ಕವಿತಾ ಮೇಲೆ ಜನಾಂಗೀಯ ನಿಂದನೆ ಆರೋಪ ಮಾಡಿದ ಆ್ಯಂಡಿ!

Published : Feb 18, 2019, 12:01 PM IST
ಕವಿತಾ ಮೇಲೆ ಜನಾಂಗೀಯ ನಿಂದನೆ ಆರೋಪ ಮಾಡಿದ ಆ್ಯಂಡಿ!

ಸಾರಾಂಶ

  ಅದ್ಯಾಕೋ ಬಿಗ್‌ಬಾಸ್ ಸೀಸನ್-6ಗೂ, ಆರೋಪ, ಪ್ರತ್ಯಾರೋಪಕ್ಕೂ ಅಂಟಿರೋ ನಂಟು ಬಿಡೋ ತರ ಕಾಣಿಸ್ತಿಲ್ಲ. ಮನೆಯಿಂದ ಹೊರಬಂದ ಸ್ಪರ್ಧಿಗಳು ಒಂದೆಡೆ ಗೆಟ್ ಟುಗೆದರ್ ಮಾಡಿ, ಸ್ನೇಹ ಮುಂದುವರಿಸೋ ಬದಲು ಆರೋಪ, ಪ್ರತ್ಯಾರೋಪದಲ್ಲಿ ಬ್ಯುಸಿಯಾಗಿದ್ದಾರೆ.

 

ಬಿಗ್‌ಬಾಸ್ ಸೀಸನ್ - 6 ವಾರ್ ಯಾಕೋ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಆ್ಯಂಡಿ ಮತ್ತು ಕವಿತಾ ನಡುವೆ ಕಿತ್ತಾಟ ಮುಂದುವರಿಯುತ್ತಲೇ ಇದೆ.

ಮಹಿಳಾ ಆಯೋಗದ ಮುಂದೆ ಆ್ಯಂಡೂ ವಿರುದ್ಧ ಕಿರುಕುಳದ ಆರೋಪ ಹೊರಿಸಿ, ದೂರು ದಾಖಲಿಸಿದರೆ, ಆ್ಯಂಡಿ ಕವಿತಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪ ಮಾಡುತ್ತಿದ್ದಾರೆ.

 

ಬಿಬಿ ಮನೆಯಲ್ಲಿ ತಮಾಷೆ ಮಾಡಿಕೊಂಡು, ಎಲ್ಲರ ಕಾಲೆಳೆಯುತ್ತಿದ್ದಆ್ಯಂಡಿ ಕೆಲವರಿಗೆ ಆಪ್ತನಾಗಿದ್ದರೆ, ಮತ್ತೆ ಕೆಲವರಿಗೆ ಕಿರಿಕಿಯನ್ನು ಉಂಟು ಮಾಡುತ್ತಿದ್ದ. ಮನೆಯೊಳಗಿದ್ದಾಗ ಇರಲಿ, ಹೊರ ಬಂದ ಮೇಲೂ ಆ್ಯಂಡೂ ಆಡಿದ ಮಾತುಗಳು ನೋವುಂಟು ಮಾಡಿವೆ ಎಂದು ಕವಿತಾ ದೂರಿದ್ದಾರೆ. ಚಿನ್ನುವಿನ ಈ ಆರೋಪಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆ್ಯಂಡೂ ಪ್ರತ್ಯಾರೋಪ ಮಾಡಿದ್ದಾರೆ.

ಕಿರುಕುಳ: ಬಿಗ್‌ಬಾಸ್ ಸಹಸ್ಪರ್ಧಿ ಮೇಲೆ ದೂರು ದಾಖಲಿಸಿದ ನಟಿ

 

'ಮಜಾ ಟಾಕಿಸ್‌ನಲ್ಲಿ ಕವಿತಾಳಿಗೆ ಅವಮಾನಿಸುವಂತೆ ಮಾತನಾಡಿಲ್ಲ. ಅಲ್ಲದೆ ತಾನು ಕ್ರಿಶ್ವಿಯನ್ ಆದ ಕಾರಣ ಕವಿತಾಳಿಗೆ ನನ್ನ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಈ ರೀತಿ ಆರೋಪಿಸುತ್ತಿದ್ದಾರೆ,' ಎಂದು ಆ್ಯಂಡ್ಯೂ ಹೇಳುತ್ತಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಇವೆಲ್ಲಾ ನಿಜಾನಾ ಎಂದು ಆ್ಯಂಡೂ ಅವರನ್ನು ಪ್ರಶ್ನಿಸಿದಾಗ 'ಜನರು ನನ್ನ ತಪ್ಪುಗಳನ್ನು ಕ್ಷಮಿಸಿ, ಪ್ರೀತಿ ತೋರಿಸಿ ವಾರ ವಾರವೂ ಸೇವ್ ಮಾಡುತ್ತಿದ್ದರು. ಆದರೆ, ಒಮ್ಮೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೈಕ್ ಇಲ್ಲದಿದ್ದಾಗಲೂ ನನ್ನ ಧರ್ಮದ ಬಗ್ಗೆ ಕವಿತಾ ಕೆಟ್ಟದಾಗಿ ಮಾತನಾಡಿದ್ದರು. ಇದು ನನ್ನ ಮನಸ್ಸಿಗೆ ನೋವಾಗಿದ್ದರೂ, ನಾನೆಲ್ಲೂ ಹೇಳಿಕೊಂಡಿಲ್ಲ,' ಎಂದು ಆ್ಯಂಡೂ ಕವಿತಾ ಆರೋಪಕ್ಕೆ ಟ್ವಿಸ್ಟ್ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Bossನಿಂದ ಗಿಲ್ಲಿ ನಟ ಆಚೆ ಬಂದಾಯ್ತು ಎನ್ನುತ್ತಾ ಭರ್ಜರಿ ಪಾರ್ಟಿ ಅರೇಂಜ್​ ಮಾಡಿದ ಡಾಗ್​ ಸತೀಶ್​!
ಹೊಸ ಜೀವನ ಶುರು ಮಾಡಿದ 'ಬಿಗ್‌ ಬಾಸ್‌' Niveditha Gowda; ಈಗ ಎಲ್ಲವೂ ಮೊದಲಿನಂತಿಲ್ಲ!