ಅನುಷ್ಕಾ ಶೆಟ್ಟಿ ಗಟ್ಟಿಮೇಳ?

Published : Sep 24, 2016, 01:58 AM ISTUpdated : Apr 11, 2018, 12:46 PM IST
ಅನುಷ್ಕಾ ಶೆಟ್ಟಿ ಗಟ್ಟಿಮೇಳ?

ಸಾರಾಂಶ

ಒಬ್ಬಳು ನಟಿ, ಮತ್ತೊಬ್ಬ ನಟನನ್ನು ವರಿಸುವ ಉದಾಹರಣೆ ಇಲ್ಲಿ ಹತ್ತಾರು. ಹಾಗೆಯೇ ನಿರ್ದೇಶಕನ ಕೈಹಿಡಿದು ಸುಹಾಸಿನಿ ರೀತಿ ಆರಾಮಾಗಿ ಇರುವವರೂ ಕೆಲವರು ಸಿಗುತ್ತಾರೆ. ಹಾಗೆಯೇ ಇಲ್ಲಿ ನಿರ್ಮಾಪಕನ ಕೈಹಿಡಿದು ಸೆಟ್ಲ್ ಆಗುವ ಸುಂದರಿಯರೂ ಕಡಿಮೆಯೇನಿಲ್ಲ. ಈಗ ಸಿನಿ ಇಂಡಸ್ಟ್ರಿಯೊಳಗೆ ಒಂದು ಮದ್ವೆಯ ಗಾಸಿಪ್ ಎದ್ದಿದೆ. ಅದು ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ!

ಹೌದು, ಅನುಷ್ಕಾಗೆ ಮದ್ವೆಯಂತೆ! ಎರಡ್ಮೂರು ದಿನಗಳಿಂದ ಟಾಲಿವುಡ್‌ನಲ್ಲಿ ಈ ಬಗ್ಗೆ ಮಾತೇ ಮಾತು. ತುಂಬಾ ಹಿಂದೆಯೇ ನಟ ನಾಗಚೈತನ್ಯ ಜತೆ ಅನುಷ್ಕಾ ಮದುವೆ ಎನ್ನುವ ಸುದ್ದಿ ಹಬ್ಬಿತು. ಮತ್ತೆ ಅದು ತಣ್ಣಗಾಯಿತು. ನಂತರ ‘ಬಾಹುಬಲಿ’ ಬಿಡುಗಡೆಯಾದಾಗ, ಪ್ರಭಾಸ್ ಮದ್ವೆ ಆಗುತ್ತಿರುವ ಹುಡುಗಿ ಅನುಷ್ಕಾ ಎಂಬ ಗಾಳಿಸುದ್ದಿ ಜೋರಾಯಿತು. ಅದೂ ಸುಳ್ಳಾಯಿತು. ಅನುಷ್ಕಾ ಇದಕ್ಕೆಲ್ಲ ಪ್ರತಿಕ್ರಿಯಿಸುತ್ತಾ, ‘ನಾನು ಯಾರಿಗೂ ಹೇಳದೆ ಮದುವೆ ಆಗಲ್ಲ ಬಿಡಿ’ ಎನ್ನುವ ಮೂಲಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಆದರೂ ಅನುಷ್ಕಾ ಮದ್ವೆ ಸುದ್ದಿಯ ಹನಿಗಳು ಮಾತ್ರ ನಿಂತಿಲ್ಲ. ಈ ಬಾರಿ ಒಬ್ಬ ನಿರ್ಮಾಪಕನ ಜತೆ ಅನುಷ್ಕಾ ಹೆಸರು ಕೇಳಿಬರುತ್ತಿದೆ.

ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರ ಜತೆ ಅನುಷ್ಕಾ ಹೆಸರು ಅಂಟಿಕೊಂಡಿದೆಯಂತೆ. ಹಲವು ದಿನಗಳಿಂದ ಇವರಿಬ್ಬರೂ ಒಟ್ಟಿಗೆ ತಿರುಗಾಡುತ್ತಿದ್ದಾರೆಂದು ಗಾಸಿಪ್ ವೆಬ್‌ಸೈಟ್‌ಗಳು ತೆರೆದಿಟ್ಟ ಗುಟ್ಟು. ಅಚ್ಚರಿ ಎಂದರೆ, ಈ ನಿರ್ಮಾಪಕ ಈಗಾಗಲೇ ಅನುಷ್ಕಾ ನಟನೆಯ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿ, ವಿತರಣೆಯನ್ನೂ ಮಾಡಿದ್ದಾರಂತೆ. ಆದರೆ, ಈ ನಿರ್ಮಾಪಕನಿಗೆ ಈಗಾಗಲೇ ಮದುವೆ ಆಗಿದೆ ಅಂತೆ. ಆಗಲೇ ಮದುವೆ ಆಗಿರುವ ವ್ಯಕ್ತಿಯನ್ನು ವರಿಸುವುದಕ್ಕೆ ಅನುಷ್ಕಾ ಕುಟುಂಬ ಒಪ್ಪಿಕೊಳ್ಳುತ್ತದೆಯೇ ಎಂಬುದು ಈಗ ಪ್ರಶ್ನೆಯೇ. ಎರಡನೇ ಮದ್ವೆಯೆಂಬ ಕಾರಣಕ್ಕಾಗಿ ಆ ನಿರ್ಮಾಪಕ ಯಾರೆಂಬುದನ್ನು ಟಾಲಿವುಡ್ ಮಂದಿ ರಹಸ್ಯವಾಗಿಟ್ಟಿದ್ದಾರೆಂಬ ಮಾತು ಕೇಳಿಬರುತ್ತಿದೆ. ಅನುಷ್ಕಾ ಕಡೆಯಿಂದ ಈ ಮದುವೆಗೆ ಸಂಪೂರ್ಣವಾಗಿ ಗ್ರೀನ್‌ಸಿಗ್ನಲ್ ಇದೆಯಂತೆ. ೩೪ ವರ್ಷದ ಬೆಡಗಿ ಅನುಷ್ಕಾ ಸದ್ಯ ‘ಬಾಹುಬಲಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಗಿದ ಮೇಲೆ ಮದ್ವೆ ದಿನಾಂಕ, ಆ ನಿರ್ಮಾಪಕನ ಹೆಸರು ಬಹಿರಂಗವಾಗುತ್ತದಂತೆ. ಅಲ್ಲಿಯ ತನಕ ನೀವು ಕಾಯಬೇಕಷ್ಟೇ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ: ಮಾರ್ಕ್‌ ಸಿನಿಮಾದ ವೇದಿಕೆಯಲ್ಲಿ ಗರ್ಜಿಸಿದ್ಯಾಕೆ ಕಿಚ್ಚ ಸುದೀಪ್‌?
ದರ್ಶನ್ ಪುತ್ರ ವಿನೀಶ್ ನೋಡಿ ತುಂಬಾ ನೋವಾಯಿತು.. 45 ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?