ಡಾ. ರಾಜ್‌ಕುಮಾರ್ ಬಗ್ಗೆ ವಿ‍ಷ್ಣುವರ್ಧನ್ ನೇರಾನೇರ ಮಾತು, 'ನಾನವನಲ್ಲ' ಅಂದೇಬಿಟ್ರು ಸಾಹಸಸಿಂಹ!

By Shriram Bhat  |  First Published Sep 12, 2024, 2:24 PM IST

ಡಾ ರಾಜ್‌ಕುಮಾರ್ ಅವರು ಬಹಳಷ್ಟು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಮೋಘ ಅಭಿನಯದ 'ಬಬ್ರುವಾಹನ, ಭಕ್ತ ಕನಕದಾಸ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ ಹೀಗೆ ಹಲವು ಐತಿಹಾಸಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ..


ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರು ಡಾ ರಾಜ್‌ಕುಮಾರ್ ಬಗ್ಗೆ ಮಾತನಾಡಿರುವ ಹಳೆಯ ವೀಡಿಯೋವೊಮದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಷ್ಣುವರ್ಧನ್ ಅವರು ಅಣ್ಣಾವ್ರ (Dr Rajkumar) ಬಗ್ಗೆ ಅದೇನು ಹೇಳಿದ್ದಾರೆ? ಅವರಿಬ್ಬರ ಮಧ್ಯೆ ಮನಸ್ತಾಪ ಇತ್ತು ಎನ್ನುವವರಿಗೆ ಈ ಮೂಲಕ ಯಾವ ಸಂದೇಶ ಕೊಟ್ಟಿದ್ದಾರೆ ಎಂದು ನೋಡಬಹುದು. ಇದು ಸ್ವತಃನಟ ವಿಷ್ಣುವರ್ಧನ್ ಹೇಳಿರುವ ಮಾತು!

ಬಸವಣ್ಣನವರು, ನಾನು ನೋಡಿಲ್ಲ.. ಕನಕದಾಸರು, ಪುರಂದರ ದಾಸರು ಇವರನ್ನೂ ನೋಡಿಲ್ಲ, ಶ್ರೀ ಕೃಷ್ಣ ದೇವರಾಯ ಅವರನ್ನೂ ನಾನು ಖುದ್ದು ನೋಡಿಲ್ಲ. ನಾವೆಲ್ಲರೂ ಅವರ ಬಗ್ಗೆ ಕೇಳಿದ್ದೇವೆ, ಆದರೆ ನೋಡಿಲ್ಲ.. ಆದರೆ, ನಾವೊಂದು ಸಿಡಿ ಲೈಬ್ರರಿ ಅಥವಾ ಗ್ರಂಥಾಲಯಕ್ಕೆ ಹೋದರೆ, ಯಾರು ಮಾಡಿದ್ದು ಆ ಪಾತ್ರ ಎಂದು ನೋಡಿದರೆ ಅವರೇ ಮಾಡಿದ್ದು.. ಕನಕದಾಸರು, ಉಡುಪಿಯ ಕನಕನ ಕಿಂಡಿ, ಅದೇನೂ ವಾದ-ವಿವಾದಗಳು ಇದ್ದರೂ ಅದನ್ನೆಲ್ಲಾ ನೋಡ್ತೀರ ಅಂದ್ರೆ.. ಅದನ್ನೆಲ್ಲಾ ಅವ್ರೇ ಮಾಡಿದ್ದು!

