
ಮೂರೂವರೆ ವರ್ಷಗಳವರೆಗೆ ಜನರನ್ನು ರಂಜಿಸಿದ್ದ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಸಾಗಿದರೂ, ಇನ್ನೇನು ಮುಗಿಯತ್ತೆ ಎನ್ನುವಾಗಲೇ ಮತ್ತೊಂದಿಷ್ಟು ಕಥೆಯನ್ನು ಸೇರಿಸಿ ಸೀರಿಯಲ್ ಎಳೆದರೂ, ಕೊನೆಯವರೆಗೂ ಅದೇ ಖುಷಿ, ಅದೇ ಪ್ರೀತಿಯನ್ನು ಉಳಿಸಿಕೊಂಡಿರುವ ಕೆಲವೇ ಕೆಲವು ಸೀರಿಯಲ್ಗಳ ಪೈಕಿ ಅಮೃತಧಾರೆ ಸೀರಿಯಲ್ (Amruthadhaare Serial). ಸಾಮಾನ್ಯವಾಗಿ ಸೀರಿಯಲ್ ಆರಂಭದಲ್ಲಿ ಚೆನ್ನಾಗಿರುವ ಕಥೆಯ ಜೊತೆ ಶುರುವಾದರೂ, ಬರುಬರುತ್ತಾ ಅದನ್ನು ಎಳೆಯುವುದು ಹೆಚ್ಚಾದಂತೆ, ಅದು ತನ್ನ ಸೌಂದರ್ಯವನ್ನೇ ಕಳೆದುಕೊಂಡು ಬಿಡುತ್ತದೆ. ವೀಕ್ಷಕರಿಗೂ ಅದನ್ನು ನೋಡಲು ಬೋರ್ ಎನ್ನಿಸುವುದು ಇದೆ. ಆದರೆ ಅಮೃತಧಾರೆ ಮಟ್ಟಿಗೆ ಹೇಳುವುದಾದರೆ, ಹಾಗಾಗಲೇ ಇಲ್ಲ. ಅದರಲ್ಲಿಯೂ ಪೈಪೋಟಿಗೆ ಬಿದ್ದವರಂತೆ ಕಣ್ಣಿನಲ್ಲಿಯೇ ನಟಿಸುವ ನಾಯಕ ರಾಜೇಶ್ ನಟರಂಗ ಮತ್ತು ನಾಯಕಿ ಛಾಯಾ ಸಿಂಗ್ ಅವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ. ಇವರಿಬ್ಬರ ಜೋಡಿಯನ್ನು ಹಾಡಿ ಕೊಂಡಾಡಿದವರು ಅದೆಷ್ಟೋ ಮಂದಿ.
ಇದೀಗ ಎಲ್ಲದಕ್ಕೂ ಒಂದು ಅಂತ್ಯ ಎನ್ನುವಂತೆ ಕೊನೆಗೂ ಸೀರಿಯಲ್ ನಿಜಕ್ಕೂ ಮುಗಿಯುತ್ತಿದೆ. ಇದಾಗಲೇ ಸ್ಟೋರಿ ಏನಾಗಬಹುದು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೂ ಕೊನೆಯ ಕ್ಷಣದವರೆಗೂ ಸೀರಿಯಲ್ ರೋಚಕತೆ ಉಳಿಸಿಕೊಳ್ಳುತ್ತಿದೆ. ಇದರ ಶೂಟಿಂಗ್ ಮೊನ್ನೆ ಮುಗಿದಿದ್ದು, ಸೀರಿಯಲ್ಮುಗಿಯತ್ತೆ ಎಂದು ಖುದ್ದು ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ (Rajesh Nataranga) ಅವರು ಬಂದು ಹೇಳಿದ್ದರು. ಇದೀಗ ಸೀರಿಯಲ್ನ ಅಂತಿಮ ಅಧ್ಯಾಯ ಎಂದು ಪ್ರಮೋ ರಿಲೀಸ್ ಮಾಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೊಮೋದಲ್ಲಿ, ಅಂತಿಮ ಅಧ್ಯಾಯ ಎಂದು ಹೇಳಲಾಗಿದೆ. ಇದರಲ್ಲಿ ಇಡೀ ಮೂರೂವರೆ ವರ್ಷದ ಕಥೆಯನ್ನು ನಾಲ್ಕೈದು ಸೆಕೆಂಡ್ಗಳಲ್ಲಿ ತೋರಿಸಲಾಗಿದೆ. ಆರಂಭದಿಂದ ಈಗ ಈ ಸೀರಿಯಲ್ ಹೇಗೆ ಬಂದಿದೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ನಿಂತಿದೆ.
ಈ ಸೀರಿಯಲ್ ಮುಗಿಯುತ್ತದೆ ಎಂದು ವೀಕ್ಷಕರಿಗೆ ತಿಳಿದಿದ್ದರೂ, ಈ ಮೊದಲು ಅನೇಕ ಬಾರಿ ಅಂದುಕೊಂಡಂತೆಮತ್ತಷ್ಟು ಟ್ವಿಸ್ಟ್ ಸೇರಿಸುವ ಆಸೆ ಹಲವರಿಗೆ ಇತ್ತು. ಏಕೆಂದರೆ ಈ ಸೀರಿಯಲ್ ಅನ್ನು ಅಷ್ಟು ಪ್ರೀತಿಯಿಂದ ನೋಡುತ್ತಿದ್ದರು ವೀಕ್ಷಕರು. ಆದರೆ ಇದೀಗ ಖುದ್ದು ವಾಹಿನಿಯೇ ಅಂತಿಮ ಅಧ್ಯಾಯ ಎಂದು ತೋರಿಸಿ ಸೀರಿಯಲ್ ಪ್ರೊಮೋ ಬಿಡುಗಡೆ ಮಾಡಿದ್ದರಿಂದ ಈಗ ಸೀರಿಯಲ್ಮುಗಿಯುವುದು ಖಚಿತವಾಗಿ, ಹೀಗಾಗಬಾರದಿತ್ತು ಎಂದು ಅಭಿಮಾನಿಗಳು ನೋವು ತೋಡಿಕೊಳ್ಳುತ್ತಿದ್ದಾರೆ. ನಿಮ್ಮನ್ನು ತುಂಬಾಮಿಸ್ ಮಾಡಿಕೊಳ್ಳುತ್ತಿದ್ದೇವೆ, ಸೀರಿಯಲ್ಮುಗಿಯಬಾರದಿತ್ತು, ನೀವು ಸದಾ ನಮ್ಮ ಮನದಲ್ಲಿ ಇರುತ್ತೀರಿ, ಸೀರಿಯಲ್ ಅನ್ನು ಮತ್ತಷ್ಟು ತಿಂಗಳು ಮುಂದುವರೆಸಬಹುದಿತ್ತು, ಸೀರಿಯಲ್ಮುಗಿಯುತ್ತೆ ಎಂದರೆ ನಂಬಲು ಆಗುತ್ತಿಲ್ಲ, ಮಿಸ್ ಯು, ಮಿಸ್ ಯು ಎಂದೆಲ್ಲಾ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಒಂದು ಸೀರಿಯಲ್ ಅನ್ನು ಪ್ರೇಕ್ಷಕರು ಹೇಗೆ ಒಪ್ಪಿಕೊಳ್ಳುತ್ತಾರೆ, ಹೇಗೆ ಅದಕ್ಕೆ ಆಪ್ತರಾಗಿಬಿಡುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ಅಮೃತಧಾರೆ ಸೀರಿಯಲ್ ತನ್ನ ಅಧ್ಯಾಯ ಮುಗಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.