
ಮುಂಬೈ(ಜೂ.05): ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್'ಗೆ ತನ್ನ ಕುಟುಂಬದ ಮೇಲೆ ಬಹಳ ಪ್ರೀತಿ ಇದೆ. ಹಲವಾರು ಬಾರಿ ಅವರು ತನ್ನ ತಂದೆ- ತಾಯಿ, ಸಹೋದರ- ಸಹೋದರಿಯರೊಂದಿಗೆ ಸಮಯ ಕಳೆಯುತ್ತಾರೆ. ಅಲ್ಲದೇ ತಾನು ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರ ಕುರಿತಾಗಿ ಮಾತನಾಡುವುದೂ ಇದೆ. ಈ ವೇಳೆ ಅವರಿಗೆ ತನ್ನವರ ಮೇಲೆ ಅದೆಷ್ಟು ಪ್ರೀತಿ ಇದೆ ಎಂಬುವುದು ತಿಳಿದು ಬರುತ್ತದೆ. ಸದ್ಯ ಅವರು 'ಐಷಾರಾಮಿ ಬಂಗಲೆಗಾಗಿ ನಾನು ನನ್ನ ತಂದೆ, ತಾಯಿಯನ್ನು ಬಿಡಲು ನಾನು ತಯಾರಿಲ್ಲ' ಎಂದಿದ್ದಾರೆ.
ಮಕ್ಕಳ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ ಲಿಟ್ಲ್ ಛಾಂಪ್ಸ್' ಸೀಜನ್ 6ರಲ್ಲಿ ತನ್ನ ತಮ್ಮ ಹಾಗೂ ನಟ, ನಿರ್ಮಾಪಕ ಸೋಹೆಲ್ ಖಾನ್'ರೊಂದಿಗೆ ತನ್ನ ಸಿನಿಮಾ 'ಟ್ಯೂಬ್ ಲೈಟ್' ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ವೇಳೆ ಧಿರೂನ್ ಟಿಕೂ ಎಂಬ ಸ್ಪರ್ಧಿ 'ನೀವು ಐಷಾರಾಮಿ ಬಂಗಲೆಯನ್ನೇ ಖರೀದಿಸಬಹುದು, ಹೀಗಿದ್ದರೂ ಇನ್ನೂ ಯಾಕೆ ಫ್ಲ್ಯಾಟ್'ನಲ್ಲಿದ್ದೇರಿ?' ಎಂದು ಕೇಳುದ್ದಾನೆ. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ 'ನನಗೆ ಐಷಾರಾಮಿ ಬಂಗಲೆಗಿಂತ ಬಾಂದ್ರಾದ ಫ್ಲ್ಯಾಟ್'ನಲ್ಲಿ ಸಮಯ ಕಳೆಯಲು ಇಷ್ಟವಾಗುತ್ತದೆ. ಯಾಕೆಂದರೆ ಆ ಫ್ಲ್ಯಾಟ್'ನ ಮೇಲಿನ ಮಹಡಿಯಲ್ಲಿ ನನ್ನ ತಂದೆ, ತಾಯಿ ವಾಸವಿದ್ದಾರೆ' ಎಂದಿದ್ದಾರೆ.
ಇದೇ ವಿಚಾರವಾಗಿ ಮುಂದೆ ಮಾತನಾಡಿದ ಸಲ್ಮಾನ್ ಖಾನ್ 'ಈ ಕಟ್ಟಡದಲ್ಲಿ ವಾಸವಿರುವ ಪ್ರತಿಯೊಬ್ಬರೂ ಒಂದು ಕುಟುಂಬದಂತಿದ್ದಾರೆ. ನಾವು ಚಿಕ್ಕವರಿದ್ದಾಗ ಈ ಕಟ್ಟಡದಲ್ಲಿರುವ ಪ್ರಿತಿಯೊಬ್ಬಮಗು ಕೂಡಾ ಒಟ್ಟಾಗಿ ಹೂದೋಟದಲ್ಲಿ ಆಡುತ್ತಿದ್ದೆವು. ಕೆಲವೊಂದು ಬಾರಿ ಅಲ್ಲೇ ಮಲಗಿದ್ದೂ ಇದೆ. ಆ ಫ್ಲ್ಯಾಟ್'ನೊಂದಿಗೆ ನನ್ನ ಬಾಲ್ಯದ ಹಲವಾರು ನೆನಪುಗಳು ಬೆಸೆದುಕೊಂಡಿವೆ. ಹೀಗಾಗಿಯೇ ಆ ಫ್ಲ್ಯಾಟ್'ನೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ' ಎಂದಿದ್ದಾರೆ.
ಈ ಮಾತು ಕೇಳಿದ ಬಳಿಕ ಸಲ್ಮಾನ್ ತನ್ನವರ ಮೇಲೆ ಅದೆಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುವುದು ತಿಳಿದು ಬರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.