Latest Videos

undefined

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ಮೇಲೆ ಹೇಳಿದ ಎಲ್ಲರನ್ನೂ ನೀವು ನೋಡ್ಬೇಕು ಅಂದ್ರೆ, ನೀವು ಫಿಲಂ ನೋಡಿ, ಡಾ ರಾಜ್‌ಕುಮಾರ್ ಮಾಡಿರೋ ಸಿನಿಮಾ ನೋಡಿ ಅಂತಾನೇ ಹೇಳ್ತಾರೆ. ಅವರು ಅಷ್ಟೊಂದು ಪುಣ್ಯವಂತರು' ಎಂದಿದ್ದಾರೆ ನಟ ವಿಷ್ಣುವರ್ಧನ್. ಅವರು ಅಂತಹ ಪಾತ್ರ ಮಾಡಲು, ಅದೆಲ್ಲವೂ ಅವರಿಗೆ ಸಿಗಲು ಅವರು ನಿಜವಾಗಿಯೂ ಅದೃಷ್ಟ ಮಾಡಿದಾರೆ. ಆ ಕಾರಣಕ್ಕೂ ಕೂಡ ಡಾ ರಾಜ್‌ಕುಮಾರ್ ಅವರು ಯಾವತ್ತೂ ಮರೆಯಲಾಗದ ರತ್ನ' ಎಂದಿದ್ದಾರೆ ಸಾಹಸಸಿಂಹ ವಿಷ್ಣುವರ್ಧನ್. 

ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, 60-70 ದಶಕದಿಂದ 80ರವರೆಗೂ ಡಾ ರಾಜ್‌ಕುಮಾರ್ ಅವರು ಬಹಳಷ್ಟು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಮೋಘ ಅಭಿನಯದ 'ಬಬ್ರುವಾಹನ, ಭಕ್ತ ಕನಕದಾಸ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ ಹೀಗೆ ಹಲವು ಐತಿಹಾಸಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಆಗಿ ಹೋಗಿರುವ ಹಲವು ಮಹಾನ್ ಪುರುಷರ ಜೀವನವನ್ನು ತಮ್ಮ ಪಾತ್ರಗಳ ಮೂಲಕ ತೆರೆಯ ಮೇಲೆ ಜೀವಿಸಿದ್ದಾರೆ. 

ಡಾ ರಾಜ್‌ಕುಮಾರ್ ಬಿಟ್ಟರೆ ಅಷ್ಟೊಂದು ಐತಿಹಾಸಿಕ ಹಾಗು ಪೌರಾಣಿಕ ಸಿನಿಮಾಗಳಲ್ಲಿ ನಟಿಸಿರುವ ಮತ್ತೊಬ್ಬ ನಟರು ಕನ್ನಡದಲ್ಲಿ ಸಿಗುವುದಿಲ್ಲ. ಈ ಸಂಗತಿಯನ್ನೇ ನಟ ಮೇರು ನಟ ಡಾ. ವಿಷ್ಣವರ್ಧನ್ ಅವರು ಇಲ್ಲಿ ಹೇಳಿರುವುದು. ಡಾ ರಾಜ್‌ಕುಮಾರ್ ಹಾಗು ವಿಷ್ಣುವರ್ಧನ್ ಅವರನ್ನು 'ಗಂಧದ ಗುಡಿ' ಬಳಿಕ ಒಂದೇ ಚಿತ್ರದಲ್ಲಿ ನೋಡಲು ಕನ್ನಡಿಗರಿಗೆ ಸಾಧ್ಯವೇ ಆಗಲಿಲ್ಲ. ಕಾರಣ, ಸೂಕ್ತ ಕಥೆ ದೊರೆಯಲಿಲ್ಲ ಎನ್ನಲಾಗಿದೆ. 

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ಅದೇನೇ ಇರಲಿ, ಇಲ್ಲಿ ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿದ್ದಾರೆ. ಭಾರತದ ಮಹಾನ್ ಪುರುಷರ ಜೀವನ ಚರಿತ್ರೆಯ ಚಿತ್ರಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಅವರು ಭಾಗ್ಯಶಾಲಿ ಎಂದಿದ್ದಾರೆ, ಜೊತೆಗೆ, ಅಂತಹ ಚಿತ್ರಗಳಲ್ಲಿ ನಟಿಸಿರುವ ಮೂಲಕ ಅವರು ಯಾವತ್ತೂ ಪೂಜನೀಯ ಸ್ಥಾನವನ್ನೂ, ಮರೆಯಲಾದ ನೆನಪಾಗಿ ಇರುತ್ತಾರೆ ಎಂಬುದನ್ನು ವಿಷ್ಣು ಅವರು ಹೇಳಿದ್ದಾರೆ. 

click me!