ಬೆಂಗಳೂರಿನಲ್ಲಿ ಸಿನಿತಾರೆಯರ ಕನ್ನಡ ಹಬ್ಬ

Published : Dec 06, 2018, 11:10 AM ISTUpdated : Dec 06, 2018, 11:14 AM IST
ಬೆಂಗಳೂರಿನಲ್ಲಿ ಸಿನಿತಾರೆಯರ ಕನ್ನಡ ಹಬ್ಬ

ಸಾರಾಂಶ

ಬೆಂಗಳೂರು ಹಬ್ಬ, ಬೆಂಗಳೂರು ಫೆಸ್ಟಿವಲ್, ಬೆಂಗಳೂರು ಚಿತ್ರೋತ್ಸವದಂತೆ ಎಚ್‌ಎಸ್‌ಆರ್ ಹಬ್ಬ ಕೂಡ ನಡೆಯಲಿದೆ. ಕಳೆದ ಬಾರಿ ನಟಿ ಸ್ಫೂರ್ತಿ ವಿಶ್ವಾಸ್ ಅವರ ಸಾರಥ್ಯದಲ್ಲಿ ಈ ಎಚ್‌ಎಸ್‌ಆರ್ ಹಬ್ಬ ನಡೆದಿತ್ತು. ಈ ಬಾರಿ ಕಿರಣ್ ರೆಡ್ಡಿ ಹಾಗೂ ಕವಿತಾ ರೆಡ್ಡಿ ಸಾರಥ್ಯದಲ್ಲಿ ನಡೆಯುತ್ತಿದೆ.   

ಮಾನ್ವಿತ ಹರೀಶ್, ಕಾರುಣ್ಯರಾಮ್, ಕಾವ್ಯ ಶಾ, ಮಯೂರ್ ಪಟೇಲ್ ಈ ಬಾರಿಯ ಎಚ್ ಎಸ್‌ಆರ್ ಹಬ್ಬದ ಆಕರ್ಷಣೆಗಳು. ಕನ್ನಡ ಭಾಷೆಯ ಸೊಗಡು ತಿಳಿಸಲು ಎಚ್‌ಎಸ್‌ಆರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಭಾಗವಾಗಿ ಡಿ.7ರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್‌ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ಕಿರುಚಿತ್ರಗಳ ಸ್ಪರ್ಧೆ ನಡೆಯಲಿದೆ.

ಡಿ.8ರಂದು ಬೆಳಿಗ್ಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ, ತರಕಾರಿ ಮಾರಾಟ, ತೆರೆದ ರಸ್ತೆಯಲ್ಲಿ ಆಹಾರ ಮಳಿಗೆಗಳು, ನೃತ್ಯ ಸ್ಪರ್ಧೆ, ಫ್ಯಾಶನ್ ಶೋ, ಸಂಗೀತದ ಅನಾವರಣಗೊಳ್ಳಲಿದೆ. ಡಿ.9ರಂದು ಆರೋಗ್ಯಕ್ಕಾಗಿ ಓಟ ನಡೆಯಲಿದೆ. ಐದು ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಖರ್ಚನ್ನು ತಂಡ ಭರಿಸಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಅನುಶ್ರೀ ಮತ್ತು ನಿರಂಜನ್ ದೇಶಪಾಂಡೆ ಅವರು ನಡೆಸಿಕೊಡಲಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!