
ಚೆನ್ನೈ: ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಮದುವೆ ಖುಷಿಯಲ್ಲಿದ್ದಾರೆ. ಇವತ್ತು ಸಂಗೀತಗಾರ ಅನಿರುದ್ಧ್ ರವಿಚಂದರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದು ಕಾವ್ಯ ಮತ್ತು ಅನಿರುದ್ಧ್ ರವಿಚಂದರ್ ಪ್ರೇಮ ಕಹಾನಿಗೆ ಸಂಬಂಧಿಸಿದ್ದಾಗಿದೆ. ಆದರೆ ಆ ವಿಡಿಯೋದಲ್ಲಿ ಒಂದು ಟ್ವಿಸ್ಟ್ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿರುವ ವಿಡಿಯೋ, ನಿಜವಲ್ಲ. ಎಐನಿಂದ ರಚಿಸಲಾಗಿದೆ. ಇನ್ನು ವಿಡಿಯೋದಲ್ಲಿ ಏನಿದೆ ಅಂತಾ ನೋಡೋದಾದರೆ.. ಅನಿರುದ್ಧ್ ಮತ್ತು ಕಾವ್ಯ ಅವರಂತೆ ಹೋಲುವ ಇಬ್ಬರು, ಪರಸ್ಪರ ಕೈಕೈ ಹಿಡಿದುಕೊಂಡಿದ್ದಾರೆ. ಕೈಹಿಡಿದು ನಡೆಯುವುದನ್ನು ತೋರಿಸಲಾಗಿದೆ. ಕಡಲ ಕಿನಾರೆಯ ಸಿಂಗರಿಸಿದ ಬೋಟ್‌ನಲ್ಲಿ ನಿಂತು, ಪ್ರಪೋಸ್ ಮಾಡುತ್ತಿರುವ ದೃಶ್ಯವನ್ನ ತೋರಿಸಲಾಗಿದೆ. ಪುರುಷ ವ್ಯಕ್ತಿಯು ಹೊಳೆಯುವ ಉಂಗುರವನ್ನು ಆಕೆಯ ಮುಖದತ್ತ ತೋರಿಸಿ, ನಂತರ ಬೆರಳುಗಳಿಗೆ ತೊಡಿಸುತ್ತಾನೆ. ಹೀಗೆ ಇಬ್ಬರ ಪ್ರೇಮ ನಿವೇದನೆ ವಿಡಿಯೋದಲ್ಲಿ ಮುಂದುವರಿದಿದೆ. ಇದು ಸಂಪೂರ್ಣ ಕೃತಕವಾಗಿ ನಿರ್ಮಿಸಲಾಗಿದೆ. ಮದುವೆ ಸಂದರ್ಭದಲ್ಲಿ ಇಬ್ಬರ ಲವ್ ಪ್ರಪೋಸಲ್ ಅನ್ನು ತೋರಿಸಲಾಗಿದೆ. ಆದರೆ ಇದು ನಿಜವಾಗಿಯೂ ಕಾವ್ಯ ಮಾರನ್ ಅವರಿಗೆ ಅನಿರುದ್ಧ ಪ್ರಪೋಸ್ ಮಾಡಿರುವ ದೃಶ್ಯವಲ್ಲ. ಇದೊಂದು ಎಐ ರಚಿತ ವಿಡಿಯೋ.
ಇದು ಅನಿರುದ್ಧ ಫ್ಯಾನ್ಸ್ ಟ್ವಿಟರ್ ಪೇಜ್‌ನಿಂದ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. Ani literally composed his own love story ಎಂದು ಕ್ಯಾಪ್ಷನ್ ನೀಡಲಾಗಿದೆ. ಕೊನೆಯಲ್ಲಿ ಇದು ಎಐನಿಂದ ರಚಿಸಲಾಗಿದೆ ಎಂದು ಸ್ಪಷನೆ ಕೂಡ ನೀಡಲಾಗಿದೆ.
Ani literally composed his own love story 🥹❤️💍
#AnirudhKavyaWedding
#Anirudh https://t.co/4ksGcy2gd2
— Anirudh FC (@AnirudhfansTN) November 10, 2026
ಗ್ರೀಸ್‌ನಲ್ಲಿ ಮದುವೆ ಆಗ್ತಿರುವ ಈ ಜೋಡಿ ಇವತ್ತು ಕೇವಲ ಗಣ್ಯ ವ್ಯಕ್ತಿಗಳಿಗೆ, ಆಪ್ತರಿಗೆ ಅಷ್ಟೇ ಆಹ್ವಾನ ನೀಡಲಾಗಿದೆ. ರಜಿನಿಕಾಂತ್, ಮಾಜಿ ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಅನೇಕರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗ್ರೀಸ್‌ನಲ್ಲಿ ವಿವಾಹ ಮಹೋತ್ಸವದ ನಂತರ.. ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಕಾವ್ಯಾ ಅವರ ಪೋಷಕರಾದ ಸನ್ ಗ್ರೂಪ್ ಅಧ್ಯಕ್ಷೆ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯನ್ನ ಸಮಾರಂಭಕ್ಕೆ ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ.
ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಮತ್ತು ಇತರ ಅನೇಕ ಗಣ್ಯರು ಆರತಕ್ಷತೆಯಲ್ಲಿ ಭಾಗವಹಿಸಲಿದ್ದಾರೆ. ಅತಿಥಿಗಳ ಸಂಪೂರ್ಣ ಪಟ್ಟಿಯ ಬಗ್ಗೆ ಅಧಿಕೃತ ಘೋಷಣೆ ಇಲ್ಲ. ಅನಿರುದ್ಧ್ ತಂದೆ ರವಿ ರಾಘವೇಂದ್ರ ಅವರು ರಜನಿಕಾಂತ್ ಕುಟುಂಬಕ್ಕೆ ಸಂಬಂಧಿಸಿರುವುದರಿಂದ ಈ ಸಮಾರಂಭವು ಚಲನಚಿತ್ರೋದ್ಯಮದಲ್ಲಿ ಮಹತ್ವ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.