'ನೀ ಹಂಗ ನೋಡಬ್ಯಾಡ ನನ್ನ..' ಎಂದಿದ್ದ ರಾಜ್‌ಕುಮಾರ್ ಭಾರತಿ ಈಗ್ಯಾಕೆ ಹಾಡುತ್ತಿಲ್ಲ? ಈಗೆಲ್ಲಿದಾರೆ, ಏನ್ ಮಾಡ್ತಿದ್ದಾರೆ?

Published : Oct 01, 2026, 09:28 PM IST
Rajkumar Bharathi

ಸಾರಾಂಶ

'ರಾಜ್‌ಕುಮಾರ್ ಭಾರತಿ'.. ಈ ಹೆಸರು ಕೇಳಿದಾಕ್ಷಣ ಕನ್ನಡಿಗರಿಗೆ ಒಂದು ಕಾಲದ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಕರ್ನಾಟಕ ರತ್ನ ಡಾ ರಾಜ್‌ಕುಮಾರ್ ಹಾಗೂ ನಟಿ ಭಾರತಿ ಅವರ ನೆನಪು ಬರುವುದು ಸಹಜ.. ಆದರೆ, ಇಲ್ಲಿ ಹೇಳಹೊರಟಿರುವುದು ಯಾವ ರಾಜ್‌ಕುಮಾರ್ ಭಾರತಿ ಬಗ್ಗೆ? ಈ ಸ್ಟೋರಿ ನೋಡಿ..

ಇದು ರಾಜ್‌ಕುಮಾರ್ ಭಾರತಿ ಕಥೆ.. ಈಗೆಲ್ಲಿದ್ದಾರೆ ರಾಜ್‌ಕುಮಾರ್ ಭಾರತಿ? ಏನಾಗಿದೆ ಅವರಿಗೆ? ಏಕೆ ಹಾಡುತ್ತಿಲ್ಲ? ನೋಡಿ..

'ರಾಜ್‌ಕುಮಾರ್ ಭಾರತಿ'.. ಈ ಹೆಸರು ಕೇಳಿದಾಕ್ಷಣ ಕನ್ನಡಿಗರಿಗೆ ಒಂದು ಕಾಲದ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಕರ್ನಾಟಕ ರತ್ನ ಡಾ ರಾಜ್‌ಕುಮಾರ್ ಹಾಗೂ ನಟಿ ಭಾರತಿ ಅವರ ನೆನಪು ಬರುವುದು ಸಹಜ.. ಆದರೆ, ಇಲ್ಲಿ ಹೇಳಹೊರಟಿರುವುದು ನಟ ಡಾ ರಾಜ್‌ಕುಮಾರ್ ಹಾಗೂ ನಟಿ ಭಾರತಿ ಅವರ ಬಗ್ಗೆ ಅಲ್ಲವೇ ಅಲ್ಲ, ಗಾಯಕ ರಾಜ್‌ಕುಮಾರ್ ಭಾರತಿ (Rajkumar Bharathi) ಬಗ್ಗೆ...

ಹೌದು, ಸಾಕಷ್ಟು ವರ್ಷಗಳ ಹಿಂದೆ, ರೇಡಿಯೋಗಳಲ್ಲಿ ಹಾಗೂ ಟೇಪ್‌ ರೆಕಾರ್ಡ್‌ಗಳಲ್ಲಿ ಕೇಳಿಬರುತ್ತಿದ್ದ 'ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ.., ಸಾಗರದಾ ಕನ್ನಿಕೆಯೂ ಒಲಿದೂ ಬಂದಳೂ, ಚೆಲುವಾ ಚೆಲ್ಲುತಾ ಎದುರೂ ನಿಂತಳು, ಕಣ್ಣೆದುರು ನಿಂತಳು.., 'ಮುತ್ತೋ ಮುತ್ತು ಸಿಹಿ ಮುತ್ತೋ ಮುತ್ತು, ನೀಡು.., ನೀ ಹೀಂಗ ನೋಡಬ್ಯಾಡ ನನ್ನ.., ಭೂಮಿತಾಯಾಣೆ ನೀ ಇಷ್ಟ ಕಣೇ.., ಮರೆಯೇಕೆ ಸೌಂದರ್ಯಕೆ?.., ಪ್ರಣಯ ಗೀತೆಯ ಹಾಡಿದೆ ಮನಸು.., ಸತ್ಯಂ ಶಿವಂ.. ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೊಡ್ಡದಾಗುತ್ತ ಹೋಗುವ ಹಾಡುಗಳ ಸರದಾರ ಈ ರಾಜ್‌ಕುಮಾರ್ ಭಾರತಿ!

