಕಿಯರ ನಡುವಿನ ನಿಷ್ಕಲ್ಮಶ ಪ್ರೀತಿಯ ಕೊಂಡಿಯಾಗಿ ಕಥೆ ಮುನ್ನಡೆಸುತ್ತದೆ. ಇಂದಿನ ಕಾಲದ ಲವ್ ಸ್ಟೋರಿಗಳಿಗಿಂತ ಭಿನ್ನವಾಗಿ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಇಲ್ಲಿ ಹೆಚ್ಚಿನ ಮಹತ್ವ ನೀಡಲಾಗಿತ್ತು. ಸಾಮಾನ್ಯವಾಗಿ 'ಸಾಂಗ್ಲಿಯಾನ'ದಂತಹ ರಗಡ್ ಪೊಲೀಸ್ ಮತ್ತು ಆಕ್ಷನ್ ಸಿನಿಮಾಗಳಿಗೆ ಹೆಸರಾಗಿದ್ದ ನಿರ್ದೇಶಕ ಕೆ.ವಿ. ರಾಜು ಅವರು, ತಮ್ಮ ಶೈಲಿಯನ್ನು ಬದಲಿಸಿ ಕನ್ನಡ ನಾಡಿನ ಇತಿಹಾಸ, ಭಕ್ತಿ ಮತ್ತು ಕೌಟುಂಬಿಕ ಮೌಲ್ಯಗಳನ್ನು ಬೆರೆಸಿ ಈ ಮಾಸ್ಟರ್‌ಪೀಸ್ ನೀಡಿದ್ದರು.

ದಿಗ್ಗಜ ಕಲಾವಿದರ ಸಮಾಗಮ ಮತ್ತು ಸಂಗೀತದ ಮೋಡಿ!

ಮಾಲಾಶ್ರೀ-ಸುನಿಲ್ ಜೊತೆಗೆ ತಾರಾ, ದೊಡ್ಡಣ್ಣ, ಅವಿನಾಶ್, ಗಿರಿಜಾ ಲೋಕೇಶ್ ಅವರಂತಹ ಅದ್ಭುತ ಕಲಾವಿದರ ಅಭಿನಯ ಚಿತ್ರಕ್ಕೆ ಜೀವ ತುಂಬಿತ್ತು. ಜೊತೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ ಮೂಡಿಬಂದ ಹಾಡುಗಳು ಈ ಚಿತ್ರವನ್ನು ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಕ್ಲಾಸಿಕ್ ಸಾಲಿಗೆ ಸೇರಿಸಿದವು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಳ್ಳಿ ಪವರ್-ರಿ ಲೋಡೆಡ್ ರಿಯಾಲಿಟಿ ಶೋ ವಿನ್ನರ್ ಯಾರು? ವಿಜೇತರಿಗೆ ಸಿಗೋ ಹಣ ಎಷ್ಟು?
ನಿರ್ದೇಶನದಲ್ಲಿ ಗೆದ್ದ ಶಾರುಖ್ ಪುತ್ರ ಆರ್ಯನ್ ಖಾನ್.. ಪ್ರತಿಷ್ಠಿತ TIME ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಸ್ಥಾನ ಪಡೆದು ಹೊಸ ದಾಖಲೆ