ವಿದ್ಯಾ ಬಾಲನ್ ನಟನೆಯ ಡರ್ಟಿ ಫಿಕ್ಟರ್ ಸಿನಿಮಾದ ಉಲಾಲಾ ಉಲಾಲಾ ಹಾಡು ಯಾರಿಗೆ ಗೊತ್ತಿಲ್ಲ, ಹೇಳಿ. ಭಾರತೀಯ ಮಹಿಳೆಯೊ ಬ್ಬರು ಈ ಹಾಡಿಗೆ ಡೆನ್ಮಾರ್ಕ್‌ನ ನೃತ್ಯ ಸ್ಪರ್ಧೆಯೊಂದರಲ್ಲಿ ಡಾನ್ಸ್ ಮಾಡುವ ಮೂಲಕ ವಿದೇಶಿಗರು ಕೂಡ ಈ ಹಾಡಿಗೆ ಕಾಲು ಕುಣಿಸುವಂತೆ ಮಾಡಿದ್ದಾರೆ.
ಶ್ರೇಯಾ ಘೋಷಾಲ್ ಹಾಡಿದ ವಿದ್ಯಾ ಬಾಲನ್ ನಟನೆಯ ಡರ್ಟಿ ಫಿಕ್ಟರ್ ಸಿನಿಮಾದ ಉಲಾಲಾ ಉಲಾಲಾ ಹಾಡು ಯಾರಿಗೆ ಗೊತ್ತಿಲ್ಲ, ಹೇಳಿ. 2011ರ ಸಖತ್ ಹಿಟ್ ಎನಿಸಿದ ಈ ಬಾಲಿವುಡ್ ಐಟಂ ಸಾಂಗ್ ಕೇಳಿದರೆ ಕಾಲು ಕುಣಿಸುವವರೇ ಎಲ್ಲಾ. ಹೀಗಿರುವಾಗ ಒಬ್ಬರು ಭಾರತೀಯ ನಾರಿ ಈ ಹಾಡಿಗೆ ಡೆನ್ಮಾರ್ಕ್‌ನ ನೃತ್ಯ ಸ್ಪರ್ಧೆಯೊಂದರಲ್ಲಿ ಡಾನ್ಸ್ ಮಾಡುವ ಮೂಲಕ ವಿದೇಶಿಗರು ಕೂಡ ಈ ಹಾಡಿಗೆ ಕಾಲು ಕುಣಿಸುವಂತೆ ಮಾಡಿದ್ದಾರೆ. ಇವರ ಈ ಡಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೋಡುಗರು ಕೂಡ ವಾಹ್ ಅಂತ ಕಾಮೆಂಟ್ ಮಾಡಿದ್ದಾರೆ. ಇದುವ ವೈರಲ್ ಆಗಿ ಆಗಿ ಉಲಲಾ ಉಲಲಾ ಹಾಡಿದ ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ಕೂಡ ತಲುಪಿದ್ದು, ಅವರು ಕೂಡ ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನತಾಶಾ ಶೆರ್ಪಾ ಎಂಬುವವರು ಈ ಉಲಲಾ ಹಾಡಿಗೆ ಡೆನ್ಮಾರ್ಕ್‌ನ ಡಾನ್ಸ್ ಕಾಂಪಿಟೀಷನ್ ಒಂದರಲ್ಲಿ ಡಾನ್ಸ್ ಮಾಡಿದವರಾಗಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡ ಅವರು ಹೀಗೆ ಬರೆದುಕೊಂಡಿದ್ದಾರೆ. ಬಾಲಿವುಡ್ ನನ್ನ ರಕ್ತದಲ್ಲಿದೆ. ಆದರೆ ಈಗ ಈ ಹಾಡಿನ ಡಾನ್ಸ್ ಬಳಿಕ ಅವರ ಹೃದಯದಲ್ಲಿರುತ್ತದೆ. ಇದೊಂದು ನನಗೆ ಅದ್ಭುತವಾದ ಕ್ಷಣ. ಡೆನ್ಮಾರ್ಕ್‌ನ, ರೆಡ್‌ಬುಲ್ ಡಾನ್ಸ್ ಯುವರ್ ಸ್ಟೈಲ್ ನ್ಯಾಷನಲ್ ಫೈನಲ್‌ನಲ್ಲಿ ನಾನು ನನ್ನ ಭಾರತೀಯ ಸಂಸ್ಕೃತಿಯ ಸಣ್ಣ ರುಚಿಯೊಂದನ್ನು ಅವರಿಗೆ ನೀಡಿದೆ. ರೆಡ್‌ಬುಲ್ ಡಾನ್ಸ್ ಜಾಗತಿಕ ಫೈನಲ್ ಸ್ಪರ್ಧೆಯೂ ಮುಂದೆ ಮುಂಬೈನಲ್ಲಿ ನಡೆಯಲಿದೆ.
