ಟ್ರೈಲರ್-ಸಾಂಗ್ ಮೂಲಕ ಭಾರೀ ನಿರೀಕ್ಷೆ; ಜೂನ್ 27ಕ್ಕೆ 'ಅವನಿರಬೇಕಿತ್ತು..'ರಾಜ್ಯದಾದ್ಯಂತ ರಿಲೀಸ್

Published : Jun 20, 2025, 01:43 PM ISTUpdated : Jun 20, 2025, 01:44 PM IST
Avanirabekittu Movie

ಸಾರಾಂಶ

ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಿದೆ.. ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಕಾಣ್ತಿಲ್ಲ.. ಹಾಡುಗಳಲ್ಲಿ ಇವ್ರ ಡ್ಯಾನ್ಸ್ ಮತ್ತು ಅಭಿನಯ..

'ಅವನಿರಬೇಕಿತ್ತು...' ಕನ್ನಡ ಚಿತ್ರರಂಗಕ್ಕೆ ಅಚ್ಚರಿಯಾಗಿ ಕಾಣ್ತಿರೋ ಹೊಸಬರ ಹೊಸ ಬಗೆಯ ಸಿನಿಮಾ. ಅಂದಕಾಲತ್ತಿಲ್.. ಇಂದ ಕಾಲತ್ತಿಲ್ ಹಾಡಿನಿಂದ ಗಮನ ಸೆಳೆದಿದ್ದ ಅವನಿರಬೇಕಿತ್ತು.. ಓ ಹೃದಯ ಅನ್ನೋ ಹಾಡಿನಿಂದ ಮತ್ತೊಂದು ಪಟ್ಟು ಭರವಸೆಯನ್ನ ಹೆಚ್ಚಿಸಿತ್ತು. ಈ ನಡುವೆ ಟ್ರೈಲರ್ ರಿಲೀಸ್ ಮಾಡಿ, ಇಡೀ ಉದ್ಯಮಕ್ಕೆ ಮೆರಗು ತರೋ ಸೂಚನೆ ನೀಡಿದೆ ಚಿತ್ರತಂಡ. ಅದಕ್ಕೆ ಸಾಕ್ಷಿ ಎಂಬಂತೆ ಆರ್ಗ್ಯಾನಿಕ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪ್ಪಟ ಕನ್ನಡ ಸಿನಿಪ್ರಿಯರಿಂದ ಪ್ರಶಂಸೆಗಳು ವ್ಯಕ್ತವಾಗ್ತಿವೆ.

 

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು.. ಗೆಳೆಯ ಮುರಳಿ ಬಿಟಿ ಅಶೋಕ್ ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು, ಹೊಸ ಬಗೆಯ ಕಥೆಯನ್ನ ಹೆಣೆದು, ವಿನೂತನ ಸ್ಕ್ರೀನ್ ಪ್ಲೇ ಜೊತೆಗೆ ಗುಣ ಮಟ್ಟದ ಮೇಕಿಂಗ್ ಮಾಡಿರೋ ಸಿನಿಮಾ ಅವನಿರಬೇಕಿತ್ತು.

ಅವನಿರಬೇಕಿತ್ತು... ಸಿನಿಮಾ ಹಲವಾರೂ ವಿಶೇಷ ವಿಚಾರಗಳಿಗೆ ಹೆಸರಾಗುವಂತೆ ಕಾಣ್ತಿದೆ.. ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಿದೆ.. ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಕಾಣ್ತಿಲ್ಲ.. ಹಾಡುಗಳಲ್ಲಿ ಇವ್ರ ಡ್ಯಾನ್ಸ್ ಮತ್ತು ಅಭಿನಯ ವಿಶೇಷವಾಗಿ ಕಾಣ್ತಿದೆ.. ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮೀ ದೇವಮ್ಮ ಸೇರಿದಂತೆ ಹಲವು ಅನುಭವಸ್ಥ ಕಲಾವಿದರು ಅವನಿರಬೇಕಿತ್ತು ಚಿತ್ರಕ್ಕೆ ಶಕ್ತಿಯಾಗಿದ್ದಾರೆ.

ನಿರ್ಮಾಪಕ ಮುರಳಿ ನಿರ್ದೇಶಕ ಅಶೋಕ್ ಹೊಸಬರೇ ಆದ್ರೂ ಅಪಾರ ಸಿನಿಮಾಸಕ್ತಿ, ಸಿನಿಮಾನುಭವವನ್ನ ಹೊಂದಿರೋ ಸ್ನೇಹಿತರು.. ಹಾಗಾಗಿ ಈ ಸಿನಿಮಾ ಪ್ರೇಕ್ಷಕನೊಬ್ಬ ನಿರ್ಮಾಪಕ ನಿರ್ದೇಶಕನಾಗಿ ಮಾಡಿದಂತೆ ಭಾಸವಾಗ್ತಿದೆ. ಈಗಾಗ್ಲೇ ಪ್ರಚಾರ ಕಾರ್ಯದಲ್ಲಿ ತಲ್ಲೀವಾಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನ ವಿತರಣೆ ಮಾಡಲು ಮುಂದಾಗಿರೋದು ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಪಟ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ಅವನಿರಬೇಕಿತ್ತು ಚಿತ್ರದ ಟ್ರೈಲರ್ ನ ನೋಡಿ ಪಿ.ಆರ್.ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಚಿತ್ರತಂಡವನ್ನ ಪ್ರಶಂಸಿಸಿದ್ದಾರೆ.

'ಅವನಿರಬೇಕಿತ್ತು..' ಸಿನಿಮಾ ಜೂನ್ 27ರಂದು ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ಅಂಶಗಳಿರೋ ಈ ಚಿತ್ರವನ್ನ ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಸದ್ಯದ ಕುತೂಹಲ. ಹೊಸ ಹುಡುಗ ಭರತ್ ನಟನೆ ಹಾಗೂ ಡಾನ್ಸ್‌ನಲ್ಲಿ 'ಸೂಪರ್' ಎನ್ನುವಂತೆ ಇದ್ದು, ಕನ್ನಡಕ್ಕೆ ಡಾನ್ಸ್ ಕೂಡ ಚೆನ್ನಾಗಿ ಮಾಡುವ ಮತ್ತೊಬ್ಬ ಭರವಸೆಯ ಹೀರೋ ಸಿಗಬಹುದು ಎಂಬ ನಿರೀಕ್ಷೆ ಈಗ ಮನೆ ಮಾಡಿದೆ. ಈ ಎಲ್ಲದಕ್ಕೂ ಇನ್ನೊಂದೇ ವಾರ ಕಾಯಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ಲೈಮ್ಯಾಕ್ಸ್‌ ಎಪಿಸೋಡ್‌ ಥರ ಪ್ರಸಾರ ಆಗ್ತಿರೋ Kannada Serials; ಯಾವ ಧಾರಾವಾಹಿ ಅಂತ್ಯ ಆಗಲಿದೆ?
ರೆಡ್ ಕಾರ್ಪೆಟ್ ಮೇಲೆ ಎದೆ ಕಾಣುವ ಉಡುಪು ತೊಟ್ಟ ಗಾಯಕಿ ಚಾಪೆಲ್ ರೋನ್; ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ Photos