ರಾಮಾಯಣ ಸಿನಿಮಾವನ್ನು 'ಲಾರ್ಡ್ ಆಫ್ ದಿ ರಿಂಗ್ಸ್‌'ಗೆ ಹೋಲಿಸುತ್ತಿರುವ ಪ್ರೇಕ್ಷಕರು

Published : Oct 29, 2026, 09:43 AM IST
Ramayana Advance Booking Day 1 Collection

ಸಾರಾಂಶ

'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಚಿತ್ರದ 3ಡಿ ಪ್ರೀಮಿಯರ್ ಪ್ರದರ್ಶನವು ಹಾಲಿವುಡ್‌ನ 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಚಿತ್ರವನ್ನು ಮೀರಿಸುವ ದೃಶ್ಯವೈಭವ ಹೊಂದಿದೆ ಎಂದು ಪ್ರೇಕ್ಷಕರು ಬಣ್ಣಿಸಿದ್ದಾರೆ. ರಣಬೀರ್ ಕಪೂರ್ ಅವರ ದೈವಿಕ ನಟನೆ ಹಾಗೂ ರಾವಣನಾಗಿ ಯಶ್ ಅವರ ಅಬ್ಬರದ ಅಭಿನಯ ಚಿತ್ರದ ಪ್ರಮುಖ ಹೈಲೈಟ್ ಆಗಿದೆ.

‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ 3ಡಿ ಪ್ರೀಮಿಯರ್ ಪ್ರದರ್ಶನದಲ್ಲಿ ಪಾಲ್ಗೊಂಡ ವಿಮರ್ಶಕರು ಹಾಗೂ ಅತಿಥಿಗಳು ಚಿತ್ರದ ಭವ್ಯತೆಗೆ ಮನಸೋತಿದ್ದಾರೆ. ಹಾಲಿವುಡ್‌ನ ಖ್ಯಾತ ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಕ್ಕಿಂತಲೂ ಮಿಗಿಲಾದ ದೃಶ್ಯವೈಭವ ಇಲ್ಲಿದೆ ಎಂದು ಪ್ರೇಕ್ಷಕರು ಬಣ್ಣಿಸಿದ್ದಾರೆ.

ಪ್ರಮುಖ ಸಿನಿ ವಿಮರ್ಶಕ ರಾಮಾ ಎಂಬುವವರು ಎಕ್ಸ್‌ನಲ್ಲಿ , ‘ರಾಮಾಯಣ ಒಂದು ಅದ್ಭುತ ದೃಶ್ಯ ವೈಭವ. ಚಿತ್ರದ ವಿಎಫ್‌ಎಕ್ಸ್, ನೃತ್ಯ, ಸಂಗೀತ ಮತ್ತು ಆ್ಯಕ್ಷನ್ ದೃಶ್ಯಗಳು ದೈತ್ಯ ಸ್ವರೂಪದಲ್ಲಿವೆ. ರಣಬೀರ್ ಕಪೂರ್ ನಟನೆ ಅತ್ಯಂತ ದೈವಿಕವಾಗಿದ್ದರೆ, ರಾವಣನ ಪಾತ್ರದಲ್ಲಿ ಯಶ್ ಅಯಸ್ಕಾಂತೀಯವಾಗಿ ಸೆಳೆಯುತ್ತಾರೆ’ ಎಂದು ಶ್ಲಾಘಿಸಿದ್ದಾರೆ.

ಯಶ್ ಅಭಿನಯವೇ ಚಿತ್ರದ ಅತಿದೊಡ್ಡ ಹೈಲೈಟ್

ರಾವಣನಾಗಿ ನಟಿಸಿರುವ ಯಶ್ ಅವರ ಅಬ್ಬರದ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಖಳನಾಯಕನ ಗಾಂಭೀರ್ಯ ಪ್ರೇಕ್ಷಕರನ್ನು ದಿಗ್ಮೂಢಗೊಳಿಸಿದೆ. ಹಲವು ಮಂದೆ, ಇಡೀ ಸಿನಿಮಾದಲ್ಲಿ ಯಶ್ ಅವರ ಪಾತ್ರ ಮತ್ತು ಅವರ ನಟನಾ ಶೈಲಿಯೇ ಚಿತ್ರದ ಅತಿದೊಡ್ಡ ಪ್ಲಸ್ ಪಾಯಿಂಟ್ ಹಾಗೂ ಹೈಲೈಟ್ ಆಗಿ ಮೂಡಿಬಂದಿದೆ ಎಂದಿದ್ದಾರೆ.

‘ಸಿನಿಮಾದ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ವಿಶಿಷ್ಟ ಪಾತ್ರದ ಝಲಕ್ ತೋರಿಸಲಾಗಿದೆ. 2028ರಲ್ಲಿ ಬಿಡುಗಡೆಯಾಗಲಿರುವ ಎರಡನೇ ಭಾಗವನ್ನು ಕಣ್ತುಂಬಿಕೊಳ್ಳಲು ಅತೀವ ನಿರೀಕ್ಷೆ ಹುಟ್ಟುಹಾಕಿದೆ’ ಎಂದು ಸಿನಿಪ್ರಿಯರು ಕೌತುಕ ವ್ಯಕ್ತಪಡಿಸಿದ್ದಾರೆ.

ಕಥನ ಶೈಲಿಗೆ ಮಿಶ್ರ ಪ್ರತಿಕ್ರಿಯೆ

ಒಂದೆಡೆ ಚಿತ್ರದ ಮೇಕಿಂಗ್ ಮತ್ತು ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ಕಥನ ಶೈಲಿಯ ವಿಚಾರದಲ್ಲಿ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡ ರಾಮಾಯಣದ ಮೂಲ ಕಥೆಗೆ ನಿಷ್ಠವಾಗಿದ್ದರೂ, ಭಾವನೆ ಮತ್ತು ನಾಟಕೀಯತೆಗಿಂತ ಹೆಚ್ಚಾಗಿ ಆ್ಯಕ್ಷನ್ ಹಾಗೂ ದೃಶ್ಯವೈಭವಕ್ಕೇ ಆದ್ಯತೆ ನೀಡಿದೆ ಎಂದು ವಿಮರ್ಶಕರೊಬ್ಬರು ಉಲ್ಲೇಖಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೇವಲ 1 ಡಾಲರ್‌ನಲ್ಲಿ ಬೆಂಗಳೂರಿನಿಂದ ವಿಯೆಟ್ನಾಂ ಪ್ರವಾಸ! ಆಫರ್ ಪಡೆಯುವುದು ಹೇಗೆ?
ಬಿಗ್ ಬಾಸ್ ಸ್ಪರ್ಧಿಗಳ 'ಹೋಮ್ ಟೂರ್' ಮಾಡಬೇಡಿ!: ಯೂಟ್ಯೂಬರ್ ಅಮಿತ್‌ಗೆ ಮನವಿ ಮಾಡಿದ ಕಲರ್ಸ್ ಕನ್ನಡ!