RCB ಮಾಲಕಿಯ ಹೊಸ ಹೆಜ್ಜೆ; ಸೌತ್ ತಾರಾ ಬಳಗಕ್ಕೆ ಅನನ್ಯ ಸಾಥ್! 300 ಕೋಟಿ ಚಿತ್ರಕ್ಕೆ ಬಿರ್ಲಾ ಬಂಡವಾಳ

Published : Nov 19, 2026, 01:59 PM IST
Ananya Birla

ಸಾರಾಂಶ

ಆರ್‌ಸಿಬಿ ಮಾಲಕಿ ಅನನ್ಯ ಬಿರ್ಲಾ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ನೀಡಿದ್ದು, ಸೌತ್ ತಾರಾಗಣಕ್ಕೆ ಸಾಥ್ ನೀಡಿದ್ದಾರೆ. 300 ಕೋಟಿ ರೂ. ಬಿಗ್ ಬಜೆಟ್‌ನ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಬೃಹತ್ ಸಿನಿಮಾ ಯೋಜನೆ ಹಾಗೂ ಬಿರ್ಲಾ ಅವರ ನೂತನ ಹೆಜ್ಜೆಯ ಪೂರ್ಣ ವಿವರ ಇಲ್ಲಿದೆ.

ಈ ವರ್ಷದ (2026) ಆರಂಭದಲ್ಲಿ ಬಿರ್ಲಾ ಕುಟುಂಬವು ಸುಮಾರು ₹16,600 ಕೋಟಿಗೂ ಅಧಿಕ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ಖರೀದಿಸಿ ಸುದ್ದಿಯಾಗಿತ್ತು. ಈಗ ಅದೇ ಕುಟುಂಬದ ಅನನ್ಯಾ ಬಿರ್ಲಾ ತಮ್ಮ 'ಬಿರ್ಲಾ ಸ್ಟುಡಿಯೋಸ್' ಮೂಲಕ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಆಯಾಮದಿಂದ ಗುರುತಿಸಿಕೊಳ್ಳುತ್ತಿರುವ ಅನನ್ಯ ಈಗ ಸೌತ್‌ ಇಂಡಿಯನ್ಸ್ ಜತೆ ಹೆಜ್ಜೆ ಹಾಕಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಪ್ರಾಜೆಕ್ಟ್ ವಿವರ!

ರಣವೀರ್ ಸಿಂಗ್ ನಟನೆಯ ಮತ್ತು 'ಸ್ಕ್ಯಾಮ್ 1992' ಖ್ಯಾತಿಯ ಜೈ ಮೆಹ್ತಾ ನಿರ್ದೇಶನದ 'ಪ್ರಳಯ್' (Pralay) ಎಂಬ ಜೋಂಬಿ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಅನನ್ಯಾ ಬಿರ್ಲಾ ಹೂಡಿಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಂ ನಟಿ ಕಲ್ಯಾಣಿ ಪ್ರಿಯದರ್ಶನ್ ನಟಿಸುತ್ತಿದ್ದು, ಕನ್ನಡದ ಅಳಿಯ ರಣವೀರ್ ಸಿಂಗ್ ಅವರೊಂದಿಗೆ ಆರ್‌ಸಿಬಿ ಮಾಲಕಿ ಕೈಜೋಡಿಸಿರುವುದು ವಿಶೇಷ.

ಅನನ್ಯ ಹೇಳಿದ್ದೇನು?

