
ನಟಿ ಅಮೀಶಾ ಪಟೇಲ್, ಬಾಲಿವುಡ್‌ನ ಯುವ ಪೀಳಿಗೆಯ ನಟಿಯರ ವಿರುದ್ಧ ಮತ್ತು ಚಿತ್ರರಂಗದಲ್ಲಿನ 'ಫೇಕ್ ಪಿಆರ್ ಗೇಮ್' ಬಗ್ಗೆ ಗರಂ ಆಗಿದ್ದಾರೆ. 'ಗದರ್' ಖ್ಯಾತಿಯ ಈ ನಟಿ, ತಮ್ಮ ಎಕ್ಸ್ (X) ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡ ಬಾಕ್ಸ್ ಆಫೀಸ್ ಯಶಸ್ಸು ಇಲ್ಲದಿದ್ದರೂ, ಕೆಲ ನಟಿಯರು ತಮ್ಮ ಪಿಆರ್ ತಂಡಗಳಿಗೆ ಹಣ ಕೊಟ್ಟು 'ನಂಬರ್ ಒನ್' ಮತ್ತು 'ಸೂಪರ್‌ಸ್ಟಾರ್' ಇಮೇಜ್ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಅಮೀಶಾ ಅವರ ಖಾರದ ಪೋಸ್ಟ್‌ಗಳು
ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ನೀಡದೆಯೇ ತಮ್ಮನ್ನು ತಾವೇ ಟಾಪ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟಿಯರನ್ನು ಅಮೀಶಾ ಪ್ರಶ್ನಿಸಿದ್ದಾರೆ. ಬಾಲಿವುಡ್‌ನ 'ನಂ. 1 ಮತ್ತು ನಂ. 2' ರೇಸ್ ಬಗ್ಗೆ ವ್ಯಂಗ್ಯವಾಡಿದ ಅವರು, "ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಸಿನಿಮಾ 200 ಕೋಟಿ ರೂ.ಗಿಂತ ಹೆಚ್ಚು ಗಳಿಸದ ಹೆಚ್ಚಿನ ನಟಿಯರು, ತಮ್ಮನ್ನು ನಂ. 1 ಮತ್ತು ನಂ. 2 ಎಂದು ಕರೆಸಿಕೊಳ್ಳಲು ಪಿಆರ್ ತಂಡಗಳಿಗೆ ಹಣ ಕೊಡುತ್ತಿದ್ದಾರೆ. ನಿಜವಾಗ್ಲೂ? ಇದು 2026, 2000 ಇಸವಿ ಅಲ್ಲ. ಇವತ್ತು 100 ಕೋಟಿ ಅನ್ನೋದು ದೊಡ್ಡ ವಿಷಯವೇ ಅಲ್ಲ," ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, "ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸುವಂತಹ ಅಥವಾ ಅಲ್ಲೋಲ ಕಲ್ಲೋಲ ಎಬ್ಬಿಸುವಂತಹ ಕೆಲಸ ಮಾಡಿದ್ರೆ ಮಾತ್ರ ನಿಮ್ಮನ್ನು ಸೂಪರ್‌ಸ್ಟಾರ್ ಎಂದು ಕರೆದುಕೊಳ್ಳಿ. ಅಲ್ಲಿಯವರೆಗೂ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳಲು ಪಿಆರ್ ಗೇಮ್ ಆಡುವುದನ್ನು ನಿಲ್ಲಿಸಿ. ಕ್ಷಮಿಸಿ, ಆದರೆ ಇದೇ ಕಠೋರ ಸತ್ಯ," ಎಂದು ಹೇಳಿದ್ದಾರೆ.
ಅವರ ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಬಾಲಿವುಡ್ ಪಿಆರ್ ಸಂಸ್ಕೃತಿ ಮತ್ತು ಆನ್‌ಲೈನ್ ಟೀಕೆಗಳ ಬಗ್ಗೆ ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಮೀಶಾ ಇತ್ತೀಚೆಗೆ ಬ್ಲಾಕ್‌ಬಸ್ಟರ್ ಚಿತ್ರ 'ಗದರ್ 2' ನಲ್ಲಿ ಸನ್ನಿ ಡಿಯೋಲ್ ಜೊತೆ ಸಕೀನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಆ ವರ್ಷದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಂದಾಗಿತ್ತು ಮತ್ತು ಹಲವು ವರ್ಷಗಳ ನಂತರ ಅಮೀಶಾ ಅವರ ಕಮ್‌ಬ್ಯಾಕ್ ಚಿತ್ರವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.