ಕೌನ್​ ಬನೇಗಾ ಕರೋಡ್​ಪತಿ ಶೂಟಿಂಗ್​ ವೇಳೆ ಜಾರಿಬಿದ್ದ ಅಮಿತಾಭ್ ಬಚ್ಚನ್​: ಈಗ ಹೇಗಿದ್ದಾರೆ ಬಿಗ್​ ಬಿ

Published : Oct 01, 2026, 10:14 PM IST
Amitabh Bachchan

ಸಾರಾಂಶ

ಕೌನ್ ಬನೇಗಾ ಕರೋಡ್‌ಪತಿ 18ರ ಚಿತ್ರೀಕರಣದ ವೇಳೆ ನಟ ಅಮಿತಾಭ್ ಬಚ್ಚನ್ ಆಕಸ್ಮಿಕವಾಗಿ ಜಾರಿ ಬಿದ್ದು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಗಾಯದ ನಡುವೆಯೂ ಅವರು ಕುಳಿತುಕೊಂಡೇ ಶೋ ನಡೆಸಿಕೊಡುವ ಮೂಲಕ ತಮ್ಮ ವೃತ್ತಿಪರತೆ ಮೆರೆದಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೌನ್​ ಬನೇಗಾ ಕರೋಡ್​ಪತಿ (Kaun Banega Crorepati) ಇದೀಗ 18ನೇ ಸೀಸನ್​ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್​ ಬಚ್ಚನ್​ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್​ ಸೀಟ್​ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ. ಅಂದಹಾಗೆ ಅಮಿತಾಭ್​ ಅವರಿಗೆ ಈಗ 83 ವರ್ಷ ವಯಸ್ಸು. ಇದರ ಹೊರತಾಗಿಯೂ ಅದೇ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಕೌನ್​ ಬನೇಗಾ ಕರೋರ್​ಪತಿಯಲ್ಲಿಯೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಸಾಕಷ್ಟು ಫನ್ನಿ ಸನ್ನಿವೇಶಗಳನ್ನೂ ಈ ಷೋನಲ್ಲಿ ನಟ ಸೃಷ್ಟಿಸುತ್ತಾರೆ.

ಆದರೆ ಕಳೆದ ಸಂಚಿಕೆಯಲ್ಲಿ ಶಾಕಿಂಗ್​ ವಿಷ್ಯವೊಂದನ್ನು ನಟ ತಿಳಿಸಿದರು. ಅದು ಕೌನ್ ಬನೇಗಾ ಕರೋಡ್‌ಪತಿ-18 (KBC 18) ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಬಾ ಆಕಸ್ಮಿಕವಾಗಿ ಜಾರಿ ಬಿದ್ದು ತಮ್ಮ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ಬಗ್ಗೆ. ಮುಂದಿನ ಷೋಗೆ ಕುಂಟುತ್ತಾ ಬಂದಿದ್ದ ನಟ ಈ ವಿಷಯ ತಿಳಿಸಿದಾಗ ಎಲ್ಲರೂ ದಿಗ್ಭ್ರಮೆಗೊಂಡರು. ಆದರೆ, ಸದ್ಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸ್ವತಃ ಬಿಗ್ ಬಿ ಅವರೇ ಸ್ಪಷ್ಟಪಡಿಸಿದ್ದಾರೆ.

ಶೂಟಿಂಗ್​ ವೇಳೆ ಏನಾಯ್ತು

ಇತ್ತೀಚಿನ ಕೆಬಿಸಿ ಸಂಚಿಕೆಯ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಅವರು ಸೆಟ್‌ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಎಡ ಮೊಣಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಸಾಮಾನ್ಯವಾಗಿ ಕೆಬಿಸಿ ಶೋ ಆರಂಭದಲ್ಲಿ ಬಿಗ್ ಬಿ ಅವರು ವೇದಿಕೆಯ ಮಧ್ಯದಲ್ಲಿ ಅತ್ಯಂತ ಉತ್ಸಾಹದಿಂದ ನಿಂತುಕೊಂಡು ತಮ್ಮ ಆರಂಭಿಕ ಭಾಷಣ ಪ್ರಸ್ತುತಪಡಿಸುತ್ತಾರೆ. ಆದರೆ, ಗಾಯದ ಕಾರಣದಿಂದಾಗಿ ಅವರು ಈ ಬಾರಿ ಎಂದಿನಂತೆ ನಿಲ್ಲಲು ಸಾಧ್ಯವಾಗದೆ, ಗೇಮ್ ಪೋಡಿಯಂನಲ್ಲಿ ಕುಳಿತುಕೊಂಡೇ ಶೋ ಆರಂಭಿಸಿದರು.

ನಾನು ಜಾರಿ ಬಿದ್ದೆ

ಪ್ರೇಕ್ಷಕರಿಗೆ ಶೋನಲ್ಲೇ ಈ ಬಗ್ಗೆ ಮಾಹಿತಿ ನೀಡಿದ ಬಿಗ್ ಬಿ, "ನಿನ್ನೆ ಶೂಟಿಂಗ್ ಮಾಡುವಾಗ ನಾನು ಜಾರಿ ಬಿದ್ದೆ, ಇದರಿಂದ ನನ್ನ ಎಡ ಮೊಣಕಾಲಿಗೆ ಪೆಟ್ಟಾಗಿದೆ. ಸದ್ಯಕ್ಕೆ ಹೆಚ್ಚು ಹೊತ್ತು ನಿಲ್ಲಲು ಕಷ್ಟವಾಗುತ್ತಿದೆ, ಹಾಗಾಗಿ ಇಂದು ಕುಳಿತುಕೊಂಡೇ ಮಾತನಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ. ತದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 83 ವರ್ಷದ ಅಮಿತಾಭ್ ಬಚ್ಚನ್ ಅವರು ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದು, "ಇದು ಸಣ್ಣ ಗಾಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ, ನಾನು ಚೇತರಿಸಿಕೊಳ್ಳುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಗಾಯದ ನಡುವೆಯೂ ಅವರು ಕೆಬಿಸಿ ಶೋ ಚಿತ್ರೀಕರಣವನ್ನು ನಿಲ್ಲಿಸದೆ ನಿಗದಿತ ವೇಳಾಪಟ್ಟಿಯಂತೆಯೇ ಮುಂದುವರಿಸಿದ್ದಾರೆ.

ಇನ್ನು ಅಮಿತಾಭ್​ ಅವರ ಕೆಲಸದ ಕುರಿತು ಹೇಳುವುದಾದರೆ, ಅವರು, ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಅವರು ಶೀಘ್ರದಲ್ಲೇ ರಿಭು ದಾಸ್‌ಗುಪ್ತ ನಿರ್ದೇಶನದ ಕೋರ್ಟ್ ರೂಮ್ ಡ್ರಾಮಾ ಚಿತ್ರ 'ಸೆಕ್ಷನ್ 84' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಡಯಾನಾ ಪೆಂಟಿ, ನಿಮ್ರತ್ ಕೌರ್ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್‌ನಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನೀ ಹಂಗ ನೋಡಬ್ಯಾಡ ನನ್ನ..' ಎಂದಿದ್ದ ರಾಜ್‌ಕುಮಾರ್ ಭಾರತಿ ಈಗ್ಯಾಕೆ ಹಾಡುತ್ತಿಲ್ಲ? ಈಗೆಲ್ಲಿದಾರೆ, ಏನ್ ಮಾಡ್ತಿದ್ದಾರೆ?
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್‌ ಕಣ್ಣೀರು