
ಪವನ್ ಕಲ್ಯಾಣ್ ಸಿನಿಮಾಗೆ ಕರ್ನಾಟಕದಲ್ಲಿ ಸಮಸ್ಯೆ!
ಇದೇ ತಿಂಗಳು 25 ರಂದು (25 September 2025) ಬಿಡುಗಡೆಯಾಗಿರುವ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ದೆ ಕಾಲ್ ಹಿನ್ ಒಜಿ' ಚಿತ್ರಕ್ಕೆ ಕರ್ನಾಟಕದಲ್ಲಿ ಬೆಲೆ ಏರಿಕೆ ಸಂಬಂಧ ಹಾಗೂ ನಿರ್ಧಿಷ್ಟ ಜನರು ಒಂದು ಪ್ರತಿಭಟನೆ ನಡೆಸುವ ಮೂಲಕ ಸಮಸ್ಯೆ ಸೃಷ್ಟಿ ಮಾಡಿದ್ದರು.
ಅದಕ್ಕೆ ಪ್ರತಿಯಾಗಿ ಈಗ ಆಂಧ್ರ ಪ್ರದೇಶದಲ್ಲಿ ಈಗ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ, ಆಂಧ್ರ ಪ್ರದೇಶದ ಉಪ-ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು 'ನಾನು ಸೇಡಿನ ಹಾದಿಯಲ್ಲಿ ನಡೆಯಲು ಬಯಸುವುದಿಲ್ಲ' ಎನ್ನುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕ್ರತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ. ಎಲ್ಲಾ ವರ್ಗದ ಜನರನ್ನು ರಂಜಿಸುವುದು ಮತ್ತು ಕನೆಕ್ಟ್ ಆಗುವುದು ಅವುಗಳ ಮೂಲ ಆಶಯವಾಗಿದೆ. ವೈಯಕ್ತಿಕ ಹಿತಾಸಕ್ತಿಗಳಿಂದ ಕೆಲವು ಜನರು ಕರ್ನಾಟಕದಲ್ಲಿ ನನ್ನ ನನಟನೆಯ 'ಒಜಿ' ಚಿತ್ರದ ಪ್ರದರ್ಶನ ತಡೆಯಲು ಯತ್ನಿಸಿರುವುದು ದುರದೃಷ್ಟಕರ. ಈ ಹಿಂದೆ ಕೂಡ ಕೆಲವು ತೆಲುಗು ಸಿನಿಮಾಗಳು ಇಂತಹ ಅಡೆತಡೆ ಎದುರಿಸಿದ್ದವು.
ಇದಕ್ಕೆ ಪ್ರತಿಯಾಗಿ ಕನ್ನಡದ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ನಮ್ಮ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಈ ಯೋಚನೆಯನ್ನು ಬೆಂಬಲಿಸುವುದಿಲ್ಲ. ಎಂದು ಹೇಳಿದ್ದಾರೆ. ಕಾರಣ, ಕಲೆ ಮತ್ತು ಸಿನಿಮಾ ಸಂತೋಷವನ್ನು ಹರಡಬೇಕು, ಜನರನ್ನು ಬೇರ್ಪಡಿಸಬಾರದು. ಸಿನಿಮಾಗಳು ಎಲ್ಲಾ ರಾಜ್ಯದ, ದೇಶದ ಜನರನ್ನು ಬೆಸೆಯುವ ಸೇತುವೆಯಾಗಬೇಕು.
ಬೆಂಗಳೂರು ಪವನ್ ಕಲ್ಯಾಣ್ ಅಭಿಮಾನಿ ಸಂಘವು ಬಹುನಿರೀಕ್ಷಿತ ‘ಒಜಿ’ ಚಿತ್ರದ ಸಂಭ್ರಮವನ್ನು ಆಚರಿಸಲು ಮಡಿವಾಳದ ಸಂಧ್ಯಾ ಥಿಯೇಟರ್ ಹೊರಗೆ ಡಿಜೆ ಹಾಗೂ ವೇದಿಕೆ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಅದನ್ನು ಕ್ಯಾನ್ಸಲ್ ಮಾಡಿಸಿದ್ದರು. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಮೈಕ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದರು. ಇದೀಗ ಆ ಸೇಡನ್ನು ತೀರಿಸಿಕೊಳ್ಳಲು ತೆಲುಗು ಪ್ರೇಕ್ಷಕರು ಕಾದಿದ್ದಾರೆ ಎನ್ನಲಾಗಿದೆ. ಮುಂದೇನು ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ರಿಷಭ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಸಿನಿಮಾ ಜಗತ್ತಿನಾದ್ಯಂತ 600ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ನಾಡಿದ್ದು, ಅಂದರೆ 02 ಅಕ್ಟೋಬರ್ 2025 ಬಿಡುಗಡೆ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.