ಕೆಬಿಸಿಯಲ್ಲಿ ಕನ್ನಡದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದ ಸುಧಾಮೂರ್ತಿ | ಕೌದಿಯನ್ನು ಅಮಿತಾಬ್‌ಗೆ ಉಡುಗೊರೆಯಾಗಿ ಕೊಟ್ಟ ಸುಧಾಮೂರ್ತಿ |
ಮುಂಬೈ (ನ. 14): ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ, ಖ್ಯಾತ ಲೇಖಕಿ ಹಾಗೂ ಇಸ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದರು.
ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅಮಿತಾಭ್, ಸುಧಾ ಮೂರ್ತಿಯವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅದ್ಭುತ ಅನುಭವವಾಗಿತ್ತು. ನಿಜವಾಗಿಯೂ ಅವರಿಂದ ಪ್ರಭಾವಿತನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
undefined
ಇದೆ ವೇಳೆ ಸುಧಾಮೂರ್ತಿ, ತಮ್ಮ ಪ್ರತಿಷ್ಠಾನದ ಮೂಲದ ಹೊಸ ಬದುಕು ಕಟ್ಟಿಕೊಂಡಿರುವ ದೇವದಾಸಿಯರು ತಯಾರಿಸಿದ ಕೌದಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಇದು ಮರೆಯಲಾಗದ ಉಡುಗೊರೆ ಎಂದು ಹೇಳಿದ್ದಾರೆ.
ನಾನು ಕಳೆದ 23 ವರ್ಷಗಳಿಂದ ಇನ್ಫೋಸಿಸ್ ಫೌಂಡೇಶನ್ ಗಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಕೃತಿಕ ವಿಕೋಪ, ಸುನಾಮಿ, ಪ್ರವಾಹ, ಭೂಕುಸಿತ ಸಂಭವಿಸಿದಾಗ ಸಂತ್ರಸ್ತರಿಗಾಗಿ ಕೆಲಸ ಮಾಡಿದ್ದೇನೆ. ಮಕ್ಕಳಿಗಾಗಿ ನಮ್ಮ ಫೌಂಡೇಶನ್ ಕೆಲಸ ಮಾಡಿದೆ. ನಾವು ಶಾಲೆಗಳನ್ನು ಮಾಡಿದ್ದೇವೆ, ಆಸ್ಪತ್ರೆಗಳನ್ನು ಮಾಡಿದ್ದೇವೆ. ಮಧ್ಯಾಹ್ನದ ಊಟಗಳನ್ನು ಕೊಟ್ಟಿದ್ದೇವೆ. ಒಂದು ಲಕ್ಷ ಮಕ್ಕಳಿಗಾಗಿ ಅಡುಗೆ ತಯಾರಿಸಲು ಹೈದರಾಬಾದ್‌ನಲ್ಲಿ ದೊಡ್ಡ ಕಿಚನ್‌ವೊಂದನ್ನು ಮಾಡಿದ್ದೇವೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.