'ಕಾಫಿ ವಿತ್ ಕರಣ್' ಶೋನಲ್ಲಿ ಅನನ್ಯಾ ಬಿರ್ಲಾ ಹೇಳಿಕೆ. ಇತ್ತೀಚೆಗಷ್ಟೇ (ನವೆಂಬರ್ 18, 2026) ಪ್ರಸಾರವಾದ 'ಕಾಫಿ ವಿತ್ ಕರಣ್ ಸೀಸನ್ 9' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಸಿಬಿ ಮಾಲಕಿ ಅನನ್ಯಾ ಬಿರ್ಲಾ, 'ಪ್ರಳಯ್' ಚಿತ್ರದ ಬಗ್ಗೆ ಮಾತನಾಡಿ ಇದು ಭಾರತೀಯ ಚಿತ್ರರಂಗಕ್ಕೆ ಒಂದು ಅದ್ಭುತ ದೃಶ್ಯವೈಭವ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಶೂಟಿಂಗ್ ಸ್ಥಳದಿಂದ ರಣವೀರ್ ಸಿಂಗ್ ಅವರ ಲುಕ್ ಲೀಕ್ ಆಗಿ ವೈರಲ್ ಆಗಿದ್ದು, ಇದರಲ್ಲಿ ಅವರು ಉದ್ದನೆಯ ಕೂದಲು, ಗಡ್ಡದೊಂದಿಗೆ ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ನಟಿ ಕಲ್ಯಾಣಿ ಪ್ರಿಯದರ್ಶನ್ ಜೊತೆ ನಿರ್ಜನ ಪ್ರದೇಶದಲ್ಲಿ ಸಾಗುತ್ತಿರುವ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಹೆಜ್ಜೆ!

ಇಬ್ಬರೂ ಸ್ಟಾರ್‌ಗಳಿಗೆ ಇದು ನಿರ್ಮಾಪಕರಾಗಿ ಮೊದಲ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ರಣವೀರ್ ಸಿಂಗ್ ತಮ್ಮ 'ಮಾ ಕಸಂ ಫಿಲ್ಮ್ಸ್' ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದರೆ, ಅನನ್ಯಾ ಬಿರ್ಲಾ ಅವರು ಇಮ್ತಿಯಾಜ್ ಅಲಿ ಅವರ 'ಮೈ ವಾಪಸ್ ಆವುಂಗಾ' ನಂತರ ತಮ್ಮ 'ಬಿರ್ಲಾ ಸ್ಟುಡಿಯೋಸ್' ಅಡಿಯಲ್ಲಿ ನಿರ್ಮಿಸುತ್ತಿರುವ ಅತ್ಯಂತ ದೊಡ್ಡ ಬಜೆಟ್ (₹300 ಕೋಟಿ) ಚಿತ್ರ ಇದಾಗಿದೆ.

ಕಲ್ಯಾಣಿ ಪ್ರಿಯದರ್ಶನ್ ಬಾಲಿವುಡ್ ಎಂಟ್ರಿ!

ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಪಾತ್ರಕ್ಕಾಗಿ ಮುಂಬೈನಲ್ಲೇ ವಾಸ್ತವ್ಯ ಹೂಡಿ ವಿಶೇಷ ಆಕ್ಷನ್ ತರಬೇತಿ ಪಡೆದಿದ್ದಾರೆ. ಎರಡನೇ ಮಗುವಿನ ಸಂಭ್ರಮದ ನಡುವೆ ಶೂಟಿಂಗ್. ಪತ್ನಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಎರಡನೇ ಹೆಣ್ಣು ಮಗು ಜನಿಸಿದ್ದು, ಪಿತೃತ್ವದ ರಜೆಯ ಬಳಿಕ ರಣವೀರ್ ಮತ್ತೆ ಮುಂಬೈನಲ್ಲಿ ಈ ಚಿತ್ರದ ರಾತ್ರಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿ ಬಾಸ್‌ ಭೇಟಿಗೆ ಚಿಕ್ಕಣ್ಣ ಹಿಂದೇಟು, ನಾನು ಸದ್ಯಕ್ಕೆ ದರ್ಶನ್ ರನ್ನು ಭೇಟಿಯಾಗುವುದಿಲ್ಲ ಎಂದ ಲಕ್ಷ್ಮೀಪುತ್ರ
ಟ್ಯೂನ್‌ಗೂ ಮೊದಲೇ ಹುಟ್ಟಿದ್ದ ಗೀತೆ ಇಂದಿಗೂ ಕನ್ನಡಿಗರ ಉಸಿರು; ಲವ್ ಸ್ಟೋರಿಗಳ ನಡುವೆ ಒಂದು ಯುಗದ ವೈಭವ ಸಾರಿದ ಕಥೆಯೇ ರೋಚಕ