ಇದು ಗಣೇಶ ಹಬ್ಬದ ವಿಶೇಷ ಸ್ಟೆಪ್! ವಿಜಯ ರಾಘವೇಂದ್ರ- ಆ್ಯಂಕರ್ ಅನುಶ್ರೀ ಡಾನ್ಸ್ಗೆ ಸಕತ್ ಡಿಮಾಂಡ್
ನಾನು ಮೂಲತಃ ಅವರ ಈ ಕಾರ್ಯಕ್ರಮದ ಹೋಸ್ಟ್ ಆಗಿದ್ದೆ. ಆದರೆ ನಾನು ಸಡನ್ ಆಗಿ ಡಾನ್ಸ್ ಮಾಡುವ ಮೂಲಕ ಅವರಿಗೆ ಹಾಗೂ ಅಲ್ಲಿದ್ದ ಜನರಿಗೆ ಸರ್‌ಫ್ರೈಸ್ ನೀಡಿದೆ. ಈ ಕಾರ್ಯಕ್ರಮದ ಭಾಗವಾಗುವ ಅವಕಾಶ ನೀಡಿದ್ದಕ್ಕೆ ರೆಡ್ಬುಲ್ ಡೆನ್ಮಾರ್ಕ್‌ಗೆ ನನ್ನ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ. ಈ ವೀಡಿಯವನ್ನು 25 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಆಕೆಯ ಅದ್ಭುತ ಡಾನ್ಸ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಶ್ರೇಯಾ ಘೋಷಾಲ್ ಕೂಡ ಈ ವೀಡಿಯೋಗೆ ಬೆಂಕಿಯ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
ಇದು ಇಂದು ನಾನು ಇನ್ಸ್ಟಾಗ್ರಾಮ್‌ನಲ್ಲಿ ಕಂಡ ಸುಂದರ ದೃಶ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಂದು ಮೂವ್‌ನಲ್ಲಿಯೂ ಅವರು ಪರ್ಫೆಕ್ಟ್ ಆಗಿ ಹೆಜ್ಜೆ ಇಡುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಕಿಲ್ಡ್ ಇಟ್ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಡಾನ್ಸ್ ಹೆಚ್ಚು ನೋಡಿದಷ್ಟು ಹೆಚ್ಚು ಆಡಿಕ್ಟ್ ಆಗುತ್ತಿದ್ದೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
30 ವರ್ಷಗಳ ಬಳಿಕ 'ಓಂ' ಚಿತ್ರ ಮರು ಸೃಷ್ಟಿ: ಡಾನ್ಸ್ ವೇದಿಕೆಯಲ್ಲಿ ಶಿವಣ್ಣ-ಪ್ರೇಮಾ ಬ್ಲಾಕ್ಬಸ್ಟರ್ ಪರ್ಫಾಮೆನ್ಸ್!
2011ರ ಬಾಲಿವುಡ್‌ನ ಡರ್ಟಿ ಫಿಕ್ಟರ್ ಸಿನಿಮಾದ ಈ ಹಾಡನ್ನು ರಜತ್ ಆರೋರಾ ಬರೆದಿದ್ದು, ಬಪ್ಪಿ ಲಹರಿ ಹಾಗೂ ಶ್ರೇಯಾ ಘೋಷಾಲ್ ಹಾಡಿದ್ದಾರೆ, ನಸಿರುದ್ದೀನ್ ಷಾ ಹಾಗೂ ವಿದ್ಯಾ ಬಾಲನ್ ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಬಾಲಿವುಡ್‌ನ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದೆ. ಇನ್ನು ಈ ಹಾಡಿಗೆ ಡಾನ್ಸ್ ಮಾಡಿರುವ ನತಾಶಾ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಪ್ರೊಫೈಲ್ ಹೊಂದಿದ್ದು ಎಲ್ಲ ಕಡೆಯೂ ಲಕ್ಷಾಂತರ ಜನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಈ ವೈರಲ್ ವೀಡಿಯೋವನ್ನು ನೀವು ಒಮ್ಮೆ ನೋಡಿ