
ಬೆಂಗಳೂರು: ಅಮೃತಧಾರೆ ಸೀರಿಯಲ್ (Amruthadhaare Serial) ಜೈದೇವ್ ಉರ್ಫ್ ನಟ ರಾಣವ್ ಗೌಡ ಹಾಗೂ ಇದೇ ಸೀರಿಯಲ್ನ ಆರಂಭದಲ್ಲಿ ಮಲ್ಲಿಯಾಗಿ, ಕೊನೆಗೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ಭಾರ್ಗವಿಯಾಗಿ ನಟಿಸಿದ್ದ ನಟಿ ರಾಧಾ ಭಗವತಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನಲ್ಲಿ ಇವರಿಬ್ಬರ ಮದುವೆಯಾಗಿದೆ. ಈ ಮದುವೆಗೆ ಹಲವಾರು ತಾರೆಯರು ಬಂದು ಶುಭ ಕೋರಿದ್ದಾರೆ. ವಿವಿಧ ಸೀರಿಯಲ್ ನಟ-ನಟಿಯರು ಬಂದು ಆಶೀರ್ವದಿಸಿದ್ದಾರೆ. ಮದುವೆಯ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಎಲ್ಲರ ಗಮನ ಸೆಳೆದದ್ದು ತಾಳಿ ಕಟ್ಟುವ ಸಮಯದಲ್ಲಿ ನಟ ರಾಣವ್ ಗೌಡ (Ranav Gwoda) ಅವರು ಭಾವಿ ಪತ್ನಿಗೆ ತಾಳಿ ಕಟ್ಟಲಾ ಎಂದು ಪರ್ಮಿಷನ್ ಕೇಳಿರುವುದು. ಅದಕ್ಕೆ ನಟಿ, ಖುಷಿಯಿಂದ ನಗುತ್ತಾ ಕಣ್ಣು ಮಿಟುಕಿಸಿ ತಾಳಿ ಕಟ್ಟಲು ಅನುಮತಿ ನೀಡಿದ್ದಾರೆ. ಈ ಕ್ಯೂಟ್ ವಿಡಿಯೋಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮದುವೆ ಆಗುತ್ತಲೇ ಜೋಡಿ ಪ್ರೆಸ್ಮೀಸ್ ಮಾಡಿದೆ. ಮದುವೆಗೆ ಬಂದಿರುವ ಎಲ್ಲಾ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದ ಜೋಡಿ, ಒಳಗಡೆ ವಿಡಿಯೋ ಮಾಡಲು ಅವಕಾಶ ಕೊಡದಿದ್ದುದಕ್ಕೆ ಕ್ಷಮೆ ಕೋರಿದರು. ಇಲ್ಲಿಯವರೆಗೆ, ಮಾಧ್ಯಮದವರು ತುಂಬಾ ಸಪೋರ್ಟ್ ಮಾಡಿದ್ದೀರಿ. ಇನ್ನು ಮುಂದೆಯೂ ಸಪೋರ್ಟ್ ಮಾಡುತ್ತೀರಿ ಎಂದು ನಂಬುತ್ತೇವೆ. ನಿಮ್ಮ ಪ್ರೀತಿ ಹೀಗೆಯೇ ಇರಲಿ ಎಂದಿದೆ ಜೋಡಿ. ರಾಣವ್ ಅವರು, ಇಷ್ಟು ದಿನ ನಾವಿಬ್ಬರೂ ಜೈ-ಮಲ್ಲಿ ಆಗಿದ್ವಿ. ಈಗ ರಾಧಾ-ರಾಣವ್ ಆಗಿದ್ದೇವೆ. ನಮ್ಮ ಮದುವೆ ಆಗಿದೆ. ನೀವು ಬಂದು ಹಾರೈಸುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ರಾಧಾ-ರಾಣವ್ ಹೇಳಿದ್ದಾರೆ.
ಅಷ್ಟಕ್ಕೂ ಇವರ ಲವ್ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್ ಮಾಡಿದಾಗ, ರಾಣವ್ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್ ಆಯ್ತು, ಅವರ ಕ್ಯೂಟ್ನೆಸ್ ನನ್ನನ್ನ ಅಟ್ರ್ಯಾಕ್ಟ್ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್ ಫೀಲಿಂಗ್ಸ್ ಬಗ್ಗೆ ಹೇಳಿದ್ದಾರೆ.
ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್ ಆಗಿ ಬ್ಲ್ಯಾಂಕ್ ಆಗಿಬಿಟ್ಟೆ. ಅದು ನನಗೆ ಹರ್ಟ್ ಆಯ್ತು ಎಂದು ನಟಿ ಹೇಳಿದ್ದಾರೆ.ಅವರು ನನ್ನ ಪ್ರೀತಿಯನ್ನ ರಿಜೆಕ್ಟ್ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದಕ್ಕೆ ರಾಣವ್ ಅವರು, ಮೊದಲು ಪಾತ್ರದ ಪರಿಚಯ ಆಗಿತ್ತು ಬಿಟ್ರೆ, ನಮ್ಮಿಬ್ಬರ ವ್ಯಕ್ತಿತ್ವದ ಪರಿಚಯ ಅಗಿರ್ಲಿಲ್ಲ. ಅವರಿಗೆ ಯಾವಾಗ ನನ್ನ ವ್ಯಕ್ತಿತ್ವದ ಪರಿಚಯ ಆಯ್ತೋ ಅವರಿಗೆ ನನ್ನ ಮೇಲೆ ಆಸೆ ಆಗೋಕೆ ಶುರುವಾಯ್ತು. ಅವರ ವ್ಯಕ್ತಿತ್ವದ ಪರಿಚಯ ನನಗೆ ಆಗಿದ್ರೂ ಕೂಡ ನಾನು ಅದರ ಮೇಲೆ ಗಮನ ಕೊಟ್ಟಿರಲಿಲ್ಲ. ಬಹುಶಃ ಗಮನ ಕೊಟ್ಟಿದಿದ್ರೆ ನನಗೇ ಮೊದಲು ಇವರ ಮೇಲೆ ಫೀಲಿಂಗ್ಸ್ ಶುರುವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ನಿರ್ಧಾರ ಏಕಾಏಕಿ ತೆಗೆದುಕೊಳ್ಳುವುದು ಅಲ್ಲವಲ್ಲ ಎಂದಿದ್ದಾರೆ. ಆದಕ್ಕೆ ಅವರು ಪ್ರಪೋಸ್ ಮಾಡಿದಾಗ ನಾನು ಒಪ್ಪಿಕೊಂಡಿರಲಿಲ್ಲ. ಆದರೆ, ಈಕೆಯ ವ್ಯಕ್ತಿತ್ವ ಬದಲಾಗಲಿಲ್ಲ ಅನ್ನೋದು ಗೊತ್ತಾಯ್ತು. ಆಮೇಲೆ ನಾನೇ ಇದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. ಮುಂಚೆ ನನ್ನ ಜೊತೆಗೆ ಇವರ ಒಡನಾಟ ಹೇಗಿತ್ತೋ ಹಾಗೆ ಇತ್ತು. ಅದು ನನಗೆ ಇಷ್ಟ ಆಯ್ತು. ಅಲ್ಲಿಗೆ ನಮ್ಮ ಮದುವೆ ಫಿಕ್ಸ್ ಆಯ್ತು ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.