
ಕೆಲ ದಿನಗಳಿಂದ ನಟಿ ಕತ್ರಿನಾ ಕೈಫ್ ಅವರ ಬಾಡಿ ಷೇಮಿಂಗ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಲವರು ಹರಿಹಾಯುತ್ತಿದ್ದಾರೆ. ಇದೀಗ ಇಂಥದ್ದೇ ಒಂದು ಬಾಡಿ ಷೇಮಿಂಗ್ ಘಟನೆಯ ಬಗ್ಗೆ ಬಿಗ್‌ಬಾಸ್ 20 ನೆಸಿಕೊಡ್ತಿರೋ ನಟ ಸಲ್ಮಾನ್ ಖಾನ್ ಹರಿಹಾಯ್ದಿದ್ದಾರೆ. Bigg Boss 20ಯ "ವೀಕೆಂಡ್ ಕಾ ವಾರ್" ಸಂಚಿಕೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿನ ಟ್ರೋಲಿಂಗ್, ವಯಸ್ಸಿನ ಬಗ್ಗೆ ಅವಮಾನ ಮತ್ತು ಬಾಡಿ ಶೇಮಿಂಗ್ ಬಗ್ಗೆ ಗರಂ ಆದರು.
ಅವರು ಮನೆಯಲ್ಲಿನ ಕೆಲವು ಸ್ಪರ್ಧಿಗಳ ನಡವಳಿಕೆ ಮತ್ತು ಕಮೆಂಟ್‌ಗಳನ್ನು ಟೀಕಿಸಿದ್ದಲ್ಲದೆ, ಟ್ರೋಲಿಂಗ್‌ನ ಸಂಪೂರ್ಣ ಸಂಸ್ಕೃತಿಯ ಮೇಲೆ ಕಟುವಾದ ದಾಳಿಯನ್ನು ನಡೆಸಿದರು. ಇದರಿಂದ ಸಲ್ಮಾನ್ ಖಾನ್ ಕಿಡಿ ಕಾರುತ್ತಲೇ ವೇದಿಕೆಯ ಮೇಲೆಯೇ ತಮ್ಮ ಷರ್ಟ್ ಬಿಚ್ಚಿ ಮೇಕಪ್ ಎಲ್ಲಾ ಅಳಿಸಿಕೊಂಡು ಈಗ ನನ್ನನ್ನು ಟ್ರೋಲ್ ಮಾಡೋದಿದ್ದರೆ ಮಾಡಿ ಎಂದರು. "ಪ್ರತಿಯೊಂದು ಕಾರ್ಯಕ್ರಮದಲ್ಲೂ ಇದ್ದಕ್ಕಿದ್ದಂತೆ ವಯಸ್ಸಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. 'ಅವರು ವಯಸ್ಸಾದವರು' ಎಂದು ಮಾತನಾಡುತ್ತೀರಿ. ನೀವು ಯಾವುದರ ಬಗ್ಗೆ ಟ್ರೋಲ್ ಮಾಡಲು ಬಯಸುತ್ತೀರಿ? ತೂಕ, ಅವರ ಲುಕ್, ಅವರ ಕುಟುಂಬ, ಅವರ ನಗು, ಯಾರೊಬ್ಬರ ವೈಫಲ್ಯ, ಯಾರಾದರೂ ತಾಯಿಯಾಗುತ್ತಿದ್ದಾರೆ? ಎಲ್ಲವನ್ನೂ ಟ್ರೋಲ್ ಮಾಡ್ತೀರಿ" ಎಂದು ಸಲ್ಮಾನ್ ಖಾನ್ ಗರಂ ಆಗಿ ಕೇಳಿದರು.
ಸಲ್ಮಾನ್ ಕೂಡ ವಯಸ್ಸಾದ ಕಾರಣಕ್ಕೆ ಟ್ರೋಲ್ ಆಗಿದ್ದಾನೆ ಎಂದ ನಟ, ನನಗೆ 60 ವರ್ಷ. ಈಗ ಟ್ರೋಲ್ ಮಾಡಿ ಎಂದರು. ಕತ್ರಿನಾ ಕೈಫ್ ಹೆಸರನ್ನು ಹೇಳದೇ, ನಟ, ಗರ್ಭಧಾರಣೆಯ ನಂತರದ ತೂಕ ಹೆಚ್ಚಳಕ್ಕಾಗಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಟ್ರೋಲ್ ಆಗುತ್ತಿರುವ ನಟಿಯನ್ನು ಸಮರ್ಥಿಸಿಕೊಂಡು ಈ ರೀತಿ ಹೇಳಿಕೆ ನೀಡಿರುವುದದು ಸ್ಪಷ್ಟವಾಗಿ ಗೋಚರಿಸುತ್ತದೆ. ಗರ್ಭಧಾರಣೆಯ ನಂತರ ಎಲ್ಲರ ತೂಕ ಹೆಚ್ಚಾಗುತ್ತದೆ. ಅವರು ಚಿತ್ರರಂಗಕ್ಕೆ ಮರಳಿದಾಗ ಅವರು ಮತ್ತೆ ಫಿಟ್ ಆಗುತ್ತಾರೆ ಎಂದರು.
ಸಲ್ಮಾನ್ ಖಾನ್ ಕೋಪಗೊಂಡು ಸೆಲೆಬ್ರಿಟಿಗಳ ದೇಹ, ಲುಕ್ ಮತ್ತು ಬಟ್ಟೆಗಳ ಬಗ್ಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವ ಮತ್ತು ವಿಲಕ್ಷಣ ಅಥವಾ ಅವಹೇಳನಕಾರಿ ಚಿತ್ರಗಳನ್ನು ತೆಗೆದುಕೊಳ್ಳುವ ಟ್ರೋಲ್‌ಗಳು ಮತ್ತು ಪಾಪರಾಜಿಗಳನ್ನು ಖಂಡಿಸಿದರು. ಟ್ರೋಲ್ ಮಾಡುವ ಮೊದಲು ನಿಮ್ಮ ಸ್ವಂತ ಮುಖ ಮತ್ತು ದೇಹವನ್ನು ನೋಡಿ. ಟ್ರೋಲ್ ಮಾಡುವ ಮೊದಲು ನಿಮ್ಮ ಹೆತ್ತವರನ್ನು ನೋಡಿ. ನಾವು ಪ್ರತಿಕ್ರಿಯಿಸಲು ನಿರ್ಧರಿಸಿದ ದಿನ, ನೀವು ಟ್ರೋಲ್ ಮಾಡುವವರು ಎಲ್ಲೂ ಅಡಗಿಕೊಳ್ಳೋಕಾಗಲ್ಲ ಎಂದು ಕಿಡಿ ಕಾರಿದರು. ಇದು ಸಿನಿಮಾಗಾಗಿರುವ ಲುಕ್. ನೀವು ಚಿತ್ರವನ್ನು ವೀಕ್ಷಿಸಲು ಟಿಕೆಟ್‌ಗಳನ್ನು ಖರೀದಿಸಿದ್ದೀರಿ, ನೀವು ನಮ್ಮನ್ನು ಖರೀದಿಸೋದಿಲ್ಲ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.