ರಾಜ್‌ಕುಮಾರ್ ಭಾರತಿ ಹುಟ್ಟಿದ್ದು 24 ಜೂನ್ 1958ರಲ್ಲಿ ತಮಿಳುನಾಡಿನಲ್ಲಿ. ಅಲ್ಲಿನ ಮಹಾಕವಿ ಸುಬ್ರಹ್ಮಣ್ಯ ಭಾರತಿ ಮರಿ ಮೊಮ್ಮಗ ಈ ರಾಜ್‌ಕುಮಾರ್ ಭಾರತಿ. ಮನೆಯಲ್ಲಿ ಸಂಗೀತ ಸಾಹಿತ್ಯದ ವಾತಾವರಣ ಇದ್ದ ಕುಟುಂಬದಲ್ಲಿ ಜನಿಸಿದ ರಾಜ್‌ಕುಮಾರ್ ಭಾರತಿ ಅವರಿಗೆ, ಅವರ ತಾಯಿ ಲಲಿತಾ ಭಾರತಿಯವರು 5ನೇ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಶುರು ಮಾಡಿದ್ದರು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅತ್ಯಂತ ಕಠಿಣವಾದ ಸ್ವರಗಳು ಹಾಗೂ ರಾಗಗಳನ್ನು ಲೀಲಾಜಾಲವಾಗಿ ಹಾಡುತ್ತಿದ್ದರಂತೆ ಈ ರಾಜ್‌ಕುಮಾರ್ ಭಾರತಿಯವರು!

ಬಳಿಕ, ಸಂಗೀತಾಭ್ಯಾಸದ ಜೊತೆಜೊತೆಗೇ ಚೆನ್ನೈನಲ್ಲಿ ಇಂಜಿನಿಯರಿಂಗ್ ಪದವೀಧರರಾಗಿ ಕೆಲಸಕ್ಕೆ ಸೇರಿಕೊಂಡರು. ಕೆಲಸದ ಮೇಲಿನ ಆಸಕ್ತಿಗಿಂತ ಸಂಗೀತದ ಮೇಲಿನ ಒಲವು, ಶ್ರದ್ಧೆಯೇ ಹೆಚ್ಚಾಗಿದ್ದ ರಾಜ್‌ಕುಮಾರ್ ಭಾರತಿಯವರಿಗೆ ಆಗಲೇ ಶುರುವಾಗಿದ್ದು ಸಂಗೀತಾಭ್ಯಾಸಕ್ಕೆ ಸಮಸ್ಯೆ.

ಆಗ ಅವರ ಸಂಗೀತದ ಗುರುಗಳ ಸಲಹೆಯ ಮೇರೆಗೆ, ಮಾಡುತ್ತಿದ್ದ ಕೆಲಸ ಬಿಟ್ಟು ಸಂಪೂರ್ಣವಾಗಿ ಸಂಗೀತಾಭ್ಯಾಸಕ್ಕೆ, ಶಾಸ್ತ್ರೀಯ ಸಂಗೀತ ಕಲಿಕೆಗೆ ಹಾಗೂ ಸಿನಿಮಾ ಹಾಡಗಳಿಗೆ ತಮ್ಮನ್ನು ಸಮರ್ಪಿಸಿಕೊಂಡರಂತೆ ಈ ಗಾಯಕ ರಾಜ್‌ಕುಮಾರ್ ಭಾರತಿ. ಸಿನಿಮಾ ಹಾಡುಗಳನ್ನು ಹಾಡುವುದದ ಜೊತೆಗೆ, ಶಾಸ್ತ್ರೀಯ ಸಂಗೀತ ಕಚೇರಿ ಕೋಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಜ್‌ಕುಮಾರ್ ಭಾರತಿಯವರು ಆಗ ಅಪಾರ ಜನಪ್ರಿಯತೆ ಪಡೆದರು.

ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದ ಗಾಯಕ ರಾಜ್‌ಕುಮಾರ್ ಭಾರತಿ ಅವರು, ದಾಸರ ಪದಗಳನ್ನು, ಅದರಲ್ಲೂ ಮುಖ್ಯವಾಗಿ ಕನ್ನಡದ ದಾಸರ ಪದಗಳನ್ನು ಹಾಡಿ ಕರ್ನಾಟಕದಲ್ಲೂ ಭಾರೀ ಜನಪ್ರಿಯತೆ ಪಡೆದಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು..

2001-2002 ರಲ್ಲಿ, ಅವರಿಗೆ ಸುಮಾರು 42 ರಿಂದ 43 ವಯಸ್ಸಿನಲ್ಲಿದ್ದಾಗ ಒಮ್ಮೆ ಸಂಗೀತ ಕಚೇರಿಯಲ್ಲಿ ಹಾಡುತ್ತಿರುವಾಗಲೇ ಹಾಡೋದಕ್ಕೆ ತೊಂದರೆ ಆಯಿತಂತೆ. ಧ್ವನಿ ಪೆಟ್ಟಿಗೆಯ ಸ್ನಾಯು ಸೆಳೆತ ಅಂದ್ರೆ ಡಿಸ್ಫೋನಿಯಾ (Dysphonia) ಕಾಯಿಲೆಗೆ ತುತ್ತಾದ ಅವರಿಗೆ, ಚಿಕಿತ್ಸೆಯ ಬಳಿಕವೂ ಮತ್ತೆ ಮೊದಲಿನಂತೆ ಹಾಡಲು ಸಾಧ್ಯವಾಗಲೇ ಇಲ್ಲ. ಈ ಕಾರಣಕ್ಕೆ ಗಾಯಕ ರಾಜ್‌ಕುಮಾರ್ ಭಾರತಿಯವರು ಸಿನಿಮಾ ಹಾಡುಗಳು, ಕ್ಲಾಸಿಕಲ್ ಸಂಗೋತ ಕಚೇರಿ ಸೇರಿದಂತೆ ಎಲ್ಲಾ ರೀತಿಯ ಹಾಡುಗಾರಿಕೆಯನ್ನು ಬಿಟ್ಟುಬಿಟ್ಟರು.

ಆದರೆ, ಅವರು ಮುಂದೆ ಗಾಯಕರಾಗಿ ಹಾಡಲು ಸಾಧ್ಯವಾಗದಿದ್ದರೂ ಸಂಗೀತ ಸಂಯೋಜಕರಾಗಿ ಈಗಲೂ ಕೆಲಸ ಮಾಡುತ್ತಿದ್ದಾರೆ. ಅದು ತಕ್ಕಮಟ್ಟಿಗೆ ಖುಷಿ ಕೊಡುವ ಸಂಗತಿಯೇ ಸರಿ. ಸಿನಿಮಾಗೆ ಸಂಗೀತ ಸಂಯೋಜನೆ, ಭರತನಾಟ್ಯ ಗೀತೆಗಳಿಗೆ ಸಂಗೀತ ಸಂಯೋಜನೆ ಸೇರಿದಂತೆ ಸಂಗೀತ ಕ್ಷೇತ್ರದಲ್ಲೇ ತಮ್ಮ ಜೀವನವನ್ನು ಮುಂದುವರೆಸಿದ್ದಾರೆ. ಆ ದುರಂತ ಘಟನೆ ಬಳಿಕ, ಗಾಯಕರಾಗಿ ಸಾಧ್ಯವಾಗದಿದ್ದರೂ, ರಾಜ್ಸಂ‌ಕುಮಾರ್ ಭಾರತಿಯವರು ತಮ್ಮ ಸಂಗೀತ ಸೇವೆಯನ್ನು ಮುಂದುವರಿಸಿರುವುದು ಅವರ ಅಭಿಮಾನಿಗಳಿಗೆ ತಲ್ಲಮಟ್ಟಿಗೆ ಖುಷಿ ಕೊಡುತ್ತಿರುವ ಸಂಗತಿ ಎನ್ನಬಹುದು.

ರಾಜ್‌ಕುಮಾರ್ ಭಾರತಿ ಸಂಗೀತ ಸೇವೆ:-

* ರಾಜ್‌ಕುಮಾರ್ ಭಾರತಿ ಅವರು ಕರ್ನಾಟಕದಾದ್ಯಂತ ದಾಸರ ಪದಗಳನ್ನು ತಮ್ಮದೇ ಆದ ಸುಂದರ ಶೈಲಿಯಲ್ಲಿ ಹಾಡಿ ಅಪಾರ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಜನಪ್ರಿಯತೆ ಗಳಿಸಿದ್ದಾರೆ.

* ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲದೆ, ನೃತ್ಯ ರೂಪಕಗಳಿಗೆ ಮತ್ತು ಚಲನಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.

*ಪರಮೇಶಿ ಪ್ರೇಮ ಪ್ರಸಂಗ, ವಿಜಯೋತ್ಸವ, ಗುರುಭಕ್ತಿ, ಅಂತರಾಳ, ಪ್ರೇಮತರಂಗ, ತಾಯಿಯ ಹೊಣೆ ಸೇರಿದಂತೆ ಕನ್ನಡದ ಹಲವು ಚಿತ್ರಗಳ ಹಾಡುಗಳನ್ನು ಹಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಜೈಲರ್ 2’ನಲ್ಲಿ ರಜನಿಕಾಂತ್ ಜೊತೆ ಶಿವಣ್ಣನ ಪಾತ್ರಕ್ಕೆ ಹೆಚ್ಚಾಯ್ತು ಸ್ಕ್ರೀನ್ ಟೈಮ್: ಅಸಲಿ ವಿಚಾರವೇನು?
ಸ್ಟಾರ್‌ ವಾರ್ಸ್‌ ನೋಡಲು ತೆರಳಿದ್ದ ಮುನ್ನಾಭಾಯ್‌ ಸಿನಿಮಾ ನಟ ವಿಶಾಲ್‌ ಠಕ್ಕರ್ 10 ವರ್ಷಗಳಿಂದ ನಾಪತ್ತೆ, ಇಂದಿಗೂ ಸುಳಿವಿಲ್